ಚಿಕ್ಕಮಗಳೂರು- ಮಕ್ಕಳು ವಿದ್ಯಾರ್ಥಿ ಜೀವನದಲ್ಲಿಯೇ ಸ್ಕೌಟ್ಸ್ ಮತ್ತು ಗೈಡ್ಸ್ನ ಶಿಬಿ ರಾರ್ಥಿಗಳಾಗಿ ಪಾಲ್ಗೊಂಡರೆ ಶಿಸ್ತು, ಸಂಯಮ, ಸೇವಾ ಮನೋಭಾವ, ದೇಶಭಕ್ತಿ ಹಾಗೂ ಉದಾರತ್ತ ಚಿಂ ತನೆಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ಧ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದ ನೂರಕ್ಕೂ ಹೆಚ್ಚು ರಾಷ್ಟçಗಳಲ್ಲಿ ಸ್ಕೌಟ್ಸ್ ಸಂಸ್ಥೆ ಆತ್ಮಸ್ಥೆöÊರ್ಯ, ಶಿಸ್ತಿನ ಸಮವಸ್ತ್ರ ಧರಿಸುವುದು, ಸಾಮಾಜಿಕ ಅರಿವು ಹಾಗೂ ನೆಲ, ಜಲದ ಬಗ್ಗೆ ಅಪಾರ ಗೌರವ ಸೂಚಿಸುವ ಶಿಕ್ಷಣವನ್ನು ಬೋಧಿಸಿಕೊಂಡು ಮಕ್ಕಳಿಗೆ ಉದಾರ ಮನೋಭಾವಗಳನ್ನು ಮಸ್ತಕದಲ್ಲಿ ತುಂಬುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಪಾಲಕರು, ಶಿಕ್ಷಕರನ್ನು ಗೌರವಿಸದಂತೆ, ಬದುಕಿನಲ್ಲಿ ಸ್ವಾಭಿಮಾನದ ಅರಿವು ಮೂಡಿಸು ವ ಸ್ಕೌಟ್ಸ್ ಶಿಕ್ಷಕರ ಮೇಲೆ ವಿಶೇಷ ಅಭಿಮಾನ ಹೊಂದಬೇಕು. ಆರ್ಥಿಕ ಸಬಲರಾದರೆ ಸಾಲದು, ಕುಟುಂಬದ ಹೊರತಾಗಿ ಬಡಬಗ್ಗರಿಗೆ ಸ್ಪಂದಿಸುವ ಗುಣ ಮೈಗೂಡಿಕೊಂಡರೆ ಸಮಾಜದಲ್ಲಿ ಶಾಶ್ವತವಾಗಿ ಉಳಿ ಯಲು ಸಾಧ್ಯ ಎಂದರು.

ರಾಜ್ಯ ತಜ್ಞ ಮೌಲ್ಯ ನಿರ್ಧರಣ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ 1907ರಲ್ಲಿ ಸ್ಥಾಪನೆಗೊಂಡ ಸಂಸ್ಥೆ ಇಂದು 125ನೇ ವರ್ಷವನ್ನು ಪೂರೈಸಿ ಮುನ್ನೆಡೆಯುತ್ತಿರುವ ಕಾರಣ ವಿಶ್ವಾದ್ಯಂತ ಸುಮಾರು 56ಮಿಲಿಯನ್ ಮಂದಿ ಸಂಸ್ಥೆಯ ಚಳುವಳಿಯಲ್ಲಿ ತೊಡಗಿಸಿಕೊಂಡು ಕಾರ‍್ಯ ಪ್ರವೃತ್ತರಾಗಿದ್ದಾರೆ ಎಂದು ಹೇಳಿದರು.
ಜನಸ್ನೇಹಿ, ಸಮಾಜಮುಖಿ, ಸಮಾಜಪ್ರೀತಿ ಹಾಗೂ ಸದ್ವಿಚಾರದ ಸಂದೇಶ ಪಸರಿಸುವ ಕಾರಣ ಸ್ಕೌ ಟ್ಸ್ ಆಂದೋಲನ ಶಾಶ್ವತವಾಗಿ ನೆಲೆಯೂರಿದೆ. ಪ್ರಪಂಚದ ಅನೇಕ ಆಂದೋಲನಗಳು ಪಥನವಾಗಿದೆ. ಆ ದರೆ ಸಾಮಾಜಿಕ ಒಳಿತಿಗೆ ಅರ್ಪಿಸಿಕೊಂಡಿರುವ ಸ್ಕೌಟ್ಸ್ ಸಂಸ್ಥೆಯು ನಿರಂತರ ಚಟುವಟಿಕೆ ರೂಪಿಸಿಕೊಂಡು ಸುಭದ್ರವಾಗಿದೆ ಎಂದರು.

ರಾಜ್ಯದಲ್ಲಿ ಮಹಾಮಸ್ತಾಭಿಷೇಕ, ಹಾಸನಾಂಬ ದೇವಾಲಯ ಪೂಜೆಯಲ್ಲಿ, ಪ್ರಕೃತಿ ವಿಕೋಪದಂಥ ಸನ್ನಿವೇಶದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಾರ್ಥಿಗಳು ಸ್ಥಳಗಳಿಗೆ ತೆರಳಿ ಸ್ಪಂದಿಸಿದೆ. ಆ ನಿಟ್ಟಿನಲ್ಲಿ ಶಿಬಿರಾ ರ್ಥಿಗಳಿಗೆ ಅನುಕೂಲವಾಗಲು ತೇಗೂರು ಸಮೀಪ 2 ಕೋಟಿ ವೆಚ್ಚದಲ್ಲಿ ಅಡ್ವೆಂಚರ್ ಕ್ಯಾಂಪ್ ನಿರ್ಮಾಣವಾಗುತ್ತಿದ್ದು ಅಂದಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಕರೆ ತರುವ ಜವಾಬ್ದಾರಿ ಶಾಸಕರು ವಹಿಸಿ ಕೊಳ್ಳಬೇಕು ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ತರಬೇತಿ ಆಯುಕ್ತೆ ಸಿ.ಸಂಧ್ಯಾರಾಣಿ ಮಾತನಾಡಿ, ಪ್ರಪಂಚದ ಬಹು ತೇಕ ರಾಷ್ಟçಗಳಲ್ಲಿ ಸಂಸ್ಥೆ ಕಾರ್ಯಚಟುವಟಿಕೆ ರೂಪಿಸುತ್ತಿದೆ. ಮಕ್ಕಳಿಗೆ ಶಿಸ್ತಿನ ನಡೆ, ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ಬಾಲ್ಯದಿಂದಲೇ ಆತ್ಮಸ್ಥೆöÊರ್ಯದ ಪರಿಪಾಠವನ್ನು ಬೋಧಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಟಿ.ಕೆ.ಪಣಿರಾಜ್, ಡಿ.ಎಸ್.ಮಮತ, ಕೋಶಾ ಧ್ಯಕ್ಷ ಕೆ.ಎಸ್.ರಮೇಶ್, ಕಾರ್ಯದರ್ಶಿ ನೀಲಕಂಠಾಚಾರ್ಯ, ಸಂಘಟಕ ಕಿರಣ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
–ಸುರೇಶ್ ಎನ್ ಚಿಕ್ಕಮಗಳೂರು