ಚಿಕ್ಕಮಗಳೂರು-ಮೈಸೂರು ಅನ್ವೇಶಣಾ ಟ್ರಸ್ಟ್ ಮತ್ತು ಅರಸು ಪತ್ರಿಕೆ 12ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಸಮಾಜ ಸೇವೆ ಗುರುತಿಸಿ ಹಿರೇನಲ್ಲೂರು ಶಿವು ಅವರಿಗೆ ‘ಧ್ವನಿ ಕೊಟ್ಟ ಧನಿ’ ಎಂಬ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದರು.
ಸಮಾರಂಭದಲ್ಲಿ ಚುಟುಕು ಯುಗಾಚಾರ್ಯ ಡಾ.ಎಂ.ಜಿ.ಆರ್.ಅರಸ್, ಶ್ರೀಮತಿ ವಿಜಯಲಕ್ಷ್ಮಿ ಅರ ಸ್, ಆರ್ಯ ಅಮರನಾಥ ರಾಜೇ ಅರಸ್, ಎಂ.ಎಲ್ಸಿ. ಡಾ.ಡಿ.ತಿಮ್ಮಯ್ಯ, ರಾಜ್ಯ ಉಪಾಧ್ಯಕ್ಷ ಸೂರಜ್ ಹೆಗ್ಡೆ ಮುಖಂಡರುಗಳಾದ ವೆಂಕಟೇಶ್, ಚಂದ್ರಶೇಖರ್, ರತ್ನ, ಹಾಲಪ್ಪಗೌಡ ಮತ್ತಿತರರು ಉಪಸ್ಥಿತರಿದ್ದರು