ಚಿಕ್ಕಮಗಳೂರು: ತೋಟಗಾರಿಕೆ ಇಲಾಖೆ ವತಿಯಿಂದ ಬೀಜುವಳ್ಳಿ ತೋಟಗಾರಿಕೆ ತರಬೇತಿ ಕೇಂದ್ರ ಮೂಡಿಗಡರೆ ತಾಲ್ಲೂಕು 2025-26 ನೇ ಸಾಲಿನಲ್ಲಿ ರೈತ ಮಕ್ಕಳಿಗೆ 1೦ ತಿಂಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ದಿನಾಂಕ ಮೇ 02 ರಿಂದ ಫೆಬ್ರವರಿ 28-2-2026 ರವರೆಗೆ ಆಯೋಜಿಸಲಾಗಿದೆ.
ಅರ್ಜಿಗಳನ್ನು ಮಾರ್ಚ್ 01 ರಿಂದ 31 ರವರೆಗೆ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯವಲಯ), ಬೋಳರಾಮೇಶ್ವರ ದೇವಸ್ಥಾನದ ಹತ್ತಿರ, ಕೆ.ಎಂ. ರಸ್ತೆ, ಚಿಕ್ಕಮಗಳೂರು ಕಛೇರಿಯಲಿ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯವಲಯ) ಕಳಸ ಹಾಗೂ ಬೀಜುವಳಿ, ತೋಟಗಾರಿಕೆ ಕ್ಷೇತ್ರ ಹಾಗೂ ತರಬೇತಿ ಕೇಂದ್ರ ಮೂಡಿಗೆರೆಯಲ್ಲಿ ಪಡೆದುಕೊಳ್ಳಬಹುದು ಅಥವಾ ಇಲಾಖಾ ವೆಬ್‌ಸೈಟ್https://horticulturedir.karnataka.gov.in ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 3೦/- ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ / ಅಂಗವಿಕಲ ಅಭ್ಯರ್ಥಿಗಳಿಗೆ ರೂ. 15/-ಮೌಲ್ಯದ ಇಂಡಿಯನ್ ಪೋಸ್ಟಲ್ ಆರ್ಡರ್ ((IPO) ಅಥವಾ ಡಿಮಾಂಡ್ ಡ್ರಾಫ್ಟ್ ಏ – 2 payment challan ಮುಖೇನ ಆಯಾ ಜಿಲ್ಲೆಗಳ ತೋಟಗಾರಿಕೆ ಉಪ ನಿರ್ದೇಶಕರು (ಜಿ,ಪಂ) ಚಿಕ್ಕಮಗಳೂರು ರವರ ಹೆಸರಿನಲಿ ಪಡೆದು ಅರ್ಜಿ ಜೊತೆಗೆ ಲಗತ್ತಿಸಬೇಕು.
ತರಬೇತಿಗೆ ಪ್ರವೇಶ ಬಯಸುವ ಅಭ್ಯರ್ಥಿ ಸ್ವಂತ ಹೆಸರಿನಲ್ಲಿ ಅಥವಾ ತಂದೆ / ತಾಯಿ / ಪೋ?ಕರ ಹೆಸರಿನಲ್ಲಿ.. ಜಮೀನನ್ನು ಹೊಂದಿ ಸ್ವಂತ ಸಾಗುವಳಿ ಮಾಡುತ್ತಿರಬೇಕು, ಹತ್ತನೇ ತರಗತಿ (ಎಸ್.ಎಸ್.ಎಲ್.ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ತರಬೇತಿ ಅವಧಿಯಲ್ಲಿ ಅಭ್ಯರ್ಥಿಯು ವಸತಿ ಗೃಹದಲ್ಲಿ ತಂಗುವುದು ಕಡ್ಡಾಯವಾಗಿದೆ.
ಅರ್ಜಿ ಸಲ್ಲಿಸಲು ದಿನಾಂಕ ಏಪ್ರೀಲ್ 01 ಕೊನೆಯ ದಿನವಾಗಿರುತ್ತದೆ. ಹಾಗೂ ಸಂದರ್ಶನ ಮಾಡುವ ದಿನಾಂಕ ಏಪ್ರೀಲ್ 08 ಆಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯವಲಯ) ಚಿಕ್ಕಮಗಳೂರು, ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯವಲಯ) ಕಳಸ ಹಾಗೂ ಬೀಜುವಳ್ಳಿ, ತೋಟಗಾರಿಕೆ ಕ್ಷೇತ್ರ ಹಾಗೂ ತರಬೇತಿ ಕೇಂದ್ರ ಮೂಡಿಗೆರೆ ರವರನ್ನು ಕಛೇರಿ ಅವಧಿಯಲಿ (ದೂ.ಸಂ) 08262-295043 ಸಂಪರ್ಕಿಸಬಹುದಾಗಿದೆ ಎಂದು ಜಿ.ಪಂ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.