ಚಿಕ್ಕಮಗಳೂರು, ಮೇ.12:- ಪದವೀಧರರು ಸ್ವತಂತ್ರವಾಗಿ ಬದುಕುವುದನ್ನು ಕಲಿಯಬೇಕು. ಪಾಲಕರು ಹಾಗೂ ಸಮಾಜದ ಒಳಿತನ್ನು ಬಯಸುವ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಹೇಳಿದರು.
ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆದ ಬಿ.ಇ., ಎಂ.ಟೆಕ್., ಎಂಬಿಎ ಅಂ ತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆದಿಚುಂಚನಗಿರಿ ವಿಶ್ವ ವಿದ್ಯಾಲಯದಿಂದ ಪದವಿ ಪಡೆದು ಹೊಸ ಪ್ರಪಂಚ ಪ್ರವೇಶಿಸುತ್ತಿರುವ ಪದ ವೀಧರರ ನಿಜವಾದ ಜೀವನ ಈಗಷ್ಟೆ ಆರಂಭವಾಗಲಿದೆ. ವಿದ್ಯಾರ್ಥಿಗಳು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳು ವುದನ್ನು ಕಲಿತುಕೊಳ್ಳಬೇಕು. ನಿಮ್ಮ ಮೇಲೆ ಪೋಷಕರು ಸಾಕಷ್ಟು ನಿರೀಕ್ಷೆಯಿದೆ ಎಂದರು.

ಪದವಿ ಅಭ್ಯಾಸಿಸುವ ವೇಳೆಯಲ್ಲಿ ವಿದ್ಯಾರ್ಥಿಗಳು ಅನೇಕ ತುಂಟಾಟಗಳ ನಡುವೆಯು ಅಂತಿಮ ವಾ ಗಿ ಸಮಾಜದ ಮುಖ್ಯವಾಹಿನಿಗೆ ಧಾವಿಸಿದ್ದೀರಿ. ಇದೀಗ ಬದುಕು ಕಟ್ಟಿಕೊಳ್ಳುವ ಸಮಯವಾಗಿದೆ. ಕಳೆದ ಸಮಯ ಹಿಂತಿರುಗಿಬಾರದು. ಹಾಗಾಗಿ ಮುಂದಿನ ಭವಿಷ್ಯ ರೂಪಿಸುವ ಉದ್ಯೋಗದತ್ತ ದಾಪು ಹಾಕಬೇಕಿ ದೆ ಎಂದು ತಿಳಿಸಿದರು.
ಶಿಕ್ಷಕರು ಹಾಗೂ ಪಾಲಕರ ಕನಸನ್ನು ಈಡೇರಿಸುವ ಮುಖ್ಯ ಜವಾಬ್ದಾರಿ ವಿದ್ಯಾರ್ಥಿಗಳ ಕೈಯಲ್ಲಿದೆ. ಹಲವಾರು ಕಂಪನಿಗಳಲ್ಲಿ ದೈಹಿಕ ಸಾಮರ್ಥ್ಯ, ಆವಭಾವ ನೋಡಿ ಉದ್ಯೋಗ ನೀಡುವುದಿಲ್ಲ, ಪ್ರತಿಭೆ ಎನ್ನು ವುದು ಮನದಟ್ಟಾಗಿದ್ದರೆ ಕಂಪನಿಗಳು ತಾನಾಗಿಯೇ ಅವಕಾಶವನ್ನು ಕಲ್ಪಿಸಿಕೊಡಲಿದೆ ಎಂದರು.

ಇದೀಗ ರಾಷ್ಟ್ರವು ಯುದ್ಧದ ಕರಿಮೋಡದಿಂದ ನಿರಾಳವಾಗಿದೆ. ಗಡಿಯಲ್ಲಿ ಸೈನಿಕರ ನಿರಂತರ ಪರಿಶ್ರ ಮದಿಂದ ದೇಶ ಸುರಕ್ಷತವಾಗಿದೆ. ಅಲ್ಲದೇ ದೇಶಕ್ಕಾಗಿ ಪ್ರಾಣತೆತ್ತ ಯೋಧರು ದೇಶದ ಅಸ್ಮತೆ, ಸಾವಭೌ ಮತ್ವದ ಪ್ರತೀಕವಾಗಿರುವ ಕಾರಣ ದೊಡ್ಡದೊಂದು ನಮನ ಎಲ್ಲರೂ ಸಲ್ಲಿಸಬೇಕು ಎಂದು ಹೇಳಿದರು.
ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಸತತ ನಾಲ್ಕುವರ್ಷಗಳಿಂದ ಕಾಲೇಜಿನಲ್ಲಿ ತಾಂತ್ರಿಕ ವ್ಯಾಸಂಗ ವನ್ನು ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸಿದ ಅವರು ಉದ್ಯೋಗಕ್ಕೆ ತೆರಳಿದರೂ ಜೀವಭಾಷೆ ಕನ್ನಡವಾಗಿರಬೇಕು. ಆಂಗ್ಲಭಾಷೆ ಬದುಕಿನ ಒಂದು ಭಾಗವಾಗಿ ರಬೇಕು ಎಂದು ತಿಳಿಸಿದರು.

ದೇಶ-ವಿದೇಶಗಳಲ್ಲಿ ಹಲವಾರು ಕಾಲೇಜುಗಳನ್ನು ಸ್ಥಾಪಿಸಿ ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನಕ್ಕೆ ಪೂರ ಕವಾದ ಆದಿಚುಂಚನಗಿರಿ ಮಠವು ನಾಡುಕಂಡ ಅದ್ಬುತ ಮಠಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಮಠದ ಬಾಲಗಂಗಾಧರನಾಥ ಶ್ರೀಗಳ ಆರ್ಶೀವಾದ, ನಿರ್ಮಲನಾಥನಂದ ಸ್ವಾಮೀಜಿ ನೇತೃತ್ವದಲ್ಲಿ ಇನ್ನ ಷ್ಟು ಹೆಚ್ಚು ಪ್ರಗತಿ ಸಾಧಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ ಪದವಿ ಪೂರೈಸಿ ಮುಖ್ಯವಾಹಿನಿಗೆ ಬರುತ್ತಿರುವ ಹಾದಿ ಸುಲಭದ್ದಲ್ಲ. ಕಲ್ಲು-ಮುಳ್ಳಿನಿಂದ ಕೂಡಿರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಪ್ರತಿಭೆ ಎಂಬುದು ಜನನದಲ್ಲೇ ಇರಲಿದೆ. ಅನಾವರಣಗೊಳಿಸುವ ಕಾರ್ಯಕ್ಕೆ ಪಾಲಕರು ನೀರೆರೆದು ಪೋಷಿ ಸಬೇಕು ಎಂದು ಕಿವಿಮಾತು ಹೇಳಿದರು.
ಮೈಸೂರು ವಿಶ್ವವಿದ್ಯಾಲಯ ಕುಲಪತಿ ಎನ್.ಕೆ.ಲೋಕನಾಥ್ ಮಾತನಾಡಿ ವಿದ್ಯಾಭ್ಯಾಸದ ಕಲಿಕೆಯ ಕ್ಷಣಗಳು ಅತ್ಯುತ್ತಮವಾಗಿದ್ದು ಹಲವಾರು ಅವಕಾಶ ಸಿಗಲಿರುವ ಕಾರಣ ಸೂಕ್ಷö್ಮವಾಗಿ ಆಯ್ಕೆ ಮಾಡಿಕೊಳ್ಳ ಬೇಕು. ಶಿಕ್ಷಣ ಕೇವಲ ಉದ್ಯೋಗಕ್ಕಾಗಿ ಸೀಮಿತರಾಗದೇ, ಸ್ವಾಸ್ಥö್ಯ ಸಮಾಜ ನಿರ್ಮಾಣಕ್ಕೂ ಪೂರಕವಾಗಿ ರಬೇಕು ಎಂದು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥಸ್ವಾಮೀಜಿ, ಮಂಗಳೂರು ಶಾಖೆಯ ಧರ್ಮಪಾಲನಾಥ ಸ್ವಾಮೀಜಿ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್, ಎಐಟಿ ಕಾಲೇಜು ಪ್ರಾಂಶು ಪಾಲ ಡಾ|| ಸಿ.ಟಿ.ಜಯದೇವ, ರಿಜಿಸ್ಟರ್ ಡಾ|| ಸಿ.ಕೆ.ಸುಬ್ಬರಾಯ, ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್, ಹಿರಿಯ ವೈದ್ಯ ಡಾ|| ಜೆ.ಪಿ.ಕೃಷ್ಣೇಗೌಡ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ|| ಜಿ.ಎಂ. ಸತ್ಯನಾರಾಯಣ್, ವಿವಿಧ ವಿಭಾಗದ ಮುಖ್ಯಸ್ಥರಾದ ಡಾ|| ವೀರೇಂದ್ರ, ಡಾ|| ಸಂಪತ್ ಮತ್ತಿತರರಿದ್ದರು.
- ಸುರೇಶ್ ಎನ್.