ಚಿಕ್ಕಮಗಳೂರು – ನರ್ಸಿಂಗ್ ವೃತ್ತಿ ಅತ್ಯಂತ ಪವಿತ್ರವಾದದ್ದು. ತಾಳ್ಮೆ-ಸಹನೆ ಅಪೇಕ್ಷಿಸುತ್ತದೆ ಎಂದು ಅರಳುಗುಪ್ಪೆ ಮಲ್ಲೇಗೌಡ ಸಾರ್ವಜನಿಕ ಜಿಲ್ಲಾಸ್ಪತ್ರೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಕೆ.ಎಂ.ಸುಶೀಲಾ ಅಭಿಪ್ರಾಯಿಸಿದರು.
ಜ್ಯೋತಿನಗರದ ನಿಧಿ ಕಾಲೇಜ್‌ಆಫ್ ನರ್ಸಿಂಗ್ ಮತ್ತು ಶ್ರೀರಾಮಕೃಷ್ಣ ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳ ದೀಪ ಪ್ರಜ್ವಲನ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ನಗರದ ಕುವೆಂಪು ಕಲಾಮಂದಿರದಲ್ಲಿಂದು ಉದ್ಘಾಟಿಸಿ ಅವರು ಮಾತನಾಡಿದರು.
ಕತ್ತಲೆಯಿಂದ ಬೆಳಕಿನಡೆಗೆ ಸಾಗುವುದೇ ನರ್ಸಿಂಗ್ ವೃತ್ತಿ. ಇದು ಸರಳವೂ ಅಲ್ಲ ಸುಲಭವೂ ಅಲ್ಲ. ರೋಗಿಯ ಜೀವ ಮತ್ತು ಜೀವನದ ಜೊತೆ ಕೆಲಸ ಮಾಡುವ ಮಹತ್ವದ ಕಾಯಕ. ಆಸ್ಪತ್ರೆಗಳಲ್ಲಿ ದಿನಕ್ಕೆ ಒಂದೆರಡು ಬಾರಿ ಮಾತ್ರ ವೈದ್ಯರು ರೋಗಿಯನ್ನು ನೋಡಲು ಬರುತ್ತಾರೆ. ಆದರೆ ನರ್ಸ್ ಸಂಕಷ್ಟದ ಸಂದರ್ಭದಲ್ಲಿ ರೋಗಿಯ ಜೊತೆಗೆ 24 ಗಂಟೆಗಳೂ ಇರಬೇಕಾಗುತ್ತದೆ. ರೋಗಿ ಮತ್ತು ಅವರ ಕಡೆಯವರ ವಿಶ್ವಾಸ ಗಳಿಸಿ ಅವರ ಕಷ್ಟ-ಸುಖಗಳನ್ನು ಅರ್ಥಮಾಡಿಕೊಂಡು ವೈದ್ಯರಿಗೆ ತಿಳಿಸಿದರೆ ಚಿಕಿತ್ಸೆ ಪರಿಣಾಮಕಾರಿಯಾಗಿರಲು ಸಾಧ್ಯವಾಗುತ್ತದೆ ಎಂದರು.
ನರ್ಸಿಂಗ್ ಕಲಿಕಾ ಸಂದರ್ಭದಲ್ಲಿ ಪೂರ್ಣಪ್ರಮಾಣದಲ್ಲಿ ಶ್ರದ್ಧೆಯಿಂದ ಗಮನಿಸಬೇಕು. ಓದಿದ್ದನ್ನು ಅರ್ಥಮಾಡಿಕೊಂಡು ಪ್ರಯೋಗಿಸಿ ಅನುಭವ ಪಡೆಯಲು ಕ್ಲಿನಿಕಲ್ ಸಹಾಯಕ. ರಕ್ತ ನೋಡಿ ಗಾಬರಿಯಾದರೆ ಚಿಕಿತ್ಸೆ ಕೊಡಲು ಸಾಧ್ಯವಾಗದು. ರೋಗಿಯ ಸ್ಥಿತಿಗತಿ ಕಂಡು ಆತಂಕ-ವಿಚಲಿತರಾಗದೆ ಸಮಾಧಾನ ಸ್ಥಿತಿಯಲ್ಲಿ ಶುಶ್ರೂಷೆ ಮಾಡುವ ಮನಸ್ಥಿತಿ ಇಲ್ಲಿ ಮುಖ್ಯವಾಗುತ್ತದೆ ಎಂದರು.

ದೇಶ-ವಿದೇಶಗಳಲ್ಲಿ ಇಂದು ನರ್ಸಿಂಗ್ ವೃತ್ತಿಯ ಅರಿವಿದೆ-ಅವಕಾಶಗಳಿವೆ. ಶೇ.1೦೦ರಷ್ಟು ಪ್ರಾಮಾಣಿಕವಾದ ಪ್ರಯತ್ನ ಮಾಡಿದರೆ ರೋಗಿಗಳ ನೋವು ಮತ್ತು ಸಂಕಷ್ಟಗಳನ್ನು ದೂರಮಾಡಲು ಅನುಕೂಲ ಎಂದ ಸುಶೀಲಾ, ಇಂದು ಸ್ವೀಕರಿಸಿರುವ ಪ್ರತಿಜ್ಞಾವಿಧಿಯನ್ನು ಜೀವನಪೂರ್ತಿ ಪಾಲಿಸುವ ಸಂಕಲ್ಪ ಮಾಡಬೇಕು ಎಂದರು.
ನಿಧಿ ಎಜ್ಯುಕೇಷನ್ ಸೊಸೈಟಿ ಆಡಳಿತಾಧಿಕಾರಿ ಎಚ್.ಎಸ್.ಉಮಾಮಹೇಶ್ವರಯ್ಯ ಮಾತನಾಡಿ ವಿಶಾಲವಾದ ಕ್ಯಾಂಪಾಸ್‌ನಲ್ಲಿ ನರ್ಸಿಂಗ್ ವೃತ್ತಿಗೆ ಪೂರಕವಾದ ವಿವಿಧ ತರಬೇತಿ ತರಗತಿಗಳು ನಡೆಯುತ್ತಿವೆ. ಇಂದು ಡಿಜಿಎನ್‌ಎಂ ೨೮ನೆಯ ತಂಡ ಮತ್ತು 17ನೆಯ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿಗಳು ಮೊಂಬತ್ತಿಹಚ್ಚಿ ಫ್ಲಾರೆನ್ಸ್ ನೈಟಿಂಗೇಲ್ ಭಾವಚಿತ್ರಕ್ಕೆ ಗೌರವಸಲ್ಲಿಸಿ ಪ್ರತಿಜ್ಞೆ ಸ್ವೀಕರಿಸಿದ್ದಾರೆಂದರು.
ಸಮಾರAಭದ ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲೆ ಪ್ರೀತಾ ಮಾತನಾಡಿ ರಾಜ್ಯ-ಹೊರರಾಜ್ಯದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ನರ್ಸಿಂಗ್ ವಿವಿಧ ಕೋರ್ಸ್ಗಳಲ್ಲಿ ಒಟ್ಟಾಗಿ ಕಲಿಯುತ್ತಿದ್ದು ಭಾವೈಕ್ಯತೆಯನ್ನು ತೋರುತ್ತಿದ್ದಾರೆ. ರಾಷ್ಟ್ರೀಯ ಹಬ್ಬಗಳ ಜೊತೆಗೆ ಸಾಂಪ್ರದಾಯಕ ಹಬ್ಬಗಳನ್ನು ಸಂತೋಷ ಸಂಭ್ರಮದಿಂದ ಒಟ್ಟಾಗಿ ಕಾಲೇಜಿನಲ್ಲಿ ಆಚರಿಸಲಾಗುತ್ತಿದೆ. ಇಂದು ವೃತ್ತಿಜೀವನದ ಪ್ರಮುಖವಾದ ಸಂದರ್ಭವಾಗಿದ್ದು ಶಿಸ್ತುಬದ್ಧವಾಗಿ ಪಾಲ್ಗೊಂಡಿರುವುದು ಸಂತೋಷ ತಂದಿದೆ ಎಂದರು.

ಫರ‍್ಮಸಿ ವಿಭಾಗದ ಪ್ರಾಂಶುಪಾಲ ವೇಣುಗೋಪಾಲ ಮಾತನಾಡಿ ನರ್ಸಿಂಗ್ ವೃತ್ತಿಯನ್ನು ಪ್ರೀತಿಸಿ-ಗೌರವಿಸಬೇಕು. ೩-೪ವರ್ಷಗಳ ಇಲ್ಲಿಯ ಕಲಿಕಾ ಅವಧಿಯಲ್ಲಿ ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ. ಶ್ರದ್ಧೆ, ಪರಿಶ್ರಮದಿಂದ ತೊಡಗಿಸಿಕೊಂಡರೆ ಮುಂದಿನ ಜೀವಿತಾವಧಿ ಚೆನ್ನಾಗಿರುತ್ತದೆ ಎಂದರು.
ಉಪಪ್ರಾAಶುಪಾಲೆ ಲಿನ್ಸಿವರ್ಗೀಸ್ ಪ್ರತಿಜ್ಞಾವಿಧಿ ಬೋಧಿಸಿದರು.
ಆಡಳಿತಾಧಿಕಾರಿ ಬೋಬಿನ್ ಜೋಸೆಫ್, ಜಿಲ್ಲಾಸ್ಪತ್ರೆ ನರ್ಸಿಂಗ್ ವಿಭಾಗದ ಮುಖ್ಯಸ್ಥರಾದ ಕವಿತಾ ಮತ್ತು ಶೋಭರಾಣಿ ಮುಖ್ಯಅತಿಥಿಗಳಾಗಿದ್ದರು. ಆಡಳಿ ಳಿಯಿಂದ ವಿವಿಧ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಉಪನ್ಯಾಸಕಿ ಸರಸ್ವತಿ ಪರಿಚಯಿಸಿದ್ದು, ಆಡಳಿತಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಾದ ದರ್ಶಿನಿ ಸ್ವಾಗತಿಸಿ, ಅಗ್ನಿವರ್ಗೀಸ್ ವಂದಿಸಿದರು. ಮೆಲ್ವಿನ್ ಮತ್ತು ಬೆಸಿಲಿನ್ ಕರ‍್ಯಕ್ರಮ ನಿರೂಪಿಸಿದರು. ಎಲಿಜಬತ್ ತಂಡ ಪ್ರಾರ್ಥಿಸಿದ್ದು ವಿದ್ಯಾರ್ಥಿಗಳಿಂದ ಗಾಯನ ನೃತ್ಯ ಸ್ಕಿಟ್ ಸೇರಿದಂತೆ ವಿವಿಧ ಮನರಂಜನಾ ಕರ‍್ಯಕ್ರಮಗಳು ಗಮನಸೆಳೆದೆವು.