
ಚಿಕ್ಕಮಗಳೂರು-ಬೆಂಗಳೂರಿನಲ್ಲಿ ನಡೆದ 20ನೇ ರಾಷ್ಟ್ರಮಟ್ಟದ ಅಬಕಾಸ್ ಸ್ಪರ್ಧೆಯಲ್ಲಿ ನೂರರ ಮೊತ್ತದ ಲೆಕ್ಕಾಚಾರವನ್ನು ಕೇವಲ ಐದು ನಿಮಿಷದಲ್ಲಿ ಪರಿಹರಿಸಿದ ತಾಲ್ಲೂಕಿನ ಸೆಂಟ್ ಮೇರಿಸ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳಾದ ಎಂ.ಸಿ.ಸಮೃದ್ದ ಪ್ರಥಮ ಸ್ಥಾನ ಹಾಗೂ ಎಂ.ಸಿ.ನಿಶಾoತ್ ಚಾಂಪಿಯನ್ಸ್ ಆಫ್ ಚಾಂಪಿಯನ್‌ನ್ನಾಗಿ ಹೊರಹೊಮ್ಮಿದ್ದಾರೆ.
ಇಬ್ಬರು ಮಕ್ಕಳು ಜಿಲ್ಲಾ ಸಹಾಯಕ ಖಜಾನಾಧಿಕಾರಿ ಎಂ.ಆರ್.ಚೇತನ್ ಮತ್ತು ಎಂ.ಎo.ವನಜಾಕ್ಷಿ ಪುತ್ರರು. ಐಡಿಯಲ್ ಪ್ಲೇ ಅಬಕಾಸ್ ಸಂಸ್ಥೆಯಿoದ ಈರ್ವರು ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.