ಚಿಕ್ಕಮಗಳೂರು, ಮೇ.28:– ಮಹಿಳೆಯರು ಶಾರೀರಿಕ ಆರೋಗ್ಯ ಸಮಸ್ಯೆಗಳಲ್ಲಿ ಏರುಪೇರುಗಳು ಕಂ ಡುಬಂದಲ್ಲಿ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ತಪಾಸಣೆಗೊಳಪಡಿಸುವುದು ಅತ್ಯಗತ್ಯ ಎಂದು ಹೋ ಲಿಕ್ರಾಸ್ ಆಸ್ಪತ್ರೆ ವೈದ್ಯ ಡಾ|| ಶೀಲಾ ಹೇಳಿದರು.
ನಗರದ ಹೌಸಿಂಗ್ ಬೋರ್ಡ್ ಸಮೀಪದ ಆಶ್ರಯಮನೆ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಎನ್‌ಐಎಂಎ ಮತ್ತು ಹೋಲಿಕ್ರಾಸ್ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ಧ ಉಚಿತ ಕಣ್ಣಿನ ಮತ್ತು ಸ್ತ್ರೀ ರೋಗ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡ ಅವರು ಮಾತನಾಡಿದರು.
ಇತ್ತೀಚೆಗೆ ಹೆಣ್ಣುಮಕ್ಕಳಲ್ಲಿ ಮುಟ್ಟು, ಗರ್ಭಕೋಶ, ಸ್ತನಕ್ಯಾನ್ಸರ್, ಹೊಟ್ಟೆ ಕ್ಯಾನ್ಸರ್, ಬಂಜೆತನ ಕಾಡು ತ್ತಿವೆ. ಈ ಕಾಯಿಲೆಗಳನ್ನು ಸಮತಟ್ಟಾಗಿರಿಸಲು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಅನುಸರಿಸು ವುದು ಮುಖ್ಯವಾಗಿದ್ದು ಮಹಿಳೆಯರು ಪಾಲಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ದೈನಂದಿನ ಆಹಾರ ಪದ್ಧತಿಯಲ್ಲಿ ಉಪ್ಪು, ಕಾರ ನಿಯಮಿತ, ದಿನದ ಒಂದು ತಾಸು ವ್ಯಾಯಾಮಕ್ಕಾಗಿ ಮುಡಿಪಿಟ್ಟು ಬದುಕಿನ ಒಂದು ಭಾಗವಾಗಿಸಬೇಕು. ಪೌಷ್ಠಿಕಾಂಶಯುಳ್ಳ ಆಹಾರ ಸೇವನೆ, ಆಯಾ ಕಾಲಕ್ಕೆ ತಕ್ಕಂತೆ ಹಣ್ಣುಗಳನ್ನು ಸೇವಿಸಬೇಕು ಎಂದ ಅವರು ಸ್ತಿçÃರೋಗ ಬಳಲುವವರು ಇಷ್ಟೆಲ್ಲಾ ಅಂಶಗಳನ್ನು ಅಳ ವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಎನ್‌ಐಎಂಎ ರಾಜ್ಯ ಉಪಾಧ್ಯಕ್ಷ ಡಾ|| ಅನೀತ್‌ಕುಮಾರ್ ಮಾತನಾಡಿ, ಶರೀರದ ಅತ್ಯಂತ ಸೂಕ್ಷ್ಮ ಅಂಗ ಕಣ್ಣನ್ನು ಕಾಲಾನುಸಾರ ತಪಾಸಣೆಗೊಳಿಸಬೇಕು. ಹೆಚ್ಚಿನ ಮಟ್ಟದಲ್ಲಿ ವೃದ್ದಾಪ್ಯದಲ್ಲಿ ಕಣ್ಣಿನ ಸಮಸ್ಯೆ ಕಾ ಡುತ್ತಿರುವ ಹಿನ್ನೆಲೆ ನಿರ್ಲಕ್ಷö್ಯವಹಿಸದೇ ಅಲ್ಲಲ್ಲಿ ನಡೆಯುವ ಉಚಿತ ಶಿಬಿರಗಳಲ್ಲಿ ಪಾಲ್ಗೊಂಡು ತಪಾಸಣೆಗೆ ಒಳಗಾಗಬೇಕು ಎಂದರು.

ಮಾನವ ಅಂಗಾಂಗಳಲ್ಲಿ ಕಣ್ಣು ಮಾತ್ರ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಪ್ರಕೃತಿಯ ಸಿರಿಸಂಪತ್ತನ್ನು ಕ ಣ್ತುಂಬಿಕೊಳ್ಳುವ ದೃಷ್ಟಿಯನ್ನು ರಕ್ಷಿಸುವ ಕಾರ್ಯದಲ್ಲಿ ಮನುಷ್ಯ ತಾನಾಗಿಯೇ ಜವಾಬ್ದಾರಿ ಹೊರದಿದ್ದಲ್ಲಿ ಶಾಶ್ವತವಾಗಿ ಅಂಧತ್ವಕ್ಕೆ ತುತ್ತಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.
ಇದೇ ವೇಳೆ 50ಕ್ಕೂ ಹೆಚ್ಚು ಮಹಿಳೆಯರು ತಪಾಸಣೆಗೊಳಗಾದರು. ಕಣ್ಣಿನ ತಪಾಸಣೆಯಲ್ಲಿ 55 ಮಂದಿ ತಪಾಸಣೆ ನಡೆಸಿ ಈ ಪೈಕಿ ಆರು ಮಂದಿಗೆ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಉಚಿತ ಶಸ್ತçಚಿಕಿತ್ಸೆಗೆ ನೋಂದಣಿ ಮಾಡಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ನೇತ್ರಾಧಿಕಾರಿ ವಿನಯ್, ಹೋಲಿಕ್ರಾಸ್ ಆಸ್ಪತ್ರೆ ಮಾರ್ಕೇಂಟಿಗ್ ಮ್ಯಾನೇಜರ್ ಗರ್ವಿನ್, ಸ್ಥಳೀಯರಾದ ಪುಟ್ಟಣ್ಣ ಮತ್ತಿತರರು ಉಪಸ್ಥಿತರಿದ್ದರು.
– ಸುರೇಶ್ ಎನ್.