ಚಿಕ್ಕಮಗಳೂರು, ಮೇ.09:- ಆಪರೇಶನ್ ಸಿಂಧೂರ ಮತ್ತು ನಂತರದ ಸೇನಾ ಯೋಜನೆಗಳಿಗೆ ಒಳಿ ತಾಗಲೀ ಎಂದು ಬಿಜೆಪಿ ನೇಕಾರ ಪ್ರಕೋಷ್ಟ ರಾಜ್ಯ ನಿರ್ದೇಶಕ ವಿನೋದ್ ಬೊಗಸೆ ಗುರುವಾರ ಶ್ರೀ ಹೊರ ನಾಡು ಕ್ಷೇತ್ರ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು ಭಾರತೀಯ ನಾರಿಯರ ಸಿಂಧೂರ ಅಳಿಸಿದ ಪಾಕಿಸ್ತಾನ ಉಗ್ರರಿಗೆ ಮಧ್ಯ ರಾತ್ರಿಯಲ್ಲಿ ಶಾಶ್ವತವಾಗಿ ಚಿರನಿದ್ರೆಗೆ ಜಾರಿಸಿರುವ ಭಾರತೀಯ ವೀರ ಯೋಧರಿಗೆ ಶತಕೋಟಿ ಪ್ರಣಾಮಗಳು. ಆಪರೇಷನ್ ಸಿಂಧೂರ ಕೇವಲ ಒಂದು ಕಾರ್ಯಾಚರಣೆ ಅಲ್ಲ, ಇದು ಭಾರತದ ಶಕ್ತಿ ಯನ್ನು ಸಾರಿದ ಐತಿಹಾಸಿಕ ದಿನವಾಗಿದೆ ಎಂದರು.
ದೇಶದ ಪ್ರವಾಸಿ ನಾಗರಿಕರ ಮೇಲೆ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಕೈಗೊಂಡಿರುವ ‘ಆಪರೇಷನ್ ಸಿಂಧೂರ’ ಭಾರತೀಯ ಸೈನ್ಯ ಪಾಕಿಸ್ತಾನದ ಉಗ್ರ ಸಂಘಟನೆಗಳ 9 ಶಿಬಿರ ಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಸಂಪೂರ್ಣವಾಗಿ ನಾಶ ಮಾಡಿದೆ ಭಾರತೀಯರಿಗೆ ನ್ಯಾಯ ಒದಗಿಸಿಕೊಟ್ಟಿದೆ ಎಂದರು.

ಭಾರತ ಮಾತೆಯರ ಸಿಂಧೂರಕ್ಕೆ ಬೆಲೆ ನೀಡಿದ ಅದ್ಭುತ ಕ್ಷಣ. ಕೋಟ್ಯಾಂತರ ದೇಶವಾಸಿಗಳ ವಿಶ್ವಾಸ ವನ್ನು ಉಳಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾರ್ಯ ಶ್ಲಾಘನೀಯ. “ಆಪರೇಶನ್ ಸಿಂಧೂರ” ಮತ್ತು ನಂತರದ ಸೇನಾ ಯೋಜನೆಗಳಿಗೆ ಒಳ್ಳೆಯದಾಗಲಿ ಎಂಬ ಪ್ರಾರ್ಥನೆಯೊಂದಿಗೆ, ಸೈನಿಕರ ಶೌ ರ್ಯ-ಪರಾಕ್ರಮಕ್ಕೆ ವಿಜಯವಾಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಹೋರನಾಡಿನ ಸಮಿತಿಯ ಸದಸ್ಯ ರಾಮಗೋಪಾಲ್ ಜೋಶಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶೇಷಗಿರಿ, ಮುಖಂಡರುಗಳಾದ ಪರಿಕ್ಷತ್ ಜಾವಳಿ, ಬಾಲಿ, ಯ ತೀಶ್, ಅರ್ಚಕರು ಹಾಗೂ ಇನ್ನಿತರರು ಇದ್ದರು.
– ಸುರೇಶ್ ಎನ್.