ಚಿಟ್ಟೆ….. ಚಿಟ್ಟೆ….. ಬಣ್ಣದ ಚಿಟ್ಟೆ,
ಮನಮೋಹಕ ಕೀಟವು ನೀನೆ ಚಿಟ್ಟೆ,
ಎಂಥಾ ಸೊಗಸು,ಎಂಥಾ ಚೆಲುವು,
ಅತಿ ಸುಂದರ ನಿನ್ನ ಮೈ ಮಾಟವು.
ಗಿಡದಿಂದ ಗಿಡಕ್ಕೆ ನೀ ಹಾರುವೆ,
ಸವಿ ಸವಿ ಮಕರಂದವ ನೀ ಹೀರುವೆ,
ವರ್ಣರಂಜಿತ ನಿನ್ನ ರೆಕ್ಕೆಗಳೇ ಅಂದ,
ಉದ್ಯಾನದಿ ನಿನ್ನ ಹಾರಾಟವೇ ಚೆಂದ.
ನಿನ್ನ ಸೃಷ್ಟಿಯೇ ಎಂಥಾ ಅದ್ಭುತ !
ನಿನ್ನ ಮೈಮಾಟವೇ ಬಹು ಕೌತುಕ.
ನಿನ್ನಲ್ಲಿದೆ ಬಹು ಮೋಹಕ ವರ್ಣಗಳು,
ಸಂತಸಪಡುವವು ನೋಡಿ ಕಂಗಳು.
ನಿನ್ನ ಕಂಡರೆ ಮನಸ್ಸಿಗೆ ಮುದವು,
ಅಪರೂಪ ನಿನ್ನ ಸೌಂದರ್ಯವು,
ನಿನ್ನ ಹಾರಾಟವೇ ಕಣ್ಣಿಗೆ ಹಬ್ಬವು,
ವೈವಿಧ್ಯತೆಯಾಗಿದೆ ಈ ಪ್ರಕೃತಿಯು.
ಜೆ.ಎಲ್.ಲೀಲಾಮಹೇಶ್ವರ.
ಅಧ್ಯಕ್ಷರು.
ಭಾರತ ಜ್ಞಾನ ವಿಜ್ಞಾನ ಸಮಿತಿ.
ಅರಸೀಕೆರೆ. ಹಾಸನ ಜಿಲ್ಲೆ