ಆಲೂರು;ಸಿಮೆಂಟ್ ಮಂಜು ಆಲೂರು-ಸಕಲೇಶಪುರ ವಿಧಾನಸಭಾ ಕ್ಷೇತ್ರದ ಚೊಚ್ಚಲ ಶಾಸಕ.ಹಾಸನ ಜಿಲ್ಲೆಯ ಎಲ್ಲಾ ಶಾಸಕರ ಪೈಕಿ ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿರುವ ಇವರು ಕ್ಷೇತ್ರದ ಜನರಿಗೆ ಕೊಟ್ಟ ಭರವಸೆಗಳ ಈಡೇರಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಾರೆ.ಸರಕಾರ ಅವರ ಪಕ್ಷದ್ದು ಇಲ್ಲದ ಕಾರಣ ಒಂದಷ್ಟು ಹಿನ್ನೆಡೆಗಳಾಗಿವೆ ಬಿಟ್ಟರೆ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಜನರಿಗೆ ಏನೆಲ್ಲಾ ಒಳ್ಳೆಯದು ಮಾಡಬಹುದು ಅದನ್ನೆಲ್ಲವನ್ನು ಅಚ್ಚುಕಟ್ಟಾಗಿ ನಡೆಸಿಕೊಡುತ್ತಿದ್ದಾರೆ.
ಶಾಸಕರಾದ ದಿನದಿಂದಲೂ ತಾಲೂಕು ಆಡಳಿತದ ಮೇಲೆ ದರ್ಪವಿಲ್ಲದ ಹಿಡಿತ ಸಾದಿಸಿಕೊಂಡು ತನಗೆ ಮತ ನೀಡಿದವರ ಬದುಕು ಹಸನಾಗಿಸಲು ಅವರು ಪಡುತ್ತಿರುವ ಪ್ರಾಮಾಣಿಕ ಪ್ರಯತ್ನಗಳಿಗೆ ಪತ್ರಿಕೆ ಅಭಿನಂದನೆಗಳ ತಿಳಿಸುತ್ತೆ.
ಅಧಿಕಾರದ ಗದ್ದುಗೆಗೆ ಏರಿದ ತಕ್ಷಣ ವರಸೆಯನ್ನೇ ಬದಲಾಯಿಸಿಕೊಳ್ಳುವ ನಾಯಕರ ಪೈಕಿಯಲ್ಲಿ ಸಿಮೆಂಟ್ ಮಂಜು
ಇಲ್ಲ.ಹಿಂದೆ ಹೇಗಿದ್ದಾರೋ ಹಾಗೆಯೇ ಅಣ್ಣ-ಅಪ್ಪ ಅಂದುಕೊಂಡು ಜನರ ನಾಡಿ ಮಿಡಿತಕ್ಕೆ ಸ್ಪಂದಿಸುವ ಇವರ ಕಾರ್ಯ ವೈಖರಿ ನಿಜಕ್ಕೂ ಇತರರಿಗೆ ಮಾದರಿಯಾದದ್ದು.
ಸರಕಾರ ಹಣ ಕೊಡ್ತಿಲ್ಲ ಕಣಣ್ಣ.ನನ್ನ ಬೇಡಿಕೆಗಳಿಗೆ ಸ್ಪಂದಿಸಿದ್ದರೆ ಇಸ್ಟೊತ್ತಿಗೆ ಹಳ್ಳಿಹಳ್ಳಿಗಳ ರಸ್ತೆಯನ್ನು ಅಭಿವೃದ್ಧಿಪಡಿಸುತ್ತಿದ್ದೆ.ಇನ್ನಿತರ ಮೂಲಭೂತ ಸೌಕರ್ಯಗಳ ಮನೆಮನೆಗೂ ತಲುಪಿಸುತ್ತಿದ್ದೆ ಏನು ಮಾಡಲಿ ಎಂದು ತನ್ನವರ ಬಳಿ ಅಳಲು ತೋಡಿಕೊಳ್ಳುತ್ತಲೇ ಇರುವ ಅವಕಾಶಗಳಲ್ಲೇ ಜನರಿಗೆ ಸ್ಪಂದಿಸುತ್ತಿರುವ ರೀತಿ ಅಮೋಘವಾದದ್ದು.
ಮೊನ್ನೆ ಎತ್ತಿನಹೊಳೆ ಕಾಮಗಾರಿಯ ಉದ್ಘಾಟನೆ ಸಮಯದಲ್ಲೇ ನೂರಾರು ಕೋಟಿ ರೂಪಾಯಿಗಳ ಹಣವನ್ನು ಎತ್ತಿನಹೊಳೆ ಡ್ಯಾಮೇಜ್ ಸರಿಪಡಿಸಲು ನೀಡುವಂತೆ ಸಿ ಎಂ, ಡಿ.ಸಿ.ಎಂ ರವರಿಗೆ ಮನವಿ ಮಾಡಿಕೊಂಡ ಸಿಮೆಂಟ್ ಮಂಜು ಸುಮ್ಮನೆ ಕೂತಿಲ್ಲ.ಅದಕ್ಕಾಗಿ ಅಭಿವೃದ್ಧಿ ಪಡಿಸಬೇಕಾದ ಕೆಲಸಗಳ ಫೈಲನ್ನು ಹಿಡಿದುಕೊಂಡು ಮುಖ್ಯಮಂತ್ರಿಗಳ ಮತ್ತು ಮಂತ್ರಿಗಳ ಹಿಂದೆ ಬಿದ್ದಿದ್ದಾರೆ.
ಯೋಚಿಸಿ ನೋಡಿ ಈ ಪ್ರಭುದ್ದ ಮತದಾರರ ಋಣ ತೀರಿಸಲೇಬೇಕು ಎನ್ನುವ ಮನಸ್ಸಿರುವ ವ್ಯಕ್ತಿಯ ಪಕ್ಷವೇ ಅಧಿಕಾರದಲ್ಲಿದ್ದರೆ ಎಷ್ಟೆಲ್ಲ ಅನುದಾನಗಳ ತರಬಹುದಿತ್ತು ಎಂದು.
ಸಕಲೇಶಪುರ ವಿಧಾಸಭಾ ಕ್ಷೇತ್ರದ ಮತದಾರರು ಜಿಲ್ಲೆಯಲ್ಲಿಯೇ ಬುದ್ದಿವಂತ ಮತದಾರರು.ಹೆಚ್ ಕೆ ಕುಮಾರಸ್ವಾಮಿಯವರ ನಂತರ ಒಂದೊಳ್ಳೆ ಶಾಸಕರ ನಿರೀಕ್ಷೆಯಲ್ಲಿದ್ದ ಅವರು ಸಿಮೆಂಟ್ ಮಂಜುರನ್ನು ಆರಿಸಿಕೊಂಡರು.ದುರದೃಷ್ಟವಶಾತ್ ರಾಜ್ಯದಲ್ಲಿ ಬಿಜೆಪಿ ಅಧಿಕಾರವನ್ನು ಕಳೆದುಕೊಂಡಿತು.
ಎಷ್ಟೆಲ್ಲ ಅವಕಾಶಗಳಿದ್ದರೂ ಹಿಂದೆ ಬಂದರೆ ಒದೆಯಬೇಡ ಮುಂದೆ ಬಂದರೆ ಹಾಯಬೇಡ ಎಂದು ದಿನಗಳನ್ನು ತಳ್ಳಿಕೊಂಡು ಅಧಿಕಾರ ಮುಗಿಸುತ್ತಿದ್ದ ಹೆಚ್ ಕೆ ಕುಮಾರಸ್ವಾಮಿಯವರಿಗೆ ಸಿಕ್ಕಂತಹ ಅವಕಾಶಗಳೇನಾದರೂ ಸಿಮೆಂಟ್ ಮಂಜುರವರಿಗೆ ಸಿಕ್ಕಿದ್ದರೆ ಅದರ ಕಥೆಯೇ ಬೇರಾಗುತ್ತಿತ್ತು.
ಇದೊಂದು ವರದಿಯನ್ನ ನೋಡಿ
ಕೊಟ್ಟ ಮಾತಿನಂತೆ ಶಾಸಕ ಸಿಮೆಂಟ್ ಮಂಜು ಒಂದೇ ದಿನದಲ್ಲಿ ಆಲೂರು ತಾಲ್ಲೂಕಿನ ಗಡಿಭಾಗ ಕ್ಯಾತ್ನಳ್ಳಿ ಗ್ರಾಮಕ್ಕೆ ನೂತನ ಕೆಎಸ್ ಆರ್ ಟಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.
ಆಲೂರು ತಾಲೂಕಿನ ಗಡಿ ಅಂಚಿನಲ್ಲಿರುವ ಗಂಜಿಗೆರೆ ಗ್ರಾಮ ಪಂಚಾಯಿತಿಗೆ ಸೇರಿದ ಕ್ಯಾತ್ನಳ್ಳಿ ಕಾಲೋನಿ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡನೆಗಳ ಉಪಟಳ ಹೆಚ್ಚಿದ್ದು ಈ ಭಾಗದ ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.ಶಾಸಕ ಸಿಮೆಂಟ್ ಮಂಜು ಮೂರ್ನಾಲ್ಕು ದಿನಗಳ ಹಿಂದೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲು ಬಂದ ಸಂದರ್ಭದಲ್ಲಿ ಕ್ಯಾತನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಈ ಭಾಗಕ್ಕೆ ಬಸ್ ಸೌಲಭ್ಯ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದರು.ಜನಸಾಮಾನ್ಯರ ಮನವಿಗೆ ಸ್ಪಂದಿಸಿದ ಶಾಸಕ ಸಿಮೆಂಟ್ ಮಂಜು ಈ ಭಾಗಕ್ಕೆ ಬಸ್ ಸೌಲಭ್ಯ ಕಲ್ಪಿಸಿ ಕೊಡುವ ಭರವಸೆ ನೀಡಿದ್ದರು. ಸದ್ಯ ಕೊಟ್ಟಮಾತಿನಂತೆ ಇಂದು ಹಾಸನದಿಂದ ಗಂಜಗೆರೆ ಗ್ರಾಮಕ್ಕೆ ಬರುತ್ತಿದ್ದ ಬಸ್ ಸೌಲಭ್ಯವನ್ನು ಕ್ಯಾತ್ನಳ್ಳಿ ಕಾಲೋನಿಯವರೆಗೆ ವಿಸ್ತರಿಸಿ ಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜು ಮಾತನಾಡಿ ಕ್ಯಾತ್ನಹಳ್ಳಿ ಗ್ರಾಮ ತಾಲೂಕಿನ ಗಡಿ ಗ್ರಾಮವಾಗಿದ್ದು ಬಸ್ ಸೌಲಭ್ಯ ಸೇರಿದಂತೆ ಇದುವರೆಗೂ ಯಾವುದೇ ಮೂಲಭೂತ ಸೌಕರ್ಯಗಳು ಗ್ರಾಮಕ್ಕೆ ತಲುಪುವುದೇ ಕಷ್ಟವಾಗಿತ್ತು. ಈ ಭಾಗದಲ್ಲಿ ಕಾಡಾನೆಗಳ ಉಪಟಳ ಒಂದು ಕಡೆಯಾದರೆ ಮೂಲಭೂತ ಸೌಕರ್ಯಗಳ ಕೊರತೆ ಮತ್ತೊಂದೆಡೆ ಜನಸಾಮಾನ್ಯರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು.ನಾನು ಶಾಸಕನಾದ ನಂತರ ಈ ಭಾಗದ ಜನರ ಜೊತೆ ಒಡನಾಡಿಯಾಗಿದ್ದೇನೆ.ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕ್ಯಾತ್ನಳ್ಳಿ ಗ್ರಾಮ ಹಾಗೂ ಸುತ್ತಮುತ್ತಲಿನ ಕಾಮಗಾರಿ ಗುದ್ದಲಿ ಪೂಜೆಗೆ ಬಂದ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬಸ್ ಸೌಲಭ್ಯದ ಬಗ್ಗೆ ಮನವಿ ಮಾಡಿದ್ದರು. ಹೀಗಾಗಿ ಸಂಬಂಧಪಟ್ಟ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳ ಜೊತೆ ಮಾತನಾಡಿ ಹಾಸನದಿಂದ ಕ್ಯಾತ್ನಳ್ಳಿ ಕಾಲೋನಿ, ಗ್ರಾಮದವರೆಗೂ ಬಸ್ಅನುಕೂಲ ಮಾಡಿಕೊಡಲಾಗಿದೆ.ಇದರಿಂದ ಈ ಭಾಗದ ಜನರು,ವಿದ್ಯಾರ್ಥಿಗಳು,ಕೂಲಿ ಕಾರ್ಮಿಕರಿಗೆ ತುಂಬಾ ಅನುಕೂಲವಾಗಲಿದೆ. ಈ ಗ್ರಾಮಗಳಿಗೆ ಹೆಚ್ಚುವರಿ ಬಸ್ಸಿನ ಅವಶ್ಯಕತೆ ಇದ್ದರೆ ಸೌಲಭ್ಯ ಒದಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗಂಜಿಗೆರೆ ಗ್ರಾಮ ಪಂಚಾಯತ್ ಪಿಡಿಓ ರುದ್ರೇಗೌಡ ಮುಖಂಡರಾದ ಉಮೇಶ್ ತಿಪ್ಪನಹಳ್ಳಿ,ಪ್ರಮೋದ ತಟ್ಟೆಕೆರೆ,ಪ್ರದೀಪ್(ಗುರು)ಸಿದ್ದಾಪುರ,ಶುಭ,ಆಧರ್ಶ,ಪ್ರವೀಣ್ ಉಪಸ್ಥಿತರಿದ್ದರು.
—————–ಧರ್ಶನ ಕೆರೆಹಳ್ಳಿ