ಚಿಕ್ಕಮಗಳೂರು-ಸಾವಯವ-ಗೊಬ್ಬರ-ರಿಯಾಯಿತಿ-ದರದಲ್ಲಿ- ಮಾರಾಟ-ಸುಜಾತ

ಚಿಕ್ಕಮಗಳೂರು:- ನಗರ ಪ್ರದೇಶದಲ್ಲಿ ಸಂಗ್ರಹಿಸುವ ದೈನಂದಿನ ಕಸದ ತ್ಯಾಜ್ಯಗಳನ್ನು ವಿಂಗಡಿಸಿ, ಸಾವಯವ ಗೊಬ್ಬರವನ್ನಾಗಿ ಮಾರ್ಪಾಡಿಸಿ ರಿಯಾಯಿತಿ ದರದಲ್ಲಿ ಕೃಷಿಕರಿಗೆ ಮಾರಾಟ ಮಾ ಡಲಾಗುತ್ತಿದೆ ಎಂದು ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್ ಹೇಳಿದರು.

ತಾಲ್ಲೂಕಿನ ಇಂದಾವರ ಗ್ರಾಮದ ಸಮೀಪ ಕಸ ವಿಲೇವಾರಿ ಘಟಕದಲ್ಲಿ ಕಸವನ್ನು ವಿಂಗಡಿಸಿ ‘ಗಿರಿ ಹಸಿರು’ ಎಂಬ ಹೆಸರಿನ ಮೂಲಕ ಸಾವಯಾವ ಗೊಬ್ಬರವನ್ನು ತಯಾರಿಸಿ ರೈತರು, ಬೆಳೆಗಾರರಿಗೆ ಕೆಜಿಗೆ 3 ರೂ.ಗಳ ದರದಂತೆ ಕಡಿಮೆ ಶುಲ್ಕದಲ್ಲಿ ಒದಗಿಸಲಾಗುತ್ತಿದೆ ಎಂದರು.
ಟನ್‌ಗಟ್ಟಲೇ ಸಂಗ್ರಹಿಸುವ ಕಸವನ್ನು ವಿಲೇವಾರಿ ಘಟಕದಲ್ಲಿ ಪ್ಲಾಸ್ಟಿಕ್‌ನಿಂದ ಬೇರ್ಪಡಿಸಿ ಟ್ರಾಮರ್ ಯಂತ್ರದ ಸಹಾಯದಿಂದ ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಅಂತಿಮ ಹಂತದಲ್ಲಿ ಸಾವಯವ ಗೊಬ್ಬರ ತಯಾರಿಕೆಯಾಗಲಿದೆ. ಪ್ರಸ್ತುತ ೩೫೦ ಟನ್‌ಗಳಷ್ಟು ಗೊಬ್ಬರವನ್ನು ಹರಾಜು ಮೂಲಕ ಮಾರಾಟ ಮಾಡಲಾಗಿದೆ ಎಂದರು.

ಪ್ರಸ್ತುತ ಗೊಬ್ಬರವು ಮಾರುಕಟ್ಟೆ ದರದಲ್ಲಿ ಅಧಿಕಾರ ಮೊತ್ತದಲ್ಲಿದೆ. ಆದರೆ ನಗರಸಭೆ 3 ರೂ.ಗಳಿಗೆ ಸೀಮಿತಗೊಳಿಸಿದೆ. ಗೊಬ್ಬರದ ಬೇಡಿಕೆ ಹೆಚ್ಚಾದಂತೆ ನಿಗಧಿತ ದರದಲ್ಲಿ ಕೊಡಲಾಗುವುದು. ಘಟಕದಲ್ಲಿ ಇರುವ ಕಸವನ್ನು ಟ್ರಾಮರ್ ಯಂತ್ರದ ಸಹಾಯದಿಂದ ಬೇರ್ಪಡಿಸಿ ಗೊಬ್ಬರವನ್ನಾಗಿ ಮಾರ್ಪಾಡು ಮಾಡ ಲಾಗುವುದು ಎಂದರು.

ನಗರಸಭಾ ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ ಕಸದ ತ್ಯಾಜ್ಯವನ್ನು ಸಂಸ್ಕರಿಸಿ, ಗೊಬ್ಬರ ತಯಾರಿಸಿ ಹರಾಜು ಮುಖಾಂತರ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ಸಾರ್ವಜನಿಕ ವಲಯದಲ್ಲಿ ಕಸದಿಂದ ಗೊಬ್ಬರ ತಯಾರಿಸುವ ಪ್ರಕ್ರಿಯೆಯನ್ನು ಮನವರಿಕೆ ಮಾಡಲಾಗುತ್ತಿದೆ ಎಂದರು.


ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲೇ ಬೀಸಾಡುವ ಬದಲು ಕಸದ ವಾಹನಗಳಿಗೆ ಹಾಕಬೇಕು. ಇದರಿಂದ ಗೊಬ್ಬರ ತಯಾರಿಸಿ ರೈತರು ಫಸಲಿಗೆ ಸಹಾಯ ಕಲ್ಪಿಸಲಾಗುತ್ತಿದೆ. ಈ ಹರಾಜು ಪ್ರಕ್ರಿ ಯೆಯಲ್ಲಿ ಬಿಡ್ಡುದಾರರು ಭಾಗವಹಿಸಿ ಕೆಜಿಗೆ 3 ರೂ.ಗಳಂತೆ ಖರೀದಿಸಿದ್ದಾರೆ ಎಂದರು.
ಪ್ರತಿ ಮೂರು ತಿಂಗಳಿಗೊಮ್ಮೆ ಈ ರೀತಿಯ ಕಸವನ್ನು ವಿಂಗಡಿಸುವ ಮೂಲಕ ಗೊಬ್ಬರ ತಯಾರಿಸಿ ಮಾರಾಟಕ್ಕೆ ಮುಂದಾಗುತ್ತೇವೆ. ಈ ರೀತಿಯ ಉತ್ತಮ ಕೆಲಸಕ್ಕೆ ಸಾರ್ವಜನಿಕರ ಸಹಕಾರವು ಅತ್ಯವಶ್ಯಕವಾ ಗಿದೆ. ಹೀಗಾಗಿ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ನೀಡಿದರೆ ಗೊಬ್ಬರ ತಯಾರಿಸಲು ಇನ್ನಷ್ಟು ಅನು ಕೂಲವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ತೇಜಸ್ವಿನಿ, ಹಿರಿಯ ಆರೋಗ್ಯ ನಿರೀ ಕ್ಷಕರಾದ ಕೆ.ಎಸ್.ಈಶ್ವರಪ್ಪ, ವೆಂಕಟೇಶ್, ಬಿಡ್ಡುದಾರರು ಸೇರಿದಂತೆ ಮತ್ತಿತರಿದ್ದರು.

-ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?