ಚಿಕ್ಕಮಗಳೂರು-ಸ್ವಚ್ಚತೆಗೆ ಆದ್ಯತೆ ಕೊಡುವುದು ಪ್ರತಿಯೊಬ್ಬರ ಕರ್ತವ್ಯ –ಶಾಸಕ ಹೆಚ್.ಡಿ.ತಮ್ಮಯ್ಯ

ಚಿಕ್ಕಮಗಳೂರು– ಕುಟುಂಬದ ಹಿತದೃಷ್ಟಿಯಿಂದ ಸ್ವಚ್ಚತೆಗೆ ಆದ್ಯತೆ ಕೊಡುವುದು ಪ್ರತಿ ನಾಗರೀಕರ ಮೂಲ ಕರ್ತವ್ಯವಾಗಿದ್ದು ಸ್ಥಳೀಯವಾಗಿ ಮನೆಯಂಗಳದ ಕಸವನ್ನು ಸ್ವಚ್ಚಗೊಳಿಸುವ ಮುಖಾಂತರ ಸರ್ಕಾರದ ಜತೆಗೆ ಕೈಜೋಡಿಸಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಕಲ್ಯಾಣನಗರ ವೆಲ್‌ಫೇರ್ ಸೊಸೈಟಿ ಆಯೋಜಿಸಿದ್ಧ ಸಂಪೂರ್ಣ ಸ್ವಚ್ಚತಾ ಅಭಿಯಾನಕ್ಕೆ ಮಂಗಳವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯ ಶಿಕ್ಷಣ, ಆರೋಗ್ಯಕ್ಕೆ ವಹಿಸುವ ಕಾಳಜಿ, ಸ್ವಚ್ಚತೆಗೂ ವಹಿಸಬೇಕು. ಮನೆಗಳ ಅಕ್ಕಪಕ್ಕದ ಸ್ವಚ್ಚತೆ ಗೆ ಹೆಚ್ಚಿನ ಮಹತ್ವ ನೀಡಿದರೆ, ಪರಿಸರವು ಉತ್ತಮವಾಗುವ ಜತೆಗೆ ಕುಟುಂಬದ ಆರೋಗ್ಯ ಕಾಪಾಡಬಹುದು ಎಂದ ಅವರು ಅತಿಥಿಗಳ ಮನೆ ಶೌಚಾಲಯ ಸ್ವಚ್ಚತೆಯಿಂದ ಕೂಡಿದರೆ ಮನೆಯಲ್ಲವು ಸ್ವಚ್ಚವಾಗಲಿದೆ ಎಂಬ ಸತ್ಯ ಅರಿಯಬೇಕು ಎಂದರು.

ರಾಷ್ಟ್ರಪಿತ, ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಎಲ್ಲರ ಧ್ಯೇಯೋದ್ದೇಶವೇ ಸ್ವಚ್ಚತೆಗೆ ಮೊದಲ ಆದ್ಯತೆ. ಆ ನಿಟ್ಟಿನಲ್ಲಿ ಕಲ್ಯಾಣನಗರ ಸೇರಿದಂತೆ ಪ್ರತಿ ವಾರ್ಡಿನ ನಿವಾಸಿಗಳು ಕುಟುಂಬ ಹಾಗೂ ಸಮಾ ಜದ ಹಿತದೃಷ್ಟಿಯಿಂದ ಸಾಮಾಜಿಕ ಕಾರ್ಯದಲ್ಲಿ ಮುಂದಾದರೆ ಸುಂದರ ನಗರವನ್ನಾಗಿ ನಿರ್ಮಿಸಲು ಸಾ ಧ್ಯ ಎಂದು ಹೇಳಿದರು.

ಈ ವಾರ್ಡಿನಲ್ಲಿ ಹಿಂದೆ ನಗರಸಭಾ ಸದಸ್ಯನಾಗಿ ಪಾರ್ಕ್ ಅಭಿವೃದ್ದಿ, ದೇವಾಲಯ ನಿರ್ಮಿಸಲು ಶ್ರಮಿಸಿದ್ದೇನೆ. ಇದೇ ವಾತಾವರಣ ಮುಂದುವರೆಯಲು ಸ್ಥಳೀಯ ನಿವಾಸಿಗಳು ಸ್ವಚ್ಚತೆಗೆ ಮುತುವರ್ಜಿವಹಿಸಬೇಕು. ಮುಂದಿನ ದಿನಗಳಲ್ಲಿ ಕಲ್ಯಾಣನಗರ ಅಭಿವೃದ್ದಿ ದೃಷ್ಟಿಯಿಂದ ಐದಾರು ತಿಂಗಳೊಳಗೆ ಬೆಂಗಳೂರು ಮಾದರಿಯಂತೆ ಅತ್ಯುತ್ತಮ ಪಾರ್ಕ್ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದರು.

ಸೊಸೈಟಿ ಗೌರವಾಧ್ಯಕ್ಷ ಕಿಶೋರ್‌ಕುಮಾರ್‌ಹೆಗ್ಡೆ ಮಾತನಾಡಿ ಬಡಾವಣೆ ಅಥವಾ ಪಕ್ಕದಲ್ಲಿನ ಕಸವ ನ್ನು ಅವರಿರುವ ಶುಚಿ ಮಾಡುವರೆಂಬ ಚಿಂತನೆಯಿಂದ ಕೂರದೇ, ನಮ್ಮ ಬಡಾವಣೆ ಹಿತದೃಷ್ಟಿಯಿಂದ ಸ್ವಯಂಪ್ರೇರಿತರಾಗಿ ಮುಂದಾಗಬೇಕು. ಶುಚಿತ್ವಕ್ಕೆ ನಿರ್ಲಕ್ಷ ನ ವಹಿಸಿದರೆ ಅನಾರೋಗ್ಯ ಎಂಬುದು ಕುಟುಂಬವನ್ನು ಕಾಡಲಿದೆ ಎಂದು ಎಚ್ಚರಿಸಿದರು.

ಸೊಸೈಟಿ ಅಧ್ಯಕ್ಷ ಬಿ.ಎಸ್.ಹರೀಶ್ ಮಾತನಾಡಿ, ಇದೇ ಪ್ರಥಮ ಭಾರಿಗೆ ಸ್ವಚ್ಚತಾ ಅಭಿಯಾನ ಕಾರ್ಯ ಕ್ರಮ ಹಮ್ಮಿಕೊಂಡಿದ್ದು ಮಂಗಳೂರಿನಿಂದ ಮಕ್ಕಳ ಭಜನಾ ತಂಡವನ್ನು ಕರೆಸಿ ಸಾರ್ವಜನಿಕರಲ್ಲಿ ಸ್ವಚ್ಚತೆ ಅರಿವು ಮೂಡಿಸಲಾಗುತ್ತಿದೆ. ಮೇ.01ರ ಮುಂಜಾನೆ ಸ್ವಚ್ಚತೆಯಲ್ಲಿ ಭಾಗವಹಿಸುವವರಿಗೆ ಲಕ್ಕಿಡಿಪ್ ಮುಖಾಂತರ ಅತ್ಯಮೂಲ್ಯ ಬಹುಮಾನವನ್ನು ನೀಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸೊಸೈಟಿ ಉಪಾಧ್ಯಕ್ಷ ಉಮಾ ನಾಗೇಶ್, ಕಾರ್ಯದರ್ಶಿ ಎನ್.ಟಿ.ವೇಣುಗೋಪಾ ಲ್, ಸಹ ಕಾರ್ಯದರ್ಶಿ ಸುಧೀರ್‌ಕುಮಾರ್, ಖಜಾಂಚಿ ಎ.ಟಿ.ನಿಂಗರಾಜ್, ಸ್ಥಳೀಯರು ಉಪಸ್ಥಿತರಿದ್ದರು.

-‌ ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?