ಚಿಕ್ಕಮಗಳೂರು-ಅಗತ್ಯ ವಸ್ತುಗಳ ದರ ಏರಿಸುತ್ತಾ ಜನರ ಬದುಕಲ್ಲಿ ಆಟವಾಡುತ್ತಿರುವ ರಾಜ್ಯ ಸರಕಾರ-ಬಸ್ ದರ ಯಥಾಸ್ಥಿತಿಗೆ ಎಎಪಿ ಆಗ್ರಹ

ಚಿಕ್ಕಮಗಳೂರು-ರಾಜ್ಯದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಪ್ರಯಾಣ ದರ ಹೆಚ್ಚಿಸದೆ ಯಥಾಸ್ಥಿತಿ ಕಾಪಾಡಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಜಿಲ್ಲಾ ಆಮ್‌ ಆದ್ಮಿ ಮುಖಂಡ ರುಗಳು ಸೋಮವಾರ ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ಅಧಿಕಾರಿ ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ಎಎಪಿ ಜಿಲ್ಲಾ ಕಾರ್ಯದರ್ಶಿ ಅಂಥೋಣೀ, ರಾಜ್ಯ ಸರ್ಕಾರ ವಿಧಾನಸಭೆ ಚುನಾವಣೆ ಮುಂಚಿತವಾಗಿ ಮಧ್ಯಮ ವರ್ಗದವರಿಗೆ ಹಾಗೂ ಬಡವರಿಗೆ ಒಳ್ಳೆಯ ಸವಲತ್ತುಗಳನ್ನು ನೀಡುತ್ತೇವೆ ಎಂದು ಸುಳ್ಳು ಭರವಸೆ ನೀಡಿ ದಿನೇ ದಿನೇ ಪ್ರತಿಯೊಂದು ವಸ್ತುಗಳ ಬೆಲೆ ಏರಿಸುತ್ತಿದೆ ಎಂದು ದೂರಿದರು.

ಅದರಂತೆ ಕೆ.ಎಸ್.ಆರ್.ಟಿ.ಸಿ. ಬಸ್ ಪ್ರಯಾಣ ದರದಲ್ಲೂ ಶುಲ್ಕವನ್ನು ಹೆಚ್ಚಿಸಿರುವ ಪರಿಣಾಮ ಮಧ್ಯಮ ವರ್ಗದವರಿಗೆ ಬಸ್‌ನಲ್ಲಿ ಸಂಚರಿಸಲು ಕಷ್ಟಕರವಾಗಿದೆ. ಹೀಗಾಗಿ ಬಸ್ ದರವನ್ನು ಹಿಂದಿನ ದರದಂತೆ ನಿಗಧಿಗೊಳಿಸಿ ಸಾರ್ವಜನಿಕರಿಗೆ ಅನುವು ಮಾಡಿಕೊಡಬೇಕು ಎಂದರು.
ಒoದು ವೇಳೆ ಬಸ್ ದರವನ್ನು ಯಥಾಸ್ಥಿತಿ ನಿಗಧಿಗೊಳಿಸದಿದ್ದಲ್ಲಿ ಎಎಪಿ ಮುಖಂಡರುಗಳು ರಾಜ್ಯ ಸರ್ಕಾರದ ವಿರುದ್ಧ ಜಿಲ್ಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಎಎಪಿ ಎಸ್ಸಿ, ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಪ್ರಭು, ಅಲ್ಪಸಂಖ್ಯಾತ ಮುಖಂಡರಾದ ವಸೀಮ್, ಇಲಿಯಾಖಾಥ್ ಮತ್ತಿತರರಿದ್ದರು.

—————-—ಸುರೇಶ್

Leave a Reply

Your email address will not be published. Required fields are marked *

× How can I help you?