ಚಿಕ್ಕಮಗಳೂರು:– ತಾಲ್ಲೂಕಿನ ವಾಜುವಳ್ಳಿ ಗ್ರಾಮದ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಶಬರೀಶ್ ಈಚೆಗೆ ಮುಖ್ಯಮಂತ್ರಿಗಳಿಂದ ಪದಕ ಸ್ವೀಕರಿಸಿದ ಹಿನ್ನೆಲೆ ಸೋಮವಾರ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ನಿವಾಸದಲ್ಲಿ ಯುರೇಕಾ ಅಕಾಡೆಮಿ ವತಿಯಿಂದ ಗೌರವಿಸಿ ಅಭಿನಂದನೆ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ದೊಡ್ಡಯ್ಯ, ಸಮಾಜದ ಹಿತ ಕಾಪಾಡುವಲ್ಲಿ ಪೊಲೀಸ್ ಅಧಿಕಾರಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಆ ಸಾಲಿನಲ್ಲಿ ಜಿಲ್ಲೆಯ ಶಬರೀಶ್ ಮೈಸೂರು ನಗರದಲ್ಲಿ ದಕ್ಷ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ನಿವೃತ್ತ ಶಿಕ್ಷಕ ಮಂಜುನಾಥ್, ಕಸಾಪ ನಗರಾಧ್ಯಕ್ಷ ಸಚಿನ್‌ಸಿಂಗ್, ಬಿಜೆಪಿ ಮುಖಂಡರುಗಳಾದ ಪ್ರದೀಪ್, ಶಶಿ ಆಲ್ದೂರು, ಭರತ ನಾಟ್ಯ ಪ್ರವೀಣೆ ಸಂಯುಕ್ತ ಸೇರಿದಂತೆ ಮತ್ತಿತರರು ಹಾಜರಿದ್ದರು.
– ಸುರೇಶ್ ಎನ್.