ಚಿಕ್ಕಮಗಳೂರು-ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ 1995-99 ಸಾಲಿನ ಹಳೇ ವಿದ್ಯಾರ್ಥಿಗಳಿಗೆ ನಗರದಲ್ಲಿ ಎಐಟಿ ಕಾಲೇಜು ವತಿಯಿಂದ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಹೆಚ್ಚು ಹಿರಿಯ ವಿದ್ಯಾರ್ಥಿಗಳು ಕುಟುಂಬ ಸಮೇತ ಪಾಲ್ಗೊಂಡಿದ್ದರು.ಈ ನಡುವೆ ಹಳೆಯ ನೆನಪುಗಳು, ಕಾಲೇಜಿನಲ್ಲಿ ನಡೆಸಿದ ತುಂಟಾಟ ಹಾಗೂ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸಿಹಿಕ್ಷಣಗಳನ್ನು ಹಂಚಿಕೊoಡರು.
ಅನೇಕರು ಕಾಲೇಜಿನಲ್ಲಿ ಕಳೆದಂಥ ಸವಿನೆನಪಿನ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ತದನಂತರ ಎಐಟಿ ಕಾಲೇಜು ಕುರಿತು ಹಳೇ ವಿದ್ಯಾರ್ಥಿಗಳು ಕಿರುಚಿತ್ರವನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು. ಬಳಿಕ ಕಾಲೇಜಿನ ನಿವೃತ್ತ ಹಾಗೂ ಹಾಲಿ ಉಪನ್ಯಾಸಕರಿಗೆ ಹಳೇ ವಿದ್ಯಾರ್ಥಿಗಳು ಗೌರವಿಸುವ ಮೂಲಕ ಖುಷಿಪಟ್ಟರು.
ಈ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ.ಟಿ.ಜಯದೇವ್, ಕಾರ್ಯದರ್ಶಿ ಜಿ.ಎಂ. ಸತ್ಯನಾರಾಯಣ್, ಕಾಲೇಜು ರಿಜಿಸ್ಟರ್ ಡಾ|| ಸಿ.ಕೆ.ಸುಬ್ಬರಾಯ್, ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್ ಹಾಗೂ ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
——ಸುರೇಶ್