ಚೀಟಗುಪ್ಪ-ಸಹಾಯಕ ಪ್ರಾದೇಶಿಕ ಸಾರಿಗೆ ತನಿಖಾ ಠಾಣೆ ಮೇಲೆ ಕಲಬುರಗಿ ಲೋಕಾಯುಕ್ತ ದಾಳಿ-ಎಸ್.ಪಿ ಉಮೇಶ ಬಿ.ಕೆ ಅವರ ನೇತೃತ್ವದಲ್ಲಿ ನಡೆದ ದಾಳಿ-ದಾಖಲೆಗಳ ಪರಿಶೀಲನೆ

ಚೀಟಗುಪ್ಪ-ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ 65ರ ಮೊಳಕೇರಾ ಗ್ರಾಮದ ಹತ್ತಿರದ ಸಹಾಯಕ ಪ್ರಾದೇಶಿಕ ಸಾರಿಗೆ ತನಿಖಾ ಠಾಣೆ ಮೇಲೆ ಕಲಬುರಗಿ ಲೋಕಾಯುಕ್ತ ಎಸ್.ಪಿ ಉಮೇಶ ಬಿ.ಕೆ ಅವರ ನೇತೃತ್ವದಲ್ಲಿ ಮಂಗಳವಾರ ನಸುಕಿನ ಜಾವ ದಾಳಿ ನಡೆಸಿದ್ದಾರೆ.

ಸುಮಾರು ನಾಲ್ಕು ಗಂಟೆಗೆ ದಾಳಿ ನಡೆದಿದ್ದು,ಹೆದ್ದಾರಿಯ ಎಡ ಮತ್ತು ಬಲ ಭಾಗಗಳಲ್ಲಿರುವ ಎರಡು ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಆರ್.ಟಿ.ಓ ಅಧಿಕಾರಿಗಳಾದ ರವಿಶಂಕರ, ವಿಜಯಕುಮಾರ ಹಾಗೂ ಪ್ರದೀಪ ಸ್ಥಳದಲ್ಲಿಯೇ ಇದ್ದ ಬಗ್ಗೆ ಮಾಹಿತಿ ತಿಳಿದುಬಂದಿದೆ.

ದಾಳಿ ಸಂದರ್ಭದಲ್ಲಿ ಡಿವೈಎಸ್ಪಿ ಗೀತಾ ಬೇನಹಾಳ, ಹಣಮಂತರಾಯ್ಯ, ಸಿಪಿಐಗಳಾದ ಅರುಣ ಕುಮಾರ, ಅಕ್ಕಮಹಾದೇವಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು ಎಂದು ಮೂಲಗಳು ತಿಳಿಸಿವೆ. ದಾಳಿಯ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

————-–ನೂರ ಅಲಿ

Leave a Reply

Your email address will not be published. Required fields are marked *

× How can I help you?