ಚಿಕ್ಕಮಗಳೂರು : ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಶಿಕ್ಷಣ ಹಾಗು ಶೈಕ್ಷಣಿಕ ವಿಭಾಗದಲ್ಲಿ ಕೂಡ ವಿಧ್ಯಾರ್ಥಿಗಳು ಹೆಚ್ಚು ಹೆಚ್ಚು ಕ್ರಿಯಾಶೀಲರಾಗಿರುವುದು ಅತ್ಯಂತ ಅವಶ್ಯಕ ಎಂದು ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶ್ರೀ ಗುಣನಾಥಸ್ವಾಮೀಜಿ ಹೇಳಿದ್ದಾರೆ.
ಚಿಕ್ಕಮಗಳೂರು ನಗರದ ಆದಿಚುಂಚನಗಿರಿ ಬಿ.ಜಿ.ಎಸ್ ಪಿ ಯು ಸಿ ಕಾಲೇಜಿನಲ್ಲಿ ಭಾನುವಾರ ನಡೆದ ವಿಧ್ಯಾರ್ಥಿಗಳು ಹಾಗು ಪೋಷಕರ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಅವರು ಇಂದು ಎಲ್ಲಾ ಕ್ಷೆತ್ರಗಳಲ್ಲಿ ನಮ್ಮ ದೇಶ ಮುಂದುವರೆಯುತ್ತಿದೆ. ವಿಜ್ಞಾನ, ತಂತ್ರಜ್ಞಾನ, ಕೃಷಿ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ದೇಶ ಮುಂದುವರೆಯುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿ ದುಡಿಮೆಗೆ ಸಾಧನೆಗೆ ವಿಫುಲ ಅವಕಾಶಗಳಿದ್ದು ವಿಧ್ಯಾರ್ಥಿಗಳು ಸರಿಯಾಗಿ ಬಳಸಿಕೊಳ್ಳಬೇಕು.
ಶಿಕ್ಷಣದ ಸಮಯದಲ್ಲಿ ಉತ್ತಮ ಜ್ಞಾನವನ್ನು ಪಡೆದುಕೊಂಡಾಗ ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಿದೆ. ವಿಧ್ಯಾರ್ಥಿಗಳೀಗೆ ಉತ್ತಮ ಜ್ಞಾನವನ್ನು ನೀಡಲು ಆದಿಚುಂಚನಗಿರಿ ಶ್ರೀ ಮಠ ಬಿ.ಜಿ.ಎಸ್ ಸಂಸ್ಥೆ ಎಲ್ಲಾ ರೀತಿಯಲ್ಲು ಸಿದ್ದವಾಗಿದೆ ಮತ್ತು ನೂತನ ತಂತ್ರಜ್ಞಾನ, ಉತ್ತಮ ಸಿಬ್ಬಂದಿಗಳು, ಕಲಿಕೆಗೆ ಬೇಕಾದ ಉಪಕರಣಗಳನ್ನು ಬಳಸಿಕೊಂಡು ಸಂಸ್ಥೆಗಳಲ್ಲಿ ಬೋದಿಸಲಾಗುತ್ತಿದ್ದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಇವೆಲ್ಲವು ನೆರವಾಗಲಿದೆ ಎಂದರು. ಸಂಸ್ಥೆಗಳಲ್ಲಿ ಕಲಿಯುವ ಎಲ್ಲಾ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕೆಂಬುದು ಶ್ರೀ ಮಠದ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಬಿ.ಜಿ.ಎಸ್ ಸಂಸ್ಥೆ ವಿಧ್ಯಾರ್ಥಿಗಳೀಗೆ ಸರಿಯಾದ ರೀತಿಯಲ್ಲಿ ಬೋಧನೆ ಮತ್ತು ಕಲಿಕೆಗೆ ಹೆಚ್ಚು ಒತ್ತು ನೀಡುತ್ತದೆ ಎಂದರು.

ಎ.ಐ.ಟಿ ಕಾಲೇಜು ಪ್ರಾಂಶುಪಾಲರಾದ ಶ್ರೀ ಜಿ.ಟಿ ಜಯದೇವ್ ಇವರು ಮಾತನಾಡಿ ವಿಧ್ಯಾರ್ಥಿ ದಿಸೆಯಲ್ಲಿ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು. ತಮ್ಮಗೆ ಆಸಕ್ತಿ ಇರುವ ವಿಷಯದಲ್ಲಿ ಉತ್ತಮ ಜ್ಞಾನ ಪಡೆದುಕೊಂಡಾಗ ಮುಂದೆ ಉನ್ನತ್ತ ಹುದ್ದೆಗೆ ಉತ್ತಮ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಿದೆ ಎಂದರು.

ಬಿ.ಜಿ.ಎಸ್ ಪಿಯುಸಿ ಕಾಲೇಜು ಪ್ರಾಂಶುಪಾಲರಾದ ಸುರೇಂದ್ರ, ಬಿ.ಜಿ.ಎಸ್ ವಿಧ್ಯಾ ಸಂಸ್ಥೆಗಳ ಡೀನ್ ಶ್ರೀ ಸಂಜಯ್ ಮಿರ್ಜಿ, ಎ.ಜಿ.ಎಂ ಶ್ರೀ ಧನಂಜಯ್ ಹಾಗು ವಿಧ್ಯಾರ್ಥಿಗಳು ಭಾಗವಹಿಸಿದ್ದರು.