ಚಿಕ್ಕಮಗಳೂರು-ಆರೋಗ್ಯವನ್ನು-ಸ್ನೇಹಿತನಾಗಿಸಿದರೆ-ಸಾಧನೆಗೆ- ಪೂರಕ-ಬ್ರಹ್ಮ-ಕುಮಾರೀಸ್-ಜಿಲ್ಲಾ-ಸಂಚಾಲಕಿ-ಭಾಗ್ಯ

ಚಿಕ್ಕಮಗಳೂರು:- ಆಸ್ತಿ ಹಾಗೂ ಅಂತಸ್ತು ಗಳಿಸುವ ಭರದಲ್ಲಿ ಜನಸಾಮಾನ್ಯರು ದೈಹಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ. ಪ್ರತಿಯೊಬ್ಬರು ಆರೋಗ್ಯವನ್ನು ಸ್ನೇಹಿತನಾಗಿಸಿದರೆ, ಸಮಾಜದ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಬಹುದು ಎಂದು ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಭಾಗ್ಯ ಹೇಳಿದರು.

ತಾಲ್ಲೂಕಿನ ಬೆಳವಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿ ಕಲ್ ಅಸೋಸಿಯೇಷನ್, ಬೆಳವಾಡಿ ಡಾ|| ಜಗದೀಶ್ ಕ್ಲೀನಿಕ್, ಹಳೇ ವಿದ್ಯಾರ್ಥಿಗಳ ಸಂಘ, ಹೋಲಿಕ್ರಾಸ್ ಆಸ್ಪತ್ರೆ, ರೆಡ್‌ಕ್ರಾಸ್, ಬ್ರಹ್ಮಕುಮಾರೀಸ್, ಸಂವೇದ-2 ಹಾಗೂ ಜೇಸಿಐ ಸಹಯೋಗದಲ್ಲಿ ದೇಶಕ್ಕಾಗಿ ಹುತ್ತಾತ್ಮರ ಸ್ಮರಣಾರ್ಥ ಹಮ್ಮಿಕೊಂಡಿದ್ಧ ಉಚಿತ ಬೃಹತ್ ರಕ್ತದಾನ ಹಾಗೂ ನೇತ್ರಾ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಶರೀರದ ಅತ್ಯಮೂಲ್ಯ ನೇತ್ರವು ಇಡೀ ಪ್ರಪಂಚದ ಬೆಳಕನ್ನು ತೋರುವ ಅಂಗ. ಸಣ್ಣಪುಟ್ಟ ದೋಷಗಳು ಉಂಟಾದರೆ ತಕ್ಷಣವೇ ತಪಾಸಣೆಗೆ ಒಳಗಾಗುವುದು ಮುಖ್ಯ. ಹೆಚ್ಚಾಗಿ ವೃದ್ದರಲ್ಲಿ ಈ ಸಮಸ್ಯೆಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ನಿರ್ಲಕ್ಷ್ಯವಹಿಸದೇ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.

ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರವು ವಿಶ್ವದಲ್ಲಿ ಅಚ್ಚರಿಯದ ಪ್ರಭಾವ ಬೀರಿದರೂ, ಇಂದಿಗೂ ಕೃತಕ ರಕ್ತ ಉತ್ಪಾದಿಸಲು ಸಾಧ್ಯವಾಗಿಲ್ಲ. ಮಾನವನ ರಕ್ತದಿಂದ ಮಾತ್ರ ಇನ್ನೋರ್ವ ಮಾನವನಿಗೆ ರಕ್ತ ಕೊಡಬಹುದು. ಹೀಗಾಗಿ ರಕ್ತದಾನ ಕೇವಲ ಇನ್ನೊಂದು ಜೀವಿಸುವ ಜೊತೆಗೆ ಮಾರಕ ರೋಗಗಳನ್ನು ತಡೆಗಟ್ಟಲು ಪೂರಕವಾಗಿದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮಾನವ ನಕರಾತ್ಮಕ ಚಿಂತನೆಗಳಿಂದ ಮಾನಸಿಕ ನೆಮ್ಮದಿ ಹಾಳಾಗುತ್ತಿದೆ. ಇದ ರೊಂದಿಗೆ ಆರೋಗ್ಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಕಾಣುತ್ತಿದ್ದೇವೆ. ಹೀಗಾಗಿ ಕೆಲ ಸಮಯವನ್ನು ಆಧ್ಯಾತ್ಮದತ್ತ ಮುಡಿಪಿಡಬೇಕು. ಜ್ಞಾನ ಹಾಗೂ ಪರಮಾತ್ಮನ ಆರಾಧನೆಯಿಂದ ಮನಸ್ಸು ಹಗುರವಾಗಲು ಸಾಧ್ಯ ಎಂದರು.

ಎನ್‌ಐಎಂಎ ರಾಜ್ಯ ಉಪಾಧ್ಯಕ್ಷ ಡಾ|| ಅನೀತ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಓರ್ವ ಮನು ಷ್ಯನ ರಕ್ತಕಣವು ಕನಿಷ್ಟ ನಾಲ್ಕು ಮಂದಿಯ ಪ್ರಾಣ ಉಳಿಸಲಿದೆ. ಹೀಗಾಗಿ ಹೆಚ್ಚೆಚ್ಚು ರಕ್ತದಾನಿಗಳು ಶಿಬಿರದಲ್ಲಿ ಪಾಲ್ಗೊಳ್ಳಬೇಕು. ಪ್ರಸಕ್ತ ಸಾಲಿನಲ್ಲಿ ಸಂವೇದ ಸಂಸ್ಥೆ ೨ ಲಕ್ಷ ರಕ್ತ ಸಂಗ್ರಹಿಸುವ ಗುರಿಯನ್ನು ಹೊಂದಿದ್ದು ಆ ನಿಟ್ಟಿನಲ್ಲಿ ತಂಡವು ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು.

ರಕ್ತದಾನಿಗಳ ಶಿಬಿರದಲ್ಲಿ ಗ್ರಾಮದ ಹಲವಾರು ಯುವಕರು ಸ್ವಯಂಪ್ರೇರಿತರಾಗಿ ಪಾಲ್ಗೊಂಡಿರುವುದು ಖುಷಿಯ ಸಂಗತಿ. ಈ ನಡುವೆ ಸುಮಾರು 5೦ನೇ ಬಾರಿಗೆ ರಕ್ತದಾನ ಮಾಡಿದ ಪ್ರದೀಪ್‌ಗೌಡ ಅವರಿಗೆ ಇದೇ ವೇಳೆ ಗುರುತಿಸಿ ಅಭಿನಂದನೆ ಸಲ್ಲಿಸಲಾಯಿತು ಎಂದರು.

ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷ ಪ್ರದೀಪ್‌ಗೌಡ ಮಾತನಾಡಿ, ರಾಷ್ಟ್ರಕ್ಕಾಗಿ ಪ್ರಾಣಗೈದ ಭಗತ್‌ಸಿಂಗ್, ಸುಖ ದೇವ್ ಹಾಗೂ ರಾಜಗುರುಗಳ ಕ್ರಾಂತಿಕಾರಿ ಹೋರಾಟದ ಸ್ಮರಣಾರ್ಥ ರಕ್ತದಾನ ಶಿಬಿರ ಹಮ್ಮಿಕೊಂಡಿರು ವುದು ಉತ್ತಮ ಸಂಗತಿ ಎಂದ ಅವರು ದೇಶದ ಹಲವಾರು ರಾಜ್ಯಗಳಲ್ಲಿ ಈ ಶಿಬಿರ ಹಮ್ಮಿಕೊಂಡು ಸಾಗು ತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಇದೇ ವೇಳೆ ಶಿಬಿರದಲ್ಲಿ ಸುಮಾರು 86 ಮಂದಿ ನೇತ್ರಾ ತಪಾಸಣೆ ನಡೆಸಿ, 6 ಮಂದಿಗೆ ಉಚಿತ ಲೈನ್ಸ್ಗೆ ನೋಂದಣಿಯಾಗಿದೆ. ರಕ್ತದಾನ ಶಿಬಿರದಲ್ಲಿ50 ಹೆಚ್ಚು ಮಂದಿ ಭಾಗವಹಿಸಿ ಸ್ವಯಂಪ್ರೇರಿತರಾಗಿ ಭಾಗವಹಿ ಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳವಾಡಿ ಗ್ರಾ.ಪಂ ಅಧ್ಯಕ್ಷೆ ಕಾವೇರಮ್ಮ ವಹಿಸಿದ್ದರು.

ಈ ಸಂದರ್ಭದಲ್ಲಿ ಜೇಸಿಐ ಅಧ್ಯಕ್ಷ ಪ್ರದೀಪ್, ಬೆಳವಾಡಿ ಶಾಲಾ ಮುಖ್ಯೋಪಾಧ್ಯಯ ಪಾಂಡುರಂಗ, ಎಸ್‌ಡಿಎಂಸಿ ಅಧ್ಯಕ್ಷ ಬಿ.ಸಿ.ಮಲ್ಲೇಶ್, ಹೋಲಿಕ್ರಾಸ್ ಆಸ್ಪತ್ರೆ ಸಿಬ್ಬಂದಿ ನವ್ಯ, ವೈದ್ಯ ಜಗದೀಶ್, ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಪ್ರತಿನಿಧಿ ಆರ್.ಶ್ರೀನಿವಾಸ್, ಜಿಲ್ಲಾ ನಿರ್ದೇಶಕ ವೀಲಿಯಂ ಪೆರೇರಾ, ಹಳೇ ವಿದ್ಯಾರ್ಥಿ ಪ್ರಕಾ ಶ್ ಮತ್ತಿತರರು ಉಪಸ್ಥಿತರಿದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?