ಚಿಕ್ಕಮಗಳೂರು-ವಿದ್ಯಾರ್ಥಿ ಜೀವನದಲ್ಲಿ ಬೇಜವಾಬ್ದಾರಿತನ ಮೈಗೂ ಡಿಸಿಕೊಂಡರೆ ಜೀವನ ದುಸ್ತರವಾಗುವುದರಲ್ಲಿ ಸಂಶಯವಿಲ್ಲ-ಡಾ,ಸಿ.ಟಿ. ಜಯದೇವ್

ಚಿಕ್ಕಮಗಳೂರು-ಪರಿಣಿತ ಉಪನ್ಯಾಸಕ ವೃಂದದಿoದ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಆಡಳಿತ ವ್ಯವಸ್ಥೆಯ ಅಡಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಎ.ಐ.ಟಿ ಕಾಲೇಜಿನ ವಿದ್ಯಾರ್ಥಿಗಳು ಅತ್ಯಂತ ಭಾಗ್ಯವಂತರು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಹೇಳಿದರು.

ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ಧ ಚುಂಚನ-2024ರ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬುಧವಾರ ಸಂಜೆ ಬಹುಮಾನ ವಿತರಿಸಿ ಅವರು ಮಾತನಾಡುತ್ತಿದ್ದರು.

ವಿದ್ಯಾರ್ಥಿ ಜೀವನ ಬಹಳಷ್ಟು ಅಪರೂಪವಾದುದು. ಕಳೆದ ಕ್ಷಣಗಳನ್ನು ಮರಳಿ ಪಡೆಯಲಾಗದು. ವಿದ್ಯಾರ್ಥಿ ಜೀವನದಲ್ಲಿ ಯುವಕ-ಯುವತಿಯರು ತುಂಟಾಟದ ಜೊತೆಗೆ ವಿದ್ಯಾಭ್ಯಾಸದ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದುವ ಮೂಲಕ ಸಮಾಜಕ್ಕೆ ಮಾದರಿ ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು.

ಸ್ವಾಸ್ತ್ಯ ಸಮಾಜ ನಿರ್ಮಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯ. ಇಂದಿನ ಯುವಸಮೂಹವೇ ದೇಶದ ಆಸ್ತಿಗಳಿದ್ದಂತೆ. ನಮ್ಮ ಪೂರ್ವಜರು ಕಟ್ಟಿ ಬೆಳೆಸಿದ ಸಂಸ್ಕೃತಿ,ಸಂಸ್ಕಾರ,ಜಾನಪದ ಸೊಗಡು,ಸಾಹಿತ್ಯದಿಂದ ನಿರ್ಮಾಣಗೊಂಡ ನಾಡನ್ನು ಉಳಿಸಬೇಕು ಎಂದು ಕಿವಿಮಾತು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯಿoದ ಕುಟುಂಬ ಹಾಗು ಗುರುಶಿಷ್ಯರ ಪರಸ್ಪರ ಸಂಬoಧಗಳು ನಶಿಸುತ್ತಿದೆ. ಹಿಂದಿನ ಸಮಯದಲ್ಲಿ ಶಾಲಾ ಗುರುಗಳು ದಂಡಿಸಿ ಮಕ್ಕಳ ವಿದ್ಯಾಭ್ಯಾಸವನ್ನು ಚುರುಕು ಗೊಳಿಸುತ್ತಿದ್ದರು.ಪ್ರಸ್ತುತ ಕಾಲಮಾನಕ್ಕೆ ಎಲ್ಲವೂ ಬದಲಾವಣೆಗೊಳ್ಳುತ್ತಿದೆ ಎಂದ ಅವರು ಪಾಲಕರು, ಗುರುಗಳಿಗೆ ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಹಿoದಿನ ಕಾಲದಲ್ಲಿ ಜಾನಪದದ ತತ್ವ ಪದಗಳಿಂದ ಜೀವನದ ಪದ್ಧತಿ ಅಳವಡಿಸಿಕೊಂಡಿದ್ದರು. ಸ್ನೇಹ, ಪ್ರೀತಿ ಹಾಗೂ ಸಂಬoಧಗಳಿಗೆ ಬಹಳಷ್ಟು ಬೆಲೆಯಿತ್ತು. ಹೀಗಾಗಿ ವಿದ್ಯಾರ್ಥಿಗಳು ಹಿರಿಯರು ಹಾಕಿ ಕೊಟ್ಟ ಮಾರ್ಗದಲ್ಲಿ ಸಮರ್ಪಕವಾಗಿ ನಡೆದರೆ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ತಿಳಿಸಿದರು.

ಎ.ಐ.ಟಿ ಕಾಲೇಜು ಪ್ರಾಂಶುಪಾಲ ಡಾ, ಸಿ.ಟಿ.ಜಯದೇವ್ ಮಾತನಾಡಿ, ವಿದ್ಯಾರ್ಥಿ ಬದುಕು ಅಮೂಲ್ಯವಾದುದು.ಕಲಿಕೆ ವೇಳೆಯಲ್ಲಿ ನಿರಂತರ ಅಭ್ಯಾಸಿಸಬೇಕು.ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಮುಂದೆ ಸಾಗಬೇಕು.ಇದನ್ನು ಹೊರತಾಗಿ ಬೇಜವಾಬ್ದಾರಿತನ ಮೈಗೂಡಿಸಿಕೊಂಡರೆ ಜೀವನ ದುಸ್ತರವಾಗುವುದರಲ್ಲಿ ಸಂಶಯವಿಲ್ಲ ಎಂದು ಎಚ್ಚರಿಸಿದರು.

ಇದೇ ವೇಳೆ ಚುಂಚನೋತ್ಸವದಲ್ಲಿ ವಿವಿಧ ಸ್ಪರ್ಧೆ ವಿಜೇತರಾದ ಹಾಗೂ ನಾಟಕ ಪ್ರದರ್ಶನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಂಜೆ ಚಂದನ್‌ಶೆಟ್ಟಿ ಮತ್ತು ತಂಡದವರಿಂದ ನಡೆದ ಗೀತಗಾಯನ ಕಾರ್ಯಕ್ರಮದಲ್ಲಿ ಕಾಲೇಜಿನ ಯುವಕ-ಯುವತಿಯರು ಕುಣಿದು ಕುಪ್ಪಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿoಗ್ ವಿಭಾಗದ ಮುಖ್ಯಸ್ಥ ಡಾ, ಜಿ.ಎಂ. ಸತ್ಯನಾರಾಯಣ್, ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಅಧಿಕಾರಿ ಸಂಗರೆಡ್ಡಿ ಮತ್ತಿತರರಿದ್ದರು.

—————ಸುರೇಶ್

Leave a Reply

Your email address will not be published. Required fields are marked *

× How can I help you?