ಚಿಕ್ಕಮಗಳೂರು:- ಆಧುನಿಕತೆ ಬೆಳೆದಂತೆ ವೈದ್ಯಕೀಯ ಉಪಕರಣಗಳು ಬದಲಾವಣೆ ಯಾಗುತ್ತಿವೆ. ಡಿಜಿಟಲ್ ಸ್ಟೆತೊಸ್ಕೋಪ್‌ನ ಅತ್ಯಾಧುನಿಕ ತಂತ್ರಜ್ಞಾನದಿಂದ ರೋಗಿಯ ಲಕ್ಷಣಗಳು ಶೀಘ್ರಗತಿ ಯಲ್ಲಿ ಕಂಡು ಹಿಡಿಯಲು ಸಾಧ್ಯವಾಗುತ್ತಿದೆ ಎಂದು ಆಯು ಡಿವೈಜ್ಸ್ ಸಂಸ್ಥೆ ಮುಖ್ಯಕಾರ್ಯನಿರ್ವಹಣಾ ಧಿಕಾರಿ ಕೆ.ಆದರ್ಶ ಹೇಳಿದರು.
ನಗರದ ಆದಿಚುಂಚನಗಿರಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ವಿದ್ಯುತ್ ಮತ್ತು ವಿದ್ಯುನ್ಮಾನ ಎಂಜಿನಿಯರಿAಗ್ ವಿಭಾಗ ವಿದ್ಯಾರ್ಥಿಗಳಿಗೆ ಆಯೋಜಿಸಿದ್ಧ ‘ವಿದ್ಯುಯೂತ್’ ಕಾರ್ಯಕ್ರಮವನ್ನು ಶನಿವಾರ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಇತ್ತೀಚೆಗೆ ಹೊಸ ಹೊಸ ಆವಿಷ್ಕಾರಗಳು ಪ್ರಚಲಿತಕ್ಕೆ ಬರುತ್ತಿವೆ. ಅತ್ಯಾಧುನಿಕ ತಂತ್ರಜ್ಞಾನದಿAದ ಹೊಸ ಆಯಾಮವನ್ನೇ ವೈದ್ಯಲೋಕ ಸೃಷ್ಟಿಸುತ್ತಿದೆ. ಆಪರೇಷನ್ ಅಥವಾ ಇನ್ನಿತರೆ ಚಿಕಿ ತ್ಸೆಗಳಿಗೆ ತಂತ್ರಜ್ಞಾನ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಉತ್ತಮ ಆರೋಗ್ಯ ಸೇವಾ ಅನುಭವಕ್ಕಾಗಿ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಇಜಿ ಜಿ, ಡಿಜಿಟಲ್ ಸ್ಟೆತೊಸ್ಕೋಪ್ ಹಾಗೂ ಭವಿಷ್ಯದಲ್ಲಿ ಬೆರಳು ಆಧಾರಿತ ರಕ್ತದೊತ್ತಡವನ್ನು ಕಂಡುಹಿಡಿಯ ಬಹುದು. ಸ್ಪಷ್ಟತೆ ಮತ್ತು ನಿಖರತೆಗಾಗಿ ಮೀಸಲಾದ ಫಿಲ್ಟರ್ ಅನ್ನು ಒದಗಿಸಲು ಈ ತಂತ್ರಜ್ಞಾನವನ್ನು ವಿನ್ಯಾ ಸಗೊಳಿಸಲಾಗಿದೆ ಎಂದರು.
ನಿಖರವಾದ ರೋಗನಿರ್ಣಯ ಮತ್ತು ಮೇಲ್ವಿಚಾರಣೆಗಾಗಿ ಔಷಧದೊಂದಿಗೆ ತಂತ್ರಜ್ಞಾನವನ್ನು ಮಿಶ್ರಣ ಮಾಡುವ ಮೂಲಕ ಆರೋಗ್ಯವನ್ನು ಸುಧಾರಿಸಲು ಮತ್ತು ಜೀವಿತಾವಧಿಯನ್ನು ವಿಸ್ತರಿಸಲು ನಾವು ಶ್ರ ಮಿಸುತ್ತೇವೆ. ಆರೋಗ್ಯದ ಫಲಿತಾಂಶಗಳನ್ನು ಹೆಚ್ಚಿಸಲು ನವೀನ ಆರೋಗ್ಯ ಉತ್ಪನ್ನಗಳು ಮತ್ತು ಅಸಾಧಾ ರಣ ಸೇವೆಯನ್ನು ನೀಡುವುದು ಧ್ಯೇಯವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಐಟಿ ಕಾಲೇಜು ಪ್ರಾಂಶುಪಾಲ ಡಾ|| ಸಿ.ಟಿ.ಜಯದೇವ್ ಜ್ಞಾನದ ಬೆಳಕು ಎಲ್ಲಿಂದ ಬಂದರೂ ಸ್ವೀಕರಿಸುವ ಗುಣ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಜ್ಞಾನದ ಹಸಿ ವಿದವನಿಗೆ ಮಾತ್ರ ಬೆಳಕಿನ ಮಹತ್ವ ತಿಳಿಯಲಿದೆ. ಹೀಗಾಗಿ ಹೊಸ ಆವಿಷ್ಕಾರಗಳತ್ತ ಆಸಕ್ತಿ ವಹಿಸಬೇಕು ಎಂ ದು ಹೇಳಿದರು.
ಬದುಕಿನಲ್ಲಿ ವಿದ್ಯಾಭ್ಯಾಸ ಹಾಗೂ ಅನುಭವಗಳು ಆಳವಾಗಿ ಇದ್ದಲ್ಲಿ ಯಾವುದೇ ಜಟಿಲ ಸಮಸ್ಯೆಗಳ ನ್ನು ಕ್ಷಣಾರ್ಧದಲ್ಲಿ ಅರಿತು ಪರಿಹರಿಸಲು ಸಾಧ್ಯ. ಹೀಗಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಆದರ್ಶ ಅತ್ಯು ತ್ತಮ ಉದಾಹರಣೆ ಎಂದ ಅವರು ಕೋವಿಡ್ ಸಮಯದಲ್ಲಿ ವಿಶೇಷವಾಗಿ ಸೇವೆ ಸಲ್ಲಿಸುವ ಮೂಲಕ ಜೀ ವ ಮತ್ತು ಜೀವನ ಕಾಪಾಡಿದ್ದಾರೆ ಎಂದರು.

ವಿದ್ಯುತ್ ಮತ್ತು ವಿದ್ಯುನ್ಮಾನ ಎಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಡಾ|| ಜಿ.ಆರ್.ವೀರೇಂದ್ರ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಂಯಮ, ವಿನಯ ಅತಿಮುಖ್ಯ. ಕಾರ್ಯಾಗಾರದ ವಿಶೇಷ ಮಾಹಿತಿ ಯನ್ನು ಅರಿತು ಮುನ್ನೆಡೆದರೆ ಮಾತ್ರ ಸಮಾಜದಲ್ಲಿ ಸ್ಥಾನಮಾನ ಗಳಿಸಲು ಸಾಧ್ಯ ಹಾಗೂ ಸುಂದರತೆ ಬದು ಕು ಸಿಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಡಾ|| ಜೆ.ಎಂ.ಸತ್ಯನಾರಾಯ ಣ್, ಮಾಹಿತಿ ವಿಜ್ಞಾನದ ಮುಖ್ಯಸ್ಥ ಡಾ|| ಸಂಪತ್, ಸಂಯೋಜಕರಾದ ವಸಂತ್‌ಕುಮಾರ್, ಶ್ರೀಧರ್ ಉಪಸ್ಥಿತರಿದ್ದರು. ಕು.ಲಿಖಿತ ಸಂಗಡಿಗರು ಪ್ರಾರ್ಥಿಸಿ ದರು. ಕು.ಸ್ಪೂರ್ತಿ ಸ್ವಾಗತಿಸಿದರು. ವಿಜಯವಿಕ್ರಮ್, ಶಾಯಿಲಾ ನಿರೂಪಿಸಿದರು. ಕು.ಅರ್ಚನ ವಂದಿಸಿದರು.
- ಸುರೇಶ್ ಎನ್.