ಚಿಕ್ಕಮಗಳೂರು-ಅಖಿಲ ಭಾರತೀಯ ಸಾಹಿತ್ಯ ಪರಿಷದ್-ತಾಲ್ಲೂಕು ಮಹಿಳಾ ಸಮಿತಿ ಸಭೆಅ.27 ರಂದು ಧರ್ಮಸ್ಥಳದಲ್ಲಿ-ಉಮಾ ಪ್ರೇಮಕುಮಾರ್

ಚಿಕ್ಕಮಗಳೂರು-ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಪ್ರಾಂತೀಯ ಮಹಿಳಾ ಸಮಾವೇಶ ಅಕ್ಟೋಬರ್ 27ರಂದು ಧರ್ಮಸ್ಥಳದಲ್ಲಿ ಆಯೋಜನೆಗೊಂಡಿದ್ದು ಜಿಲ್ಲೆಯ ಮಹಿಳಾ ಸದಸ್ಯರು ಪಾಲ್ಗೊಳ್ಳುತ್ತಿದ್ದಾರೆಂದು ತಾಲ್ಲೂಕು ಮಹಿಳಾ ಸಮಿತಿ ಅಧ್ಯಕ್ಷೆ ಉಮಾ ಪ್ರೇಮಕುಮಾರ್ ತಿಳಿಸಿದರು.

ಸುವರ್ಣ ಮಾಧ್ಯಮ ಭವನದಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಚಿಕ್ಕಮಗಳೂರು ತಾಲ್ಲೂಕು ಮಹಿಳಾ ಸಮಿತಿ ರಚನೆಯ ಮೊದಲ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ನೇತ್ರಾವತಿ ಸ್ನಾನಘಟ್ಟಸಮೀಪದ ಸರ‍್ಯಕಮಲ ಸಭಾಭವನದಲ್ಲಿ ಭಾನುವಾರ ಬೆಳಗಿನಿಂದ ಸಂಜೆಯವರೆಗೆ ನಾಲ್ಕು ಅವಧಿಯಲ್ಲಿ ‘ಸಾಹಿತ್ಯದಲ್ಲಿ ಭಾರತೀಯ ಮಹಿಳೆ’ ಕುರಿತಂತೆ ಗೋಷ್ಠಿಗಳು ನಡೆಯಲಿವೆ. ರಾಜ್ಯದ ಸುಮಾರು 15ಮಂದಿ ಕವಯತ್ರಿಯರು ಇದೇ ವಿಷಯ ವಸ್ತುವಿನ ಮೇಲೆ ಕವನ ವಾಚಿಸುವರು.

ಭಾರತೀಯ ಮಹಿಳೆ ಶ್ರದ್ಧೆ, ಆದರ್ಶ, ಸಂಸ್ಕಾರ ಪ್ರಧಾನಕೇಂದ್ರ, ವಾತ್ಸಲ್ಯಮಯ ತಾಯಿಯನ್ನು ಕಾಣುವುದು ನಮ್ಮ ಸಂಸ್ಕೃತಿ. ಈ ನಿಟ್ಟಿನಲ್ಲಿ ಚಿಂತನೆಗಳು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಮಹಿಳಾಪ್ರಕಾರದ ಪ್ರಮುಖ್ ರಾಮನಗರದ ವಿನೂತಾ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಉಮಾ ವಿವರ ನೀಡಿದರು.

ಪರಿಷದ್ ಶೃಂಗೇರಿ ವಿಭಾಗದ ಸಂಚಾಲಕ ಪ್ರಭುಲಿಂಗಶಾಸ್ತ್ರೀ ಮಾತನಾಡಿ ಸಮಸ್ತ ಸಾಹಿತ್ಯಲೋಕವನ್ನೆ ಒಳಗೊಂಡಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವ್ಯಾಪಿಸಿರುವ ಏಕೈಕ ಸಾಹಿತ್ಯ-ಸಂಸ್ಕೃತಿಯ ಬೃಹತ್ ಸಂಘಟನೆ. ಸಮಾಜದಲ್ಲಿ ಅರ್ಧದಷ್ಟಿರುವ ಮಹಿಳೆಯರಿಗೆ ಎಲ್ಲ ರಂಗಗಳಲ್ಲೂ ಸೂಕ್ತ ಅವಕಾಶ ಲಭ್ಯವಾಗಬೇಕೆಂಬ ಹಿನ್ನಲೆಯಲ್ಲಿ ಪೂರ್ಣ ಪ್ರಮಾಣ ಮಹಿಳಾ ಸಮಿತಿಗಳನ್ನು ತಾಲ್ಲೂಕು, ಜಿಲ್ಲಾ ಹಂತಗಳಲ್ಲಿ ಈ ವರ್ಷ ರಚಿಸಲಾಗುತ್ತಿದೆ ಎಂದರು.

ಪ್ರಥಮರಾಜ್ಯ ಮಹಿಳಾಗೋಷ್ಠಿ ಆಯೋಜನೆಗೊಂಡಿದ್ದು ‘ಜಾನಪದ ಸಾಹಿತ್ಯ’ದಲ್ಲಿ ಮಹಿಳೆ ಕುರಿತಂತೆ ಕೇಂದ್ರಿಯ ವಿ.ವಿ.ಭಾಷಾವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಮಂಜುಳಾಕ್ಷಿಕಲುಬುರ್ಗಿ, ‘ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ’ ಕುರಿತಂತೆ ಡಾ.ಶಕುಂತಲಾಗೋಪಶೆಟ್ಟಿ ರಾಯಚೂರು, ‘ವಚನಸಾಹಿತ್ಯದಲ್ಲಿ ಸ್ತ್ರೀ ’ ಕುರಿತಂತೆ ಬೀದರ್‌ನ ಡಾ.ಜಗದೇವಿ, ‘ಆಧುನಿಕಸಾಹಿತ್ಯದಲ್ಲಿ ಸ್ತ್ರೀ ಕುರಿತಂತೆ ರತ್ನಾಬಡವಹಳ್ಳಿ ಮಾತನಾಡುವರು.

ಆಸರೆ ಚಾರಿಟೇಬಲ್ ಅಧ್ಯಕ್ಷೆ ಆಯುರ್ವೇದ ತಜ್ಞೆ ಡಾ.ಆಶಾಜ್ಯೋತಿರೈ ಉದ್ಘಾಟಿಸಲಿದ್ದು, ಗಮಕಿಸಾಹಿತಿ ಶಾಂತಾ ನಾಗಮoಗಲ ಸಮಾರೋಪ ಭಾಷಣ ಮಾಡುವರು. ಈ ಕಾರ್ಯಕ್ರಮಗಳಲ್ಲಿ ಮಹಿಳಾ ಕಾರ್ಯ ಕರ್ತೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರಭುಲಿಂಗ ಶಾಸ್ತ್ರೀ ಮನವಿ ಮಾಡಿದರು.

ಕರ‍್ಯದರ್ಶಿ ಚೈತ್ರಾ ಮದನ್ ಸ್ವಾಗತಿಸಿ, ಸುಮಿತ್ರಾ ಶಾಸ್ತ್ರೀ ಪ್ರಾರ್ಥಿಸಿದರು. ಸುಮಾ ಮಲ್ಲಿಕಾರ್ಜುನ್ ವಂದಿಸಿದರು. ಕವಯತ್ರಿ ಪಲ್ಲವಿ, ಕಾವೇರಿ ಜನಾರ್ಧನ್, ಮೋಹನಾ ಮಾದೇಶ್, ವನಜಾಕ್ಷಿ ಎಂ.ಎನ್.ಮೋಹನಕುಮಾರಿ, ಮಹೇಶ್ವರಿ ಗಾಳಿಮಠ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?