ಚಿಕ್ಕಮಗಳೂರು– ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯು ಸಣ್ಣ ಹಳ್ಳಿಗಳಿಂದ, ದೊಡ್ಡ ನಗರಗಳ ತ್ತ ವ್ಯಾಪಿಸುತ್ತಿರುವ ಕಾರಣ ನಾನಾ ರೋಗಿಗಳು ಸೃಷ್ಟಿಯಾಗುವ ಜೊತೆಗೆ ಪರಿಸರವು ಹಾಳಾಗುತ್ತಿದೆ ಎಂದು ನೇಚರ್ ಕನ್ಸರ್‌ವೇಷನ್ ಟ್ರಸ್ಟ್ ಅಧ್ಯಕ್ಷ ಡಾ|| ಕೆ.ಸುಂದರಗೌಡ ಹೇಳಿದರು.
ತಾಲ್ಲೂಕಿನ ಮೂಗ್ತಿಹಳ್ಳಿ ಗ್ರಾ,ಪಂ. ಆವರಣದಲ್ಲಿ ಪ್ಲಾಸ್ಟಿಕ ಬಳಕೆಯಿಂದಾಗುವ ದುಷ್ಪರಿಣಾಮ ಕುರಿತು ಸಾಮಾಜಿಕ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶನಿವಾರ ಅವರು ಮಾತನಾಡಿದರು.
ಪ್ಲಾಸ್ಟಿಕ ಮಾಲಿನ್ಯದ ಕುರಿತು ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಹೆ ಚ್ಚು ಜವಾಬ್ದಾರಿ ವಹಿಸಬೇಕು. ನಿರ್ಲಕ್ಷö್ಯ ಧೋರಣೆ ಒಳಗಾಗದೆ ಸ್ವಚ್ಚಂಧವಾಗಿ ಕೂಡಿರುವ ಪ್ರಕೃತಿಯನ್ನು ಕಳೆದುಕೊಳ್ಳಬಹುದು ಎಂದು ಎಚ್ಚರಿಸಿದರು.
ಮನೆ ಅಥವಾ ಹೋಟೆಲ್‌ಗಳಲ್ಲಿ ದಿನಸಿ ಪದಾರ್ಥಗಳನ್ನು ತರುವ ಪ್ಲಾಸ್ಟಿಕ್‌ಗಳನ್ನು ಸುಟ್ಟುಹಾಕಲಾಗು ತ್ತಿದೆ. ಇದರಿಂದ ಕಣ್ಣಿನ ಕಾಣದಂಥ ಅತಿಸಣ್ಣ ತುಂಡುಗಳು ಉಸಿರಾಟದಲ್ಲಿ ಮಿಶ್ರಿತಗೊಂಡು, ಉಸಿರಾಟ ಹಾಗೂ ಹೃದಯಕ್ಕೆ ಹಾನಿಯುಂಟು ಮಾಡುತ್ತಿವೆ. ಹೀಗಾಗಿ ಪ್ಲಾಸ್ಟಿಕ್ ಸುಡುವ ಬದಲು ಉಪಯೋಗವನ್ನೇ ಕಡಿಮೆಗೊಳಿಸಬೇಕು ಎಂದರು.

ಪ್ಲಾಸ್ಟಿಕ್ ನಿರ್ಮೂಲನೆ ಜೊತೆಗೆ ಪರಿಸರ ಬಗ್ಗೆ ಕಾಳಜಿ ವಹಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಪೇಪರ್ ಅಥವಾ ಬಟ್ಟೆ ಚೀಲಗಳನ್ನು ಬಳಸಬೇಕು. ಇವು ನೈಜವಾಗಿ ಪ್ರಕೃತಿ ಕರಗಲು ಸಾಧ್ಯ. ಆದರೆ ಪ್ಲಾಸ್ಟಿಕ್ ಕೈಚೀಲ ಗಳು ನೂರಾರು ವರ್ಷಗಳು ಕಳೆದರೂ ಪರಿಸರದ ಉಳಿದುಕೊಳ್ಳಲಿದೆ ಎಂಬುದನ್ನು ಅರಿತು ಮುನ್ನೆಡೆಯ ಬೇಕು ಎಂದು ಸಲಹೆ ಮಾಡಿದರು.
ಮೂಗ್ತಿಹಳ್ಳಿ ಗ್ರಾ.ಪಂ. ಅಧ್ಯಕ್ಷ ಉಮೇಶ್ ಮಾತನಾಡಿ ಇಳಿ ವಯಸ್ಸಿನಲ್ಲಿ ದಂತ ವೈದ್ಯರು ಪರಿಸರದ ಮೇಲಿನ ಕಾಳಜಿ ನಿಜಕ್ಕೂ ಶ್ಲಾಘನೀಯ. ಇವರಿಗೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರು, ಗ್ರಾ.ಪಂ. ಸಂಪೂ ರ್ಣ ಸಹಕಾ ನೀಡಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಪಂಚಾಯಿತಿಯಾಗಿ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.