ಚಿಕ್ಕಮಗಳೂರು, ಮೇ 12: ಪೌರ ನೌಕರರ ಸಂಘವು ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಪೌರಕಾರ್ಮಿಕರ ಮಹಾಸಂಘ ಬೆಂಬಲ ನೀಡುವುದಿಲ್ಲ ಎಂದು ಸಂಘದ ಜಿಲ್ಲಾಧ್ಯಕ್ಷ ಮುರುಗೇಶ್ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಇದೇ ಮೇ 27 ರಂದು ರಾಜ್ಯದಾದ್ಯಂತ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರ ನೌಕರರ ಸಂಘದ ವತಿಯಿಂದ ಜರಿಗಿಸಲಿರುವ ಪ್ರತಿಭಟನೆಯನ್ನು ಪೌರಕಾರ್ಮಿಕರ ಮಹಾಸಂಘ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ಮುಖ್ಯಮಂತ್ರಿ ಎಲ್ಲ ಪೌರಕಾರ್ಮಿಕರು, ಹೊರಗುತ್ತಿಗೆ ಪೌರಕಾರ್ಮಿಕರು, ವಾಹನ ಚಾಲಕರು, ಲೋಡರ್‌ಗಳು, ಕ್ಲೀನರ್‌ಗಳು ನೇರ ಪಾವತಿಗೆ ತೆಗೆದುಕೊಳ್ಳಲ್ಪಟ್ಟು ಖಾಯಂಗೊಳಿಸಲಾಗುವುದು ಎಂದು ಘೋಷಿಸಿರುವುದನ್ನು ಜಿಲ್ಲಾ ಸಂಘ ಸ್ವಾಗತಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ತರೀಕೆರೆ ಎನ್. ವೆಂಕಟೇಶ್, ಕೀರ್ತಿಕುಮಾರ್, ಪ್ರವೀಣ್ ಕುಮಾರ್, ಭರತ್ ಹಾಗೂ ಇತರರು ಉಪಸ್ಥಿತರಿದ್ದರು.
- ಸುರೇಶ್ ಎನ್.,