ಚಿಕ್ಕಮಗಳೂರು– ಪ್ರಯಾಗ್‌ರಾಜ್‌ನ ಮಹಾಕುಂಬಮೇಳದ ತ್ರೀವೇಣಿ ಸಂಗಮದಲ್ಲಿ ಸಂಗ್ರಹಿಸಿದ ಪವಿತ್ರ ತೀರ್ಥವನ್ನು ತಾಲ್ಲೂಕಿನ ಬೊಗಸೆ ಗ್ರಾಮದ ವಿನೋದ್ ಎಂಬುವವರು ಸುತ್ತಮುತ್ತಲ ದೇವಾಲಯಗಳ ಅಭಿಷೇಕಕ್ಕೆ ಹಾಗೂ ಸ್ಥಳಿಯ ನಿವಾಸಿಗಳಿಗೆ ಶುಕ್ರವಾರ ವಿತರಿಸಿದರು.
ಗ್ರಾಮದ ಶ್ರೀ ತಿರುಮಲ ಲಕ್ಷ್ಮೀ ದೇವಾಲಯ, ಕೆಂಚದೇವರು, ಭೂತಪ್ಪ, ಚೌಡೇಶ್ವರಿ, ನಾಗದೇವತೆ ದೇಗುಲಗಳಿಗೆ ತಲುಪಿಸಿದ ಬಳಿಕ ಅರ್ಚಕರು ಪವಿತ್ರ ತೀರ್ಥವನ್ನು ಪೂಜಿಸಿ, ವಿಗ್ರಹ ಮೂರ್ತಿಗೆ ಅಭಿಷೇಕ ನಡೆಸಿದರು. ಅದರಂತೆ ಪರದೇಶಪ್ಪನವರ ಮಠದ ಸಿದ್ದೇಶ್ವಸ್ವಾಮಿಗೆ ತೀರ್ಥವನ್ನು ನೀಡಲಾಯಿತು.
ಬಳಿಕ ಮಾತನಾಡಿದ ಗ್ರಾ.ಪಂ. ಸದಸ್ಯ ವಿನೋದ್ ಮಹಾಕುಂಭದಲ್ಲಿ ಸಂಗಮದಲ್ಲಿ ಸ್ನಾನಗೈದು, ದರ್ಶನ ಭಾಗ್ಯ ಕರುಣಿಸಿದ ಬಳಿಕ ದೈವಿಕ ಹಾಗೂ ಆಧ್ಯಾತ್ಮಿಕ ಶಕ್ತಿ ಪಡೆದಂಥ ಅನುಭವ ದೊರೆಯಿತು. ಸನಾತನ ಹಿಂದೂ ಧರ್ಮಕ್ಕೆ ಮತ್ತು ಗೋಮಾತೆಗೆ ಜಯವಾಗಲೀ ಎಂಬ ಜಯಘೋಷಗಳು ಮೊಳಗಿದ್ದು ಕಂಡು ಬಂದವು.
ಗ್ರಾಮದ ಸುಮಾರು ಏಳೆಂಟು ದೇವಾಲಯ, 20ಕ್ಕೂ ಹೆಚ್ಚು ಕುಟುಂಬಗಳಿಗೆ ಪವಿತ್ರ ಗಂಗಾತೀರ್ಥವನ್ನು ವಿತರಿಸಲಾಯಿತು. ಇನ್ನುಳಿದ ಗ್ರಾಮಸ್ಥರು ಲಕ್ಷ್ಮಿ ದೇವಸ್ಥಾನದಲ್ಲಿ ಶಿವರಾತ್ರಿ ದಿನದಂದು ಗಂಗಾಜಲ ವನ್ನು ತೆಗೆದುಕೊಂಡು ಹೋಗಬಹುದು ಎಂದು ತಿಳಿಸಿರು.
ಈ ಸಂದರ್ಭದಲ್ಲಿ ದೇವಾಲಯ ಅರ್ಚಕ ದಿನೇಶ್, ಸ್ಥಳೀಯರಾದ ದಿನೇಶ್, ಹೂವಮ್ಮ, ಸತೀಶ್, ಶಿವಣ್ಣಗೌಡ ಮತ್ತಿತರರಿದ್ದರು.