ಚಿಕ್ಕಮಗಳೂರು-ಶ್ರೇಷ್ಠ-ಕವಿಗಳಾಗಲು-ಚುಟುಕು-ಸಾಹಿತ್ಯ-ಸಹಕಾರಿ- ಕೇಂದ್ರ ಚುಟುಕು-ಸಾಹಿತ್ಯ-ಪರಿಷತ್ತು-ಸಂಸ್ಥಾಪಕ-ಅಧ್ಯಕ್ಷ-ಡಾ. ಎಂ.ಜಿ.ಆರ್.ಅರಸ್

ಚಿಕ್ಕಮಗಳೂರು– ಚುಟುಕು ಸಾಹಿತ್ಯ ಬದುಕಿಗೆ ಲಾಲಿತ್ಯ ಚುಟುಕು ಬರೆಯುವ ಮೂ ಲಕ ಉತ್ತಮ ಕವಿಗಳಾಗಿ ಹೊರ ಹೊಮ್ಮುವ ಹೆಮ್ಮೆಯ ಅವಕಾಶ ಎಂದು ಕೇಂದ್ರ ಚುಟುಕು ಸಾಹಿತ್ಯ ಪರಿ ಷತ್ತು ಸಂಸ್ಥಾಪಕ ಅಧ್ಯಕ್ಷ ಡಾ. ಎಂ.ಜಿ.ಆರ್.ಅರಸ್ ಹೇಳಿದರು.


ಕಡೂರು ತಾಲ್ಲೂಕಿನ ಮಲ್ಲೇಶ್ವರದ ಶ್ರೀ ಬಾಬು ಜಗಜೀವನ್ ರಾಮ್ ಸಮುದಾಯ ಭವನದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಕಾರ್ಯಾಧ್ಯಕ್ಷ ಡಾ. ಹಿರೇನಲ್ಲೂರು ಶಿವು ಅಧ್ಯಕ್ಷತೆಯಲ್ಲಿ, ಚುಟುಕು ಸಾಹಿತ್ಯ ಪರಿಷತ್ತು, ಚಿಕ್ಕಮಗಳೂರು ಜಿಲ್ಲಾ ಘಟಕ, ಚುಟುಕು ಸಾಹಿತ್ಯ ಪರಿಷತ್ ಕಡೂರು ತಾಲ್ಲೂಕು ಘಟಕ ಹಾಗೂ ಪ್ರತಿಧ್ವನಿ ಪ್ರಕಾಶನದ ವತಿಯಿಂದ ಹಮ್ಮಿಕೊಂಡಿದ್ದ, ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಕವಿ ಬೀರೂರು ರವೀಶ್‌, ಬಾಂಬೆ ತೆಂಗು ಕೃತಿಯನ್ನು ಪುರಸಭಾ ಅಧ್ಯಕ್ಷೆ ಭಂಡಾರಿ ಶ್ರೀನಿವಾಸ್ ಬಿಡುಗಡೆಗೊಳಿಸಿ ಮಾತನಾಡಿ, ಹೆಚ್ಚು ಹೆಚ್ಚು ಓದುವ ಮೂಲಕ ಮೌಲ್ಯಯುತ ಕೃತಿಗಳನ್ನು ಹೊರ ತರುವ ಮೂಲಕ ಯುವ ಪೀಳಿಗೆಗೆ ಮಾದರಿ ಆಗಬೇಕು ಎಂದರು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಚುಸಾಪ ಅಧ್ಯಕ್ಷೆ ರತ್ನ ಹಾಲಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗದಹಳ್ಳಿ ಯೋಗೀಶ್, ತಾಲೂಕು ಸಂಘದ ಅಧ್ಯಕ್ಷ ಯಗಟಿ ಸತೀಶ್, ತಾಲೂಕು ಸಂಘದ ಕಾರ್ಯದರ್ಶಿ ಮತಿಘಟ್ಟ ರವಿ, ಜಿಲ್ಲಾ ದಾಸ ಸಾಹಿತ್ಯ ಪರಿಷತ್ ಅಧ್ಯಕ್ಷ ಹಿರೇನಲ್ಲೂರು ಶ್ರೀನಿವಾಸ್, ಮುಖಂಡರಾದ ಶೂದ್ರ ಶ್ರೀನಿವಾಸ್, ಜಿ.ಟಿ.ಕುಸುಮ, ಶಿಕ್ಷಕ ರಮೇಶಪ್ಪ, ಎಂ.ಆರ್.ಪ್ರಕಾಶ್, ಕೆ.ವಿರೂಪಾಕ್ಷಪ್ಪ, ಬಿಳಿಗಿರಿ ವಿಜಯ್, ಲೇಖಕ ರವೀಶ್ ಬೀರೂರು ಮತ್ತಿತರರು ಉಪಸ್ಥಿತರಿದ್ದರು.

ಸುರೇಶ್ ಎನ್ ಚಿಕ್ಕಮಗಳೂರು

Leave a Reply

Your email address will not be published. Required fields are marked *

× How can I help you?