ಚಿಕ್ಕಮಗಳೂರು-ಅತಿಥಿ ಶಿಕ್ಷಕರು-ಉಪನ್ಯಾಸಕರ ಹುದ್ದೆ


ಚಿಕ್ಕಮಗಳೂರು, ಮೇ.9: 2025-26ನೇ ಸಾಲಿನಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ/ ಪದವಿ ಪೂರ್ವ ಕಾಲೇಜು, ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ/ ಪದವಿ ಪೂರ್ವ ಕಾಲೇಜು ಹಾಗೂ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಒಂದು ವರ್ಷಕ್ಕೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ.

ಅತಿಥಿ ಶಿಕ್ಷಕರ ಹುದ್ದೆಗಳು: ಕನ್ನಡ (03), ಇಂಗ್ಲಿಷ್ (05), ಉರ್ದು (04), ಸಮಾಜ ವಿಜ್ಞಾನ (04), ಸಾಮಾನ್ಯ ವಿಜ್ಞಾನ (03), ಗಣಿತ (03) ಸೇರಿ ಒಟ್ಟು 22 ಹುದ್ದೆಗಳು.

ಅತಿಥಿ ಉಪನ್ಯಾಸಕರ ಹುದ್ದೆಗಳು: ಕನ್ನಡ (02), ಇಂಗ್ಲಿಷ್ (01), ಭೌತಶಾಸ್ತ್ರ (02), ರಸಾಯನ ಶಾಸ್ತ್ರ (01), ಗಣಿತ (02), ಜೀವಶಾಸ್ತ್ರ (02), ಕಂಪ್ಯೂಟರ್ ಸೈನ್ಸ್ (01), ಅರ್ಥಶಾಸ್ತ್ರ (01), ವ್ಯವಹಾರಶಾಸ್ತ್ರ (01) ಹಾಗೂ ಲೆಕ್ಕಶಾಸ್ತ್ರ (01) ಸೇರಿ ಒಟ್ಟು 14 ಹುದ್ದೆಗಳು.
ಆಸಕ್ತರು ಅರ್ಜಿಯನ್ನು https://dom.karnataka.gov.in ಅಥವಾ ಜಿಲ್ಲಾ ಕಚೇರಿ/ ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಿಂದ ಪಡೆದು ಎಲ್ಲ ದೃಢೀಕೃತ ದಾಖಲೆಗಳೊಂದಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಮೇ 19ರೊಳಗೆ ಸಲ್ಲಿಸಬಹುದು.

ಹೆಚ್ಚಿನ ವಿವರಗಳಿಗೆ ಇಲಾಖೆಯ ಜಿಲ್ಲಾ ಕಚೇರಿ (08262-295848, 9535323262, 6363294975, 9844866263)ಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

× How can I help you?