ಚಿಕ್ಕಮಗಳೂರು-ಜಾನಪದ-ಸಂಸ್ಕೃತಿ-ಗ್ರಾಮೀಣ-ಭಾಗದ-ಪ್ರತೀತಿ -ಜಿಲ್ಲಾ-ಕನ್ನಡ-ಸಾಹಿತ್ಯ-ಪರಿಷತ್-ಅಧ್ಯಕ್ಷ-ಸೂರಿ-ಶ್ರೀನಿವಾಸ್

ಚಿಕ್ಕಮಗಳೂರು– ಶಾಲಾಮಕ್ಕಳಿಗೆ ಪದ್ಯಗಳ ಕಲಿಕೆಯೊಟ್ಟಿಗೆ ಜಾನಪದ ಸೊಗಡಿನ ಗೀತೆ ಗಳನ್ನು ಶಿಕ್ಷಕರು ರೂಢಿಸಿದರೆ, ಭವಿಷ್ಯದಲ್ಲಿ ಜಾನಪದ ಸಂಸ್ಕೃತಿ ಬೆಳವಣಿಗೆಯತ್ತ ಕೊಂಡೊಯ್ಯಲು ಸಾಧ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.


ತಾಲ್ಲೂಕಿನ ಮುಗುಳುವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಾನಪದ ಯುವ ಬ್ರಿಗೇಡ್ ಜಿಲ್ಲಾ ಘಟಕದಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ಧ ಜಾನಪದ ಕಲೆಗಳ ಉಚಿತ ತರಬೇತಿ ಶಿಬಿರದ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


ಅನಕ್ಷರಸ್ಥರತೆ ಕಾಲಘಟ್ಟದಲ್ಲಿ ನಮ್ಮ ಪೂರ್ವಿಕರು ಕಾಯಕದ ಪರಿಶ್ರಮ ಮರೆಯಲು ಹಾಗೂ ಸಮ ಯ ಮುಂದೂಡಲು ಜಾನಪದ ಗೀತೆಗಳನ್ನು ಹಾಡಲಾಗುತ್ತಿತ್ತು. ತದನಂತರ ಬಾಯಿಂದ, ಬಾಯಿಗೆ ಹರಡು ವ ಮೂಲಕ ಜಾನಪದ ಗೀತೆಗಳು ಪ್ರಸಿದ್ಧಿ ಹೊಂದಿ ಸ್ಥಾನಮಾನ ದೊರೆಯಲು ಪೂರ್ವಿಕರ ಶ್ರಮವೇ ನೇರ ಕಾರಣ ಎಂದರು.


ಜಾನಪದ ಗೀತೆಗಳಿಗೆ ಹಿಂದಿನ ಕಾಲದಲ್ಲಿ ಅಕ್ಷರವಿರಲಿಲ್ಲ. ಕೇವಲ ಆಡುಭಾಷೆಯಲ್ಲೇ ಗೀತೆಗಳಿತ್ತು. ಇಂದಿಗೂ ಚಿತ್ರದುರ್ಗ ಜಿಲ್ಲೆಯ ವೃದ್ದೆರೊಬ್ಬರು ಕಂಠದಲ್ಲಿ ಸಾವಿರಕ್ಕೂ ಹೆಚ್ಚು ಜಾನಪದ ಗೀತೆಗಳು ಆಳವಾಗಿ ನೆಲೆಸಿರುವುದು ಸಾಮಾನ್ಯ ವಿಚಾರವಲ್ಲ. ಹೀಗಾಗಿ ಜಾನಪದ ಸಂಪ್ರದಾಯ ಅಳಿಯದಂತೆ ಕಾಪಾಡಬೇ ಕು ಎಂದು ಹೇಳಿದರು.


ಈಗ ಹಿಂದೆ ವೀರಗಾಸೆ, ಕೋಲಾಟ, ಗಿಲ್ಲಿದಾಂಡು, ಕುಂಟೆಪಿಲ್ಲೇ, ಲಗೋರಿ ಆಟೋಟಗಳು ಜಾನಪದ ಪ್ರಕಾರದ ಒಂದು ಭಾಗ ಹಾಗೂ ಗ್ರಾಮೀಣ ಸಂಸ್ಕೃತಿಯ ಪ್ರತೀತಿ. ಆ ನಿಟ್ಟಿನಲ್ಲಿ ಇಂದಿನ ಮಕ್ಕಳಿಗೆ ಪುರಾ ತನ ಆಟೋಟ ಚಟುವಟಿಕೆ ಹಾಗೂ ಜಾನಪದ ಗೀತೆಗಳನ್ನು ಪರಿಚಯಿಸಿದರೆ ಮುಂದಿನ ಯುವಪೀಳಿಗೆಗೆ ಜಾನಪದ ಸಂಪತ್ತು ಕೊಂಡೊಯ್ಯಲು ಸಾಧ್ಯ ಎಂದು ತಿಳಿಸಿದರು.


ಕಜಾಪ ತಾಲ್ಲೂಕು ಅಧ್ಯಕ್ಷ ಅಶೋಕ್ ರಾಜರತ್ನಂ ಪ್ರಾಸ್ತಾವಿಕ ಮಾತನಾಡಿ ಗ್ರಾಮೀಣ ಶಾಲಾ ಮಕ್ಕ ಳಲ್ಲಿ ಜಾನಪದ ಅರಿವು ಮೂಡಿಸುವ ನಿಟ್ಟಿನಲ್ಲಿ ತರಬೇತಿ ಶಿಬಿರ ಆಯೋಜಿಸಿ ಪ್ರೇರೇಪಿಸಲಾಗುತ್ತಿದೆ. ಈ ತರಬೇತಿಯಲ್ಲಿ ವಿದ್ಯಾರ್ಥಿಗಳು ಕೂಲಂಕುಶವಾಗಿ ಅರಿತು ಅಭ್ಯಾಸದಲ್ಲಿ ತೊಡಗಿಸಿದರೆ ಮುಂದೆ ರಾಜ್ಯಮ ಟ್ಟದಲ್ಲಿ ಹೆಸರುವಾಸಿ ಪಡೆಯಬಹುದು ಎಂದರು.


ಜಾನಪದ ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಹಾಗೂ ತರಬೇತುದಾರ ಡಾ.ವಿಜಯ್‌ಕುಮಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ವ್ಯಾಮೋಹದಿಂದ ರಂಗಗೀತೆ, ಲಾವಣಿ, ಗೀಗೀಪದ, ಸಣ್ಣಾಟ, ನೃತ್ಯ, ಡೊಳ್ಳುಕುಣಿತ ನಶಿಸುತ್ತಿವೆ. ಹೀಗಾಗಿ ಜಾನಪದ ಸಂಸ್ಕೃತಿ ಮರುಸೃಷ್ಟಿಸಲು ತಾಲ್ಲೂಕಿನಾದ್ಯಂತ ಸರ್ಕಾ ರಿ ಹಾಗೂ ಖಾಸಗೀ ಶಾಲೆಗಳಲ್ಲಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಎಸ್.ಕೆ.ವಿಜಯಲಕ್ಷಿö್ಮÃ ವಹಿಸಿದ್ದ ರು. ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್, ಜಾನಪದ ಯುವ ಬ್ರಿಗೇಡ್ ನಗರ ಸಂಚಾಲಕ ಆಮಿತ್ ಆಚಾರ್ಯ, ಗ್ರಾಮೀಣ ಸಂಚಾಲಕ ದಿಲೀಪ್, ಶಾಲಾ ಎಸ್‌ಡಿಎಂಸಿ ಸದಸ್ಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *

× How can I help you?