ಚಾಮರಾಜನಗರ-ಪ್ರಕಾಶ-ಭವನದಲ್ಲಿ-ಏ.14,15,16 ರಂದು-ಮಕ್ಕಳ-ಬೇಸಿಗೆ-ಶಿಬಿರ 

ಚಾಮರಾಜನಗರ – ಪಟ್ಟಣದ ಜೋಡಿ ರಸ್ತೆಯಲ್ಲಿರುವ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ಮಕ್ಕಳ ಸರ್ವತೋಮುಖ ವ್ಯಕ್ತಿತ್ವ ವಿಕಾಸಕ್ಕಾಗಿ ಮಕ್ಕಳ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಎಂದು ಮನೋಬಲ ತರಬೇತುದಾರರಾದ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

6 ರಿಂದ 16ವಯಸ್ಸಿನ ಮಕ್ಕಳಿಗಾಗಿ ಎಳೆಯ ಮನಸ್ಸಿಗೆ ಏಕಾಗ್ರತೆ ಹಾಗೂ ದೃಡತೆ ಮೂಡಿಸಲು, ಪರಿಸ್ಥಿತಿಗಳಲ್ಲಿ ಕುಗ್ಗದೆ ಧೈರ್ಯವನ್ನ ಧರಿಸಲು, ಬದಲಾದ ಈ ಪೀಳಿಗೆಗೆ ಶ್ರೇಷ್ಠ ಮೌಲ್ಯಗಳನ್ನು ತುಂಬಲು, ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡಲು, ಪರಸ್ಪರದಲ್ಲಿ ಏಕತೆಯ ಭಾವ ಮೂಡಿಸಲು, ಆಧ್ಯಾತ್ಮಿಕತೆಯಿಂದ ನವರಾಷ್ಟ್ರ, ಯುವರಾಷ್ಟ್ರ, ಸಮೃದ್ಧ ರಾಷ್ಟ್ರ,ಕಟ್ಟುವ ಈ ಪ್ರಯತ್ನದಲ್ಲಿ ಸರ್ವರು ಕೈಜೋಡಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮೌಲ್ಯ ಭರಿತ ಆಟಗಳು, ರಾಜಯೋಗ, ದ್ಯಾನ, ಉಲ್ಲಾಸವನ್ನು ಹೆಚ್ಚಿಸುವ ಚಟುವಟಿಗಳು, ಏರೋಜಿಕ್ ವ್ಯಾಯಾಮ,ಧ್ಯಾನ, ಸಕಾರಾತ್ಮ ಚಿಂತನೆ, ಸ್ವಚ್ಛ ಮನಸ್ಸು, ಸ್ವಚ್ಛ ಜೀವನದಿಂದ ಸ್ವಚ್ಛ ಭಾರತ, ದಿನಾಂಕ 14 ರಿಂದ 16 ರವರೆಗೆ ಸಮಯ ಬೆಳಗ್ಗೆ 10 ರಿಂದ ಸಂಜೆ 4:00 ವರೆಗೆ ಹಮ್ಮಿಕೊಳ್ಳಲಾಗಿದೆ.

ಹೆಸರನ್ನು ಮೊದಲೇ ನೂಂದಾಯಿಸಿಕೊಳ್ಳಬೇಕು ಹೆಚ್ಚಿನ ವಿವರಗಳಿಗೆ  7483520495,ಅಥವಾ 7899820430  ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ

Leave a Reply

Your email address will not be published. Required fields are marked *

× How can I help you?