ಚಿಕ್ಕಮಗಳೂರು – ಏಕತೆಯ ಸೂತ್ರಕ್ಕೆ ದೇವಾಲಯಗಳು ಪ್ರೇರಕ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ನುಡಿದರು.
ಆಲ್ದೂರಿನ ಶ್ರೀಮಹಾಗಣಪತಿ ಶಿಲಾದೇಗುಲದ ಪುನರ್‌ಪ್ರತಿಷ್ಠಾಪನಾ ಮಂಡಲಪೂಜೆಯ ಅಂಗವಾಗಿ ಬಿಲ್ವಪತ್ರೆಸಸಿಗಳನ್ನು ಆರೋಹಣಮಾಡಿ ನಂತರ ನಡೆದ ಧರ್ಮಜಾಗೃತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಂತರಂಗದಲ್ಲಿ ಭಗವಂತನನ್ನು ಕಾಣಬಹುದು. ಸನಾತನ ಧರ್ಮ ಸಂಸ್ಕೃತಿಯಲ್ಲಿ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಆಕಾರ ರೂಪ ನೀಡಲಾಗಿದೆ. ದೇವಾಲಯಗಳು ಭಾವೈಕ್ಯತೆ, ಸಾಮರಸ್ಯ, ಸದ್ಭಾವ, ಸಂಸ್ಕೃತಿಯ ಕೇಂದ್ರಗಳಾಗಿ ಸಮಾಜಜಾಗೃತಿಗೆ ಕೊಡುಗೆ ನೀಡುತ್ತಿದೆ ಎಂದರು.
ವೇದಗಳಲ್ಲಿ ಜಾತಿ ಇರಲಿಲ್ಲ. ವೃತ್ತಿಯ ಕಾರಣಕ್ಕಾಗಿ ಜಾತಿ ಬಂತು. ಜಗತ್ತು ಶಿವಸೃಷ್ಟಿ. ನಮ್ಮೊಳಗಿರುವ ಚೇತನವೂ ದೇವರೇ. ವ್ಯಕ್ತಿ ವ್ಯಕ್ತಿಗಳ ನಡುವೆ ವೃತ್ತಿಯ ಕಾರಣಕ್ಕಾಗಿ ಮೇಲುಕೀಳು ಭಾವ ಸರಿಯಲ್ಲ. ಜಾತಿಯತೆಯಿಂದ ಭಿನ್ನತೆ ಬರಬಾರದು. ವಿವಿಧೆತೆ ಸೂತ್ರ ಕಲಿಯಬೇಕು ಎಂದ ರವಿ, ಅಂತರೀಕ್ಷಕ್ಕೆ ಅಡಿ ಇಟ್ಟರೂ ಅಂತರ ತರುವುದೇಕೆ ಎಂದು ಪ್ರಶ್ನಿಸಿದರು.
ಚಾತುರ್ವಣ ಹೇಳಿದ್ದು ಗುಣಸ್ವಭಾವದಿಂದಲೇ ಹೊರತು ಹುಟ್ಟಿನಿಂದಲ್ಲ. ಜ್ಞಾನ ಪಸರಿಸುವವರಿಗೆ ಬ್ರಾಹ್ಮಣರೆಂದರು. ಅಭಾವ ನೀಗಿಸುವುದು ವೈಶ್ಯರಾದರೆ, ಅಲಸ್ಯದ ವಿರುದ್ಧ ಹೋರಾಡುವವರು ಶೂದ್ರರು. ಅನ್ಯಾಯದ ವಿರುದ್ಧ ಹೋರಾಡುವುದು ಕ್ಷತ್ರಿಯರು ಎಂದು ವಿಶ್ಲೇಷಿಸಿದ ರವಿ, ತಾವೂ ಸ್ವಭಾವತಃ ಕ್ಷತ್ರಿಯರು. ಸಮಾಜ ವ್ಯವಸ್ಥೆಗೆ ನಾಲ್ಕು ವರ್ಗಗಳು ಸೃಷ್ಟಿಯಾದವೇ ಹೊರತು, ಎಲ್ಲವೂ ಸಮಾನವೆಂದೆ ಅಂದು ಪರಿಗಣಿಸಲ್ಪಟ್ಟಿತ್ತು. ಯಾವುದೇ ತಾರತಮ್ಯ ಕರ್ತವ್ಯ-ವೃತ್ತಿ ಪಾಲನೆಯಲ್ಲಿ ಇರಕೂಡದು ಎಂದರು.

ಪ್ರತಿಯೊಬ್ಬರೂ ಸಮಾಜ ಧರ್ಮ, ರಾಷ್ಟçಧರ್ಮ, ಕುಟುಂಬಧರ್ಮ ಜೊತೆಗೆ ವೃತ್ತಿಧರ್ಮವನ್ನು ಪರಿಪಾಲಿಸಬೇಕು. ಶ್ರೇಷ್ಠತೆ ನಮ್ಮ ಗುಣ, ನಡತೆ, ಸ್ವಭಾವ ಅವಲಂಬಿಸಿರುತ್ತದೆಯೆ ಹೊರತು ಹುಟ್ಟಿನಿಂದಲ್ಲ. ಸನಾತನಧರ್ಮ ಸಾಮರಸ್ಯ ಸದ್ಭಾವನೆಗಳನ್ನು ಹೇಳುತ್ತದೆ. ರಂಭಾಪುರಿ ಪೀಠದ ಘೋಷವಾಕ್ಯದಲ್ಲಿ ‘ಮಾನವ ಧರ್ಮಕ್ಕೆ ಜಯವಾಗಲಿ’ ಎಂಬ ಉದಾತ್ತತೆ ಇದೆ. ‘ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಸತ್ಯಸಂದೇಶವಿದೆ. ಬಾಂಬ್‌ನಿAದ ಭಯನಿವಾರಣೆ ಆಗದು ಎಂದ ಸಿ.ಟಿ.ರವಿ, ಸನಾತನಧರ್ಮವು ‘ಸರ್ವೇ ಜನಾ ಸುಖೀನೋ ಭವತು:’ ಎಂದಿದೆ. ಧರ್ಮಪಾಲನೆಗೆ ದೇವಾಲಯಗಳು, ಗುರುಪೀಠಗಳು, ಆಚಾರ್ಯರು. ಸಾಧುಸತ್ಪುಷರು ನಿರಂತರವಾಗಿ ಮಾರ್ಗದರ್ಶನ ನೀಡುತ್ತಿರುವುದರಿಂದಲೇ ಸಾವಿರಾರು ವರ್ಷಗಳಿಂದ ಹಿಂದೂಸಮಾಜ ತಲೆಯೆತ್ತಿ ನಿಂತಿದೆ ಎಂದರು.
ಶಂಕರದೇವರಮಠಾಧಕ್ಷರಾದ ಶ್ರೀಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಪ್ರಕ್ರತಿಯೆ ದೈವಸೃಷ್ಟಿ. ದುರಾಸೆಗೆ ಬಲಿಯಾಗದೆ ನಿಸರ್ಗವನ್ನು ಕಾಪಿಡುವ ಹೊಣೆಗಾರಿಕೆ ನೆನಪಿಡಬೇಕು. ಸರಸ್ವತಿ ವಿದ್ಯೆಗೆ ಅಧಿದೇವತೆಯಾದರೆ, ಗಣಪತಿ ಬುದ್ಧಿಗೆ ಅಧಿದೇವತೆ. ಮಹಾಗಣಪತಿಯ ಆಶೀರ್ವಾದ ಎಲ್ಲರ ಮೇಲಿರಲಿ ಎಂದರು.
ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಡಾ.ವೀರಸೋಮೇಶ್ವರ ಜಗದ್ಗುರುಗಳವರು ದಿವ್ಯಸಾನಿಧ್ಯ ವಹಿಸಿದ್ದು, ಸುಂದರ ಶಿಲಾಮಯ ಈ ಮಂದಿರ ನಾಸ್ತಿಕ ಮನೋಭಾವ ದೂರವಾಗಿಸುತ್ತದೆ. ಮಾನವರ ಕಲ್ಯಾಣವೇ ಧರ್ಮದ ಗುರಿ. ವಿದ್ಯೆ ಮತ್ತು ಸಂಪತ್ತು ಗಳಿಸುವಾಗ ಆಶಾವಾದಿಯಾಗಿರಬೇಕು. ದೇವರ ಅಸ್ಥಿತ್ವ ಮತ್ತು ಮೃತ್ಯುಭಯ ಸದಾ ಇರಬೇಕು. ನಾವು ಪಡೆದ ಉಪಕಾರ ಮತ್ತು ಬೇರೆಯವರಿಂದಾದ ಅಪಕಾರ ಮರೆಯಬೇಕು ಎಂದರು.

ನಿಂತ ನೆಲ, ಕುಡಿಯುವ ನೀರು, ತಿನ್ನುವ ಅನ್ನ, ಉಸಿರಾಡುವ ಗಾಳಿ ಎಲ್ಲವೂ ಭಗವಂತನ ಕೊಡುಗೆ. ದೈವ ಸಾನಿಧ್ಯಕ್ಕೆ ಕೃತಜ್ಞತೆಯ ಭಾವ ತಾಳಬೇಕು. ದೇವಾಲಯದ ಶುದ್ಧತೆ ಪಾಲಿಸುವುದರ ಜೊತೆಗೆ ನಿರಂತರ ಧರ್ಮಾಚರಣೆಯ ಕರ‍್ಯಕ್ಕೆ ಪೂರಕವಾಗಿರಬೇಕು. ಯುವಶಕ್ತಿಗೆ ಸಂಸ್ಕಾರ ಸ್ವಾಭಿಮಾನ ಕಲಿಸಿದರೆ ಅವರು ದೇಶಕ್ಕೆ ಸಂಪತ್ತಾಗುತ್ತಾರೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ನಿಜಧರ್ಮ ಪಾಲನೆ ಅಗತ್ಯ ಎಂದು ಜಗದ್ಗುರುಗಳು ನುಡಿದರು.
ಈ ವೇಳೆ ಬೇರುಗಂಡಿ ಬೃಹನ್ಮಠದ ಶ್ರೀರೇಣುಕಮಹಾಂತ ಶಿವಾಚಾರ್ಯರು, ಮಾಜಿಶಾಸಕ ಎಂ.ಪಿ.ಕುಮಾರಸ್ವಾಮಿ, ಗ್ರಾಮಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ, ಮಹಾಗಣಪತಿ ಸೇವಾಸಮಿತಿ ಅಧ್ಯಕ್ಷ ಸಿ.ಸುರೇಶ್, ಕರ‍್ಯದರ್ಶಿ ಎಚ್.ಎಲ್.ರವಿ, ಬಿ.ಎಸ್.ರಾಜೀವ, ಡಿ.ಸಿ.ಗಿರೀಶ, ಇಳೇಖಾನ್ ಉಮೇಶ್ ಮತ್ತಿತರರು ಪಾಲ್ಗೊಂಡಿದ್ದರು.