ಚಿಕ್ಕಮಗಳೂರು:-ಅಸ್ಪಶ್ಯತೆ, ಶೋಷಣೆ ಹಾಗೂ ಪಶುವಿನಂತೆ ವರ್ತಿಸುತ್ತಿದ್ದ ಕೆಟ್ಟವ್ಯವಸ್ಥೆ ಯ ವಿರುದ್ಧ ದಿಟ್ಟತನದಿಂದ ಹೋರಾಡಿದ ಅಂಬೇಡ್ಕರ್ ಮಹತ್ವದ ಸಂವಿಧಾನ ಕೊಟ್ಟು ಕತ್ತಲೆಯಲ್ಲಿ ಮುಳುಗಿದ್ಧ ಜನರಿಗೆ ಬೆಳಕಾದವರು ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಹೇಳಿದರು.
ನಗರದ ಬಹುಜನ ಸಮಾಜ ಪಾರ್ಟಿ ಕಚೇರಿಯಲ್ಲಿ ತಾಲ್ಲೂಕು ಸಮಿತಿಯಿಂದ ಹಮ್ಮಿಕೊಂಡಿದ್ಧ ಡಾ|| ಬಿ.ಆರ್.ಅಂಬೇಡ್ಕರ್ 134ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸೋ ಮವಾರ ಅವರು ಮಾತನಾಡಿದರು.
ಸ್ವಾತಂತ್ರö್ಯಪೂರ್ವ ಹಾಗೂ ಸಂವಿಧಾನ ಸಮರ್ಪಣೆಗೂ ಮುನ್ನ ಶೋಷಿತರು, ಬಡವರು ಹಾಗೂ ಬಹುಸಂಖ್ಯಾತರ ಪರಿಸ್ಥಿತಿ ಹೇಳತೀರಾದಾಗಿತ್ತು. ದೌರ್ಜನ್ಯ, ದಬ್ಬಾಳಿಕೆ ಹಾಗೂ ತುಳಿತಕ್ಕೊಳಗಾಗಿದ್ಧ ಜನರ ನ್ನು ಮೇಲೆತ್ತಲು ವೈಯಕ್ತಿಕ ಬದುಕನ್ನು ಅಂಬೇಡ್ಕರ್ ಜನತೆಗೆ ಅರ್ಪಿಸಿ, ಸರ್ವರು ಸಮಾನರೆಂಬ ಕಾನೂನು ರೂಪಿಸಿದರು ಎಂದರು.
ಸಮಾನತೆಯ ಹರಿಕಾರ, ಮಾನವೀಯ ಮೌಲ್ಯಗಳ ಪ್ರತಿರೂಪ ಅಂಬೇಡ್ಕರ್ ಪಂಚಸೂತ್ರಗಳಾದ ಸ್ವಸುಧಾರಣೆ, ಸ್ವಗೌರ, ಸ್ವಾವಲಂಬನೆ, ಆತ್ಮವಿಶ್ವಾಸ ಮತ್ತು ಸ್ವಪ್ರಗತಿ ಇಂದಿನ ಸಮಾಜದ ನಡಿಗೆಗೆ ದಿಕ್ಸೂಚಿ ಯಾಗಿದೆ. ಅಂಬೇಡ್ಕರ್ ಜೀವನವು ಸಮಾಜಕ್ಕೆ ಮುಡಿಪಾಗಿದ್ದು ಆದರ್ಶ, ತತ್ವಗಳನ್ನು ಪ್ರತಿಯೊಬ್ಬರು ಮೈ ಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ್ ಮಾತನಾಡಿ ಅಂಭೇಡ್ಕರ್ ಕೊಟ್ಟಂಥ ಸಂವಿಧಾನ ಜಾರಿಯಾಗಬೇ ಕಾದರೆ ದೇಶದಲ್ಲಿ ಬಿಎಸ್ಪಿ ಪಕ್ಷ ಅಧಿಕಾರ ಹಿಡಿಯಬೇಕು. ಆಗ ಮಾತ್ರ ಯಥಾವತ್ತಾಗಿ ಚಾಚುತಪ್ಪದೇ ಸಂವಿ ಧಾನ ಅಳವಡಿಸಲು ಸಾಧ್ಯ. ಇಲ್ಲವಾದರೆ ಸಂವಿಧಾನ ಮಾತಲ್ಲೇ ಉಳಿಯುತ್ತದೆ ಹೊರತು ಜಾರಿಗೊಳಿಸಲು ಆಳುವ ಸರ್ಕಾರ ಬಿಡುವುದಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಹೆಚ್.ಕುಮಾರ್ ನಾಗರೀಕ ಹಕ್ಕು ಪಡೆಯಲು ಏಕಾಂಗಿಯಾಗಿ ಹೋರಾಡಿ ಸಫಲತೆ ಕಂಡ ಮಹಾನಾಯಕ ಅಂಬೇಡ್ಕರ್. ಆ ಮಾರ್ಗ ದಲ್ಲಿ ಮುಂದಿನ ಚುನಾವಣೆಗಳಲ್ಲಿ ಬಹುಸಂಖ್ಯಾತರು ಅಧಿಕಾರ ಹಿಡಿಯಬೇಕು. ಹಾಗಾಗಿ ಮತದಾರರಿಗೆ ಮನವರಿಕೆ ಮಾಡಿ ಪಕ್ಷದ ಸಿದ್ದಾಂತ ಪರಿಚಯಿಸಿ, ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ಉಡುಪಿ-ಚಿಕ್ಕಮಗಳೂರು ಲೋಕ ಸ ಭಾ ಸಂಯೋಜಕ ಕೆ.ಆರ್.ಗಂಗಾಧರ್, ಜಿಲ್ಲಾ ಉಪಾಧ್ಯಕ್ಷೆ ಕೆ.ಎಸ್.ಮಂಜುಳಾ, ಅಸೆಂಬ್ಲಿ ಪ್ರಧಾನ ಕಾ ರ್ಯದರ್ಶಿ ಆರ್. ವಸಂತ್, ಉಪಾಧ್ಯಕ್ಷರಾದ ಹೊನ್ನಪ್ಪ, ಸಿದ್ದಯ್ಯ, ಉಮಾಶಂಕರ್, ಕಚೇರಿ ಕಾರ್ಯದ ರ್ಶಿ ಕಲಾವತಿ, ಖಜಾಂಚಿ ಟಿ.ಹೆಚ್.ರತ್ನ, ನಗರಾಧ್ಯಕ್ಷ ಡಿ.ಎಚ್.ವಿಜಯ ಕುಮಾರ್, ಮುಖಂಡರುಗಳಾದ ಮಂಜುಳಾ, ಎಚ್.ಕುಮಾರ್, ಸವಿತಾ ಉಪಸ್ಥಿತರಿದ್ದರು.
– ಸುರೇಶ್ ಎನ್.
–