ಚಿಕ್ಕಮಗಳೂರು-ಕಾಯಕ-ದಾಸೋಹ-ಜ್ಞಾನ-ಬೋಧಿಸಿದ-ಸಂತರು- ದಾಸಿಮಯ್ಯನವರು-ಜಿಲ್ಲಾ-ದೇವಾಂಗ-ಸಂಘದ-ಅಧ್ಯಕ್ಷ-ಭಗವತಿ- ಹರೀಶ್

ಚಿಕ್ಕಮಗಳೂರು:- ಕಾಯಕ, ದಾಸೋಹ ಮತ್ತು ಜ್ಞಾನ ಬೋಧನೆಗಳೆಂಬ ತತ್ವಪದಗಳ ಮೂ ಲಕ ಸಮಾಜದಲ್ಲಿರುವ ಜಾತೀಯತೆ, ಮೂಢನಂಬಿಕೆ ಹೋಗಲಾಡಿಸಿ ಸಮಾನತೆಯನ್ನು ಸಾರಿದ ಶ್ರೇಷ್ಟರು ಶ್ರೀ ದೇವರ ದಾಸಿಮಯ್ಯನವರು ಎಂದು ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಭಗವತಿ ಹರೀಶ್ ಹೇಳಿದರು.

ನಗರದ ಎಂ.ಜಿ.ರಸ್ತೆ ಸಮೀಪದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಜಿಲ್ಲಾ ದೇವಾಂಗ ಸಂಘ, ಬನಶಂಕರಿ ಮಹಿಳಾ ಸಂಘ ಸಹಯೋಗದಲ್ಲಿ ಆಯೋಜಿಸಿದ್ದ 1045 ನೇ ಶ್ರೀ ದೇವರ ದಾಸಿಮಯ್ಯ ಜಯಂತಿಯನ್ನು ಬುಧವಾರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ವಚನಗಳ ಮೂಲಕ ಸಮಾಜದ ಅಂಕುಡೊಂಡುಗಳನ್ನು ತಿದ್ದುವ ಕೆಲಸ ಮಾಡಿದ ದೇವರ ದಾಸಿಮಯ್ಯ ೧೦ನೇ ಶತಮಾನದಲ್ಲಿದ್ದ ಆದ್ಯ ವಚನಕಾರ, ಸ್ತ್ರೀ ಸಮಾನತೆ ಬಗ್ಗೆ ಒತ್ತಿ ಹೇಳಿದ, ಕಾಯಕದ ಮಹತ್ವ ತಿಳಿಸಿದ, ಜಾತೀಯತೆ ಮುಕ್ತ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಮಹಾಜ್ಞಾನಿ ಎಂದರು.

ಸಮಾಜದಲ್ಲಿ ಮೌಢ್ಯ, ಕಂದಾಚಾರದ ವಿರುದ್ಧ ಕ್ರಾಂತಿಕಾರ ಹೆಜ್ಜೆನಗಳನ್ನಿಟ್ಟ ಶರಣರು ವೈಚಾರಿಕ ಚಿಂತನೆ ಗಳ ಮೂಲಕ ಜನರಿಗೆ ಅರಿವಿನ ದಾರಿ ತೋರಿದವರು. ಮನುಷ್ಯನಲ್ಲಿನ ಅಹಂಕಾರವನ್ನು ತೊರೆದು ಭಕ್ತಿ ಮಾರ್ಗದಲ್ಲಿ ನಡೆದಾಗ ಮಾತ್ರ ಭಗವಂತನ ಸಾಕ್ಷಾತ್ಕಾರವಾಗಲಿದೆ ಎಂಬ ತತ್ವವನ್ನು ಸಾರಿದವರು ಎಂದರು.ಸಾಹಿತಿ ಹೆಚ್.ಹೇಮಾವತಿ ಚಂದ್ರಶೇಖರಯ್ಯ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ದೇವಾಂಗ ಜನಾಂಗ ಶಿವನಪಾಲ ನೇತ್ರದಿಂದ ಜನನಗೊಂಡವರೆಂಬ ಹಿರಿಮೆಯಿದೆ. ಬದುಕಿನಲ್ಲಿ ಸಿರಿಸಂಪತ್ತು ಕ್ಷಣಿಕ, ಜ್ಞಾನ ಸಂಪತ್ತು ಶಾಶ್ವತ ಎಂಬ ತತ್ವ ಸಾರಿದ ಸಂತರು ಎಂದ ಅವರು ನೇಕಾರಿಕೆಯಲ್ಲಿ ದಾಸಿಮಯ್ಯನವರು ನೇಯ್ಯುತ್ತಿ ದ್ದರೆ ಖುದ್ದು ಶಿವನ ನೃತ್ಯಗೈಯ್ಯುವ ಎಂಬ ಪ್ರತೀತಿಯಿದೆ ಎಂದು ಹೇಳಿದರು.‌

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದೇವಾಂಗ ಸಂಘದ ಅಧ್ಯಕ್ಷ ಕೆ.ಶ್ರೀನಿವಾಸ್ ಸಮಾಜದಲ್ಲಿನ ಕಂದಾಚಾರ, ಮೌಡ್ಯ , ಅಂಧ ಶ್ರದ್ದೆಗಳ ಬಗ್ಗೆ ದನಿ ಎತ್ತಿದವರು ದೇವರ ದಾಸಿಮಯ್ಯ, ಜನ ಸಾಮಾನ್ಯರ ಬದುಕು, ಭಾವನೆಗಳನ್ನು ಕಾವ್ಯವನ್ನಾಗಿಸಿ, ತಮ್ಮ ಅನುಭವದ ಮೂಲಕ ವಚನಗಳನ್ನು ರಚಿಸಿ, ಕಾಯಕದ ಮಹತ್ವವನ್ನು ತಿಳಿ ಸಿದ ವಚನಕಾರರು ಎಂದು ಬಣ್ಣಿಸಿದರು.

ಶ್ರೀ ದೇವರ ದಾಸಿಮಯ್ಯ ಜಯಂತಿ ಏಪ್ರಿಲ್ 13 ರಂದು ಶಿವನಿ ಗ್ರಾಮದಲ್ಲಿ ಅತ್ಯಂತ ವಿಜೃಂಭ್ರಣೆಯಿಂದ ಹಮ್ಮಿಕೊಳ್ಳಲಾಗಿದ್ದು ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ದಾಸಿಮಯ್ಯನವರ ವಿಚಾರಧಾರೆ-ತತ್ವಪದಗಳನ್ನು ಎಲ್ಲೆಡೆ ಪಸರಿಸುವ ಕಾರ್ಯ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ದೇವಾಂಗ ಸಂಘದ ಸಂಘಟನಾ ಕಾರ್ಯದರ್ಶಿ ಸಿ.ಎಸ್.ರವಿಕುಮಾರ್, ನಿರ್ದೇಶಕ ಹರೀಶ್, ಜಿಲ್ಲಾ ದೇವಾಂಗ ಸಂಘದ ಉಪಾಧ್ಯಕ್ಷ ಕುಮಾರಸ್ವಾಮಿ, ಸಂಘಟನಾ ಕಾರ್ಯದರ್ಶಿ ದಿನೇ ಶ್, ಬನಶಂಕರಿ ಮಹಿಳಾ ಮಂಡಳಿ ಅಧ್ಯಕ್ಷೆ ಸುವರ್ಣ ಕೇಶವಮೂರ್ತಿ, ಮುಖಂಡರಾದ ಸಿ.ಆರ್.ಚಂದ್ರಶೇಖರ ಯ್ಯ, ವಾಣಿ, ಉಮಾ ಪ್ರೇಮ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?