ಚಿಕ್ಕಮಗಳೂರು– ದುರ್ಬಲರು, ಬಡವರು ಹಾಗೂ ವಿದ್ಯಾರ್ಥಿಗಳ ನೆರವಿಗಾಗಿ ಉದ್ಯ ಮ ಶೇ.5ರಷ್ಟು ಲಾಭಾಂಶವನ್ನು ಮಲಬಾರ್ ಟ್ರಸ್ಟ್ ಸಮಾಜದ ಅಭಿವೃದ್ದಿ ಮತ್ತು ಮಹಿಳಾ ಸಬಲೀಕರಣಕ್ಕೆ ಮುಡಿಪಿಟ್ಟಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ಹೇಳಿದರು.
ನಗರದ ರೋಟರಿ ಸಭಾಂಗಣದಲ್ಲಿ ಚಿಕ್ಕಮಗಳೂರು ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಸಂಸ್ಥೆ ವತಿಯಿಂದ ಏರ್ಪಡಿಸಿದ್ಧ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಚೆಕ್ ವಿತರಿಸಿ ಗುರುವಾರ ಸಂಜೆ ಅವರು ಮಾತನಾಡಿದರು.
ಮನೆಯ ಆರ್ಥಿಕ ಸ್ಥಿತಿ ಕುಂಠಿತಗೊಂಡಿರುವ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸುವುದು ಒಳ್ಳೆಯ ಸಂಗತಿ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾ ಣ್ನುಡಿಯಲ್ಲಿ ಮಲಬಾರ್ ಚಾರಿಟಬಲ್ ಸಂಸ್ಥೆ ಕಾರ್ಯನ್ಮುಖರಾಗಿ ದೇಶಾದ್ಯಂತ ಸಹಾಯಹಸ್ತ ಚಾಚುತ್ತಿ ರುವುದು ಹೆಮ್ಮೆಯ ವಿಷಯ ಎಂದರು.
ಚಿನ್ನಾಭರಣ ವಹಿವಾಟಿನೊಂದಿಗೆ ಬಡಮಕ್ಕಳಿಗೆ ದಾನದ ಮೂಲಕ ಸ್ಪಂದಿಸುತ್ತಿರುವ ಸಂಸ್ಥೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಸೇವೆಯಲ್ಲಿ ತೊಡಗಬೇಕು. ಈ ಸಂಸ್ಕೃತಿಯನ್ನು ಉಳ್ಳವರು ತಮ್ಮ ಬಾಳಿನಲ್ಲಿ ಅಳವಡಿಸಿಕೊಂಡಲ್ಲಿ ಬಡತನವನ್ನು ಬೇರಿನಿಂದ ಹಿಮ್ಮೆಟ್ಟಿಬಹುದು. ಜನಸಾಮಾನ್ಯರು ಸುಭದ್ರ ಜೀವನ ನಡೆಸಲು ಅನುಕೂಲವಾಗಲಿದೆ ಎಂದರು.

ಆರ್ಥಿಕ ಸಂಕಷ್ಟ ಹಾಗೂ ಕೂಲಿ ಕೆಲಸದಲ್ಲಿರುವ ಪಾಲಕರು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಹಗ ಲು-ರಾತ್ರಿ ಶ್ರಮಪಡುತ್ತಾರೆ. ವಿದ್ಯಾರ್ಥಿಗಳು ಪಾಲಕರ ಶ್ರಮಕ್ಕೆ ದ್ರೋಹವೆಸಗಬಾರದು. ಜೊ ತೆಗೆ ಸಂಘ- ಸಂಸ್ಥೆಗಳ ವಿದ್ಯಾರ್ಥಿ ವೇತನ ಸದ್ಬಳಕೆ ಮಾಡಿಕೊಂಡು ಉನ್ನತ ಹುದ್ದೆ ಅಲಂಕರಿಸಿದ ನಂತರ ಸಂಸ್ಥೆಯ ಸಹಾಯ ನೆನಪಿಸಿಕೊಂಡರೆ ಬದುಕು ಸಾರ್ಥಕವಾಗಲಿದೆ ಎಂದರು.
ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಮಲಬಾರ್ ಸಂಸ್ಥೆಯ ಸಿಎಸ್‌ಆರ್ ಯೋಜನೆಯಲ್ಲಿ ದೇಶದ ಅಸಹಾಯಕರು, ಬಡ ವಿದ್ಯಾರ್ಥಿಗಳಿಗೆ ಉದ್ದಿಮೆಯ ಶೇ.೫ ರಷ್ಟು ಲಾಭಾಂಶವನ್ನು ಸಮಾಜಕ್ಕೆ ವ್ಯಯಿಸಿ ಬಡವÀರಿಗೆ ಆಸರೆ ಮಾಡಿಕೊಟ್ಟಿದೆ. ಅಲ್ಲದೇ ಕೋವಿಡ್ ವೇಳೆಯಲ್ಲಿ ಸಾವಿರಾರು ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿ, ಬಡವರ ಪರವಾಗಿ ಹೆಜ್ಜೆ ಹಾಕಿರುವುದು ಮರೆಯುವಂತಿಲ್ಲ ಎಂದರು.
ಶಾಲೆ ತೊರೆದ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಅನುವು ಮಾಡಿಕೊಟ್ಟಿದೆ. ಯಾರೊಬ್ಬರು ಹಸಿನಿಂದ ಬಳಲದಂತೆ ಹಸಿವು ಮುಕ್ತ ಭಾರತದೆಡೆ ಹೆಜ್ಜೆ ಇಟ್ಟಿದೆ ಹಾಗೂ ಅಸಹಾಯಕ ವಯೋವೃದ್ದರಿಗೆ ಅಜ್ಜಿ ಮನೆ ನಿರ್ಮಾಣದಡಿ ಮನೆ ನಿರ್ಮಿಸಿಕೊಟ್ಟು ಸಮಾಜದ ಏಳಿಗೆಗೆ ದುಡಿಯುತ್ತಿರು ವುದು ಸಾಮಾನ್ಯ ವಿಚಾರವಲ್ಲ ಎಂದರು.
ಮಲಬಾರ್ ಸಂಸ್ಥೆಯ ಮುಖ್ಯಸ್ಥ ಶ್ರೀನಾಥ್ ಮಾತನಾಡಿ ಸಂಸ್ಥೆಯ ಸಿಎಸ್‌ಆರ್ ಯೋಜನೆಯಡಿ ದೇಶದಲ್ಲಿ ೯೫೩೦೪ ವಿದ್ಯಾರ್ಥಿಗಳು, ರಾಜ್ಯದಲ್ಲಿ 26066 ಹಾಗೂ ಚಿಕ್ಕಮಗಳೂರು ಶಾಖೆಯಲ್ಲಿ 128 ಹಾಗೂ ಇಂದಿನ ಕಾರ್ಯಕ್ರಮದಲ್ಲಿ ೬೨ ಅರ್ಹ ವಿದ್ಯಾರ್ಥಿಗಳು ಸೇರಿದಂತೆ ಒಟ್ಟಾರೆ ೬೦.೫೪ ಕೋಟಿ ರೂ. ಹಣವನ್ನು ವಿದ್ಯಾರ್ಥಿವೇತನವಾಗಿ ನೀಡಲಾಗಿದೆ ಎಂದರು.

ಮನೆಯಿಲ್ಲದೇ ನಿರ್ಗತಿಕ ವೃದ್ದ ಮಹಿಳೆಯರಿಗೆ ಬೆಂಗಳೂರು ಮತ್ತು ಹೈದರಬಾದ್‌ನಲ್ಲಿ ಅಜ್ಜಿ ಮನೆ ಎಂಬ ಯೋಜನೆಯಲ್ಲಿ ನಗರಗಳನ್ನು ನಿರ್ಮಿಸಿ, ವೈದ್ಯಕೀಯ ಆರೈಕೆ ಮಾಡಲಾಗುತ್ತಿದೆ. ಹಸಿವು ಮುಕ್ತದಡಿ ರಾಜ್ಯದಲ್ಲಿ 12 ಸ್ಥಳಗಳಲ್ಲಿ ೫೩೫೦ ಮಂದಿಗೆ ಪ್ರತಿದಿನ ಊಟದ ವ್ಯವಸ್ಥೆ ಕೈಗೊಳ್ಳುತ್ತಿದೆ. ಒಟ್ಟು ಸಂಸ್ಥೆ ಆರಂ ಭದಿಂದ ಇಲ್ಲಿತನಕ ದೇಶಾದ್ಯಂತ 282 ಕೋಟಿ ರೂ. ಆರ್ಥಿಕ ನೆರವು ಕಲ್ಪಿಸಿಕೊಟ್ಟಿದೆ ಎಂದರು.
ಈ ಸಂದರ್ಭದಲ್ಲಿ ಸಾಹಿತಿ ಹೆಚ್.ಎಸ್.ಸತ್ಯನಾರಾಯಣ್, ಜ್ಯೂನಿಯರ್ ಕಾಲೇಜು ಪ್ರಾಂಶುಪಾಲ ವಿರೂಪಾಕ್ಷ, ಶಾಖೆಯ ಮಾರ್ಕೆಟಿಂಗ್ ಮ್ಯಾನೇಜರ್ ಅಬ್ದುಲ್ ಖದೀರ್, ರಿಲೇಷನ್ ಮ್ಯಾನೇ ಜರ್ ರಕ್ಷಿತ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
- ಸುರೇಶ್ ಎನ್.