ಚಿಕ್ಕಮಗಳೂರು- ತಾಲೂಕಿನ ಬಿಂಡಿಗ ಮಲ್ಲೇನಹಳ್ಳಿ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಿ ಹಾಗೂ ಹರ್ಕತಮ್ಮನವರ ಜಾತ್ರಾ ಮಹೋತ್ಸವವು ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿ ಯಾಗಿ ಜರುಗಿತು.
ಜಾತ್ರಾ ಮಹೋತ್ಸವದ ಪ್ರಯುಕ್ತ ಮೂರು ದಿನಗಳ ಕಾಲ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು, ಬೆಳಗ್ಗೆಯಿಂದಲೇ ದೇವರಿಗೆ ವಿಶೇಷ ಪೂಜೆ, ಮಹಾ ಮಂಗಳಾರತಿ, ಶ್ರೀ ಚೌಡೇಶ್ವರಿ, ಮುತ್ತಿನ ಮ್ಮ, ಹರ್ಕತಮ್ಮನವರ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿಯಲ್ಲಿರಿಸಿ ಮೆರ ವಣಿಗೆ ಮಾಡಲಾಯಿತು.
ಗ್ರಾಮದ ಯುವಕ-ಯುವತಿಯರು ಮಲೆನಾಡು ಸುಗ್ಗಿ ವಾದ್ಯಕ್ಕೆ ನೃತ್ಯ ಮಾಡುವುದರ ಮೂಲಕ ಸಂಭ್ರಮಿಸಿದರು. ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಗ್ರಾಮ ಪಂಚಾಯಿತಿ ಸದಸ್ಯ ದಿಲೀಪ್ ಮಾತನಾಡಿ ಮೂರು ದಿನಗಳ ಕಾಲ ಗ್ರಾಮದಲ್ಲಿ ಅದ್ದೂರಿ ಯಾಗಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ. ನಂಬಿ ಬಂದ ಭಕ್ತರಿಗೆ ತಾಯಿ ಎಂದಿಗೂ ಕೈ ಬಿಟ್ಟಿಲ್ಲ, ಭಕ್ತಿಯಿಂದ ಪೂಜಿಸಿದರೆ ತಮ್ಮ ಇಷ್ಟಾರ್ಥಗಳನ್ನು ದೇವಿ ಈಡೇರಿಸುತ್ತಾಳೆ ಎಂಬ ಪ್ರತೀತಿಯಿದೆ ಎಂದರು.

ಗ್ರಾಮದ ಮುಖಂಡ ಸ್ವಾಮಿ ಮಾತನಾಡಿ ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವು ಸಂಭ್ರಮದಿAದ ನಡೆಯುತ್ತಿದೆ, ಮೂರು ದಿನ ವಿಶೇಷ ಪೂಜೆ, ಮಹಾ ಮಂಗಳಾರತಿ, ಹೋಮ ಹವನ, ಅಭಿಷೇಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ, ಈ ಬಾರಿ ಉತ್ತಮ ಮಳೆ ಬೆಳೆ ಯಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ಅರ್ಚಕರಾದ ಕಲ್ಲೇಶ್, ಗ್ರಾಮದ ಮುಖಂಡರಾದ ಗುರುಸ್ವಾಮಿ, ನಾಗೇಶ್, ರಾಕೇಶ್, ನಿಕ್ಕಿ, ಸಂಜಯ್, ಶಶಿ, ಸುದೀಪ್, ಚೇತನ್, ಕೀರ್ತಿ, ದಿಲೀಪ್, ಪ್ರದೀಪ್, ಉಮೇಶ್, ಕೃಷ್ಣಮೂರ್ತಿ,ಕಿರಣ, ಅರುಣ, ಸಂತೋಷ್, ಸಚಿನ್, ನಯನ, ಮನು, ತೀರ್ಥೇಶ್, ಅಶ್ವಥ್, ಶಿವರಾಜ್, ಕುಮಾರ್, ರೋಹಿತ್, ರಾಹುಲ್, ತರುಣ, ರಂಜನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
- ಸುರೇಶ್ ಎನ್.