ಚಿಕ್ಕಮಗಳೂರು, – ಕಂದಾಯ ಭೂಮಿಯನ್ನು ಒತ್ತುವರಿಗೊಳಿಸಿ ಸಾಗುವಳಿ ಮಾಡಿರು ವ ಜಮೀನನ್ನು ಮಂಜೂರಾತಿ ಮಾಡಿಕೊಡಬೇಕು ಎಂದು ದಲಿತ ಸಂಘರ್ಷ ಸಮಿತಿ ಮುಖಂಡರುಗಳು ಸೋಮವಾರ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಬಾಲಕೃಷ್ಣ ಬಿಳೇಕಲ್ಲು ಕಳಸ ಹೋಬಳಿಯ ತನುಡಿ ಗ್ರಾಮದ ಸ.ನಂ.೩೬ರಲ್ಲಿ ೩೪ ಕುಟುಂಬಗಳು ಸರ್ಕಾರಿ ಜಮೀನನ್ನು ಮೂರು ತಲೆಮಾರಿನಿಂದಲೂ ಕಾಫಿ, ಮೆಣಸು, ತೆಂಗು ಹಾಗೂ ಬಾಳೆ ಬೆಳೆಗಳನ್ನು ಸಾಗುವಳಿ ಮಾಡಿಕೊಂಡು ಜೀವನ ಸುಧಾರಣೆಗೆ ಬಳ ಸಿಕೊಂಡಿದ್ದಾರೆ ಎಂದರು.
ಸ್ವಾಧೀನಾನುಭವದಲ್ಲಿರುವ ಜಮೀನು ಮಂಜೂರಾತಿ ಕೋರಿ ಹಿಂದೆ ನಮೂನೆ ನಂ.೫೦, ೫೩ರಲ್ಲಿ ಅ ರ್ಜಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಭೂ ಮಂಜೂರಾತಿ, ಹಕ್ಕುಪತ್ರ, ಸಾಗುವಳಿ ಚೀಟಿ ನೀಡಿರುವು ದಿಲ್ಲ. ಈ ಕುಟುಂಬಗಳು ವಾಸದ ಮನೆ ನಿರ್ಮಿಸಿಕೊಂಡು ಸಂಸಾರ ನಡೆಸುತ್ತಿದ್ದು ಈ ಜಮೀನು ಹೊರ ತಾಗಿ ಯಾವುದೇ ಆಸ್ತಿ ಇರುವುದಿಲ್ಲ ಎಂದು ಹೇಳಿದರು.
ಅರಣ್ಯ ಇಲಾಖೆಯಿಂದ ರೆವಿನ್ಯೂ ಇಲಾಖೆಗೆ ೮೦೦ ಎಕರೆ ಪ್ರದೇಶವನ್ನು ಹಸ್ತಾಂತರಿಸಿದೆ. ಆ ಪ್ರದೇಶ ದ ಕುಟುಂಬಗಳಿಗೆ ಜಮೀನನ್ನು ವಿಲೇವಾರಿ ಮಾಡಿರುತ್ತಾರೆ. ಆದರೆ ಗೋಮಾಳ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡಿರುವ ಕೃಷಿ ಜಮೀನಿಗೆ ಅರ್ಜಿ ಸಲ್ಲಿಸಿದ್ದು ಇದುವರೆಗೂ ಮಂಜೂರಾತಿ ದೊರೆತಿಲ್ಲ ಎಂದು ತಿಳಿಸಿದರು.

1998 ಹಾಗೂ 2000 ನೇ ಇಸವಿಯಲ್ಲಿ ಪುನಃ ಅರ್ಜಿಯನ್ನು ಸಲ್ಲಿಸಿದರೂ ಪರಿಗಣೆಗೆ ತಗೆದುಕೊಳ್ಳ ದೇ ೨೦೦೧ರಲ್ಲಿ ಮತ್ತೆ ಅರಣ್ಯ ಪ್ರದೇಶವೆಂದು ಘೋಷಣೆೆ ಮಾಡಿರುತ್ತಾರೆ. ಹೀಗಾಗಿ ಸ್ವಾಧೀನ ಮತ್ತು ಸಾಗು ವಳಿ ಅನುಭವದಲ್ಲಿರುವ ಜಾಗವನ್ನು ಮಂಜೂರಾತಿದಾರರ ಹೆಸರಿಗೆ ಖಾತೆ ಮಾಡುವ ಮೂಲಕ ಮುಂದಿನ ವ್ಯವಹಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಸಂಸ ಕಳಸ ತಾಲ್ಲೂಕು ಸಂಚಾಲಕ ವಸಂತ್, ಮುಖಂಡರುಗಳಾದ ಪ್ರಸಾದ್, ಗೀತಾ, ರಾಜೇಶ್ ಮತ್ತಿತರರಿದ್ದರು.
- ಸುರೇಶ್ ಎನ್.