ಚಿಕ್ಕಮಗಳೂರು/ಆಲೂರು-ಕಾವ್ಯ ಆಲೂರು ತಾಲೂಕಿನ ಮಗ್ಗೆ ಗ್ರಾಮದ ಯುವತಿ, ಪುರುಷೋತ್ತಮ ಚಿಕ್ಕಮಗಳೂರು ತಾಲೂಕಿನ ಕೂದುವಳ್ಳಿ ಗ್ರಾಮದ ಯುವಕ.ಇಬ್ಬರು ಪರಸ್ಪರ ಪ್ರೀತಿಸಿ ಮಾಡುವೆ ಮಾಡಿಕೊಳ್ಳಲು ಮುಂದಾಗಿದ್ದರು.
ಆದರೆ ಅಲ್ಲಿ ಜಾತಿ ಎನ್ನುವ ಹುಳ ಅಡ್ಡ ಬಂದಿತ್ತು.ಕಾವ್ಯಳ ಮನೆಯವರು ಅಂತರಜಾತೀಯ ವಿವಾಹಕ್ಕೆ ಬಾರಿ ವಿರೋಧ ಒಡ್ಡಿದ್ದರು.
ಹಲವಾರು ವರುಷಗಳ ನಿಷ್ಕಲ್ಮಶ ಪ್ರೀತಿಯದು.ಕ್ಷುಲಕ ಕಾರಣಕ್ಕೆ ಬಲಿ ಕೊಡಲು ಸಾಧ್ಯವೇ ಇಲ್ಲ.
ಎರಡು ಜನರು ಚಿಕ್ಕಮಗಳೂರಿನ ಭೀಮ್ ಆರ್ಮಿಯ ಸದಸ್ಯರ ಗಮನಕ್ಕೆ ಈ ಸಮಸ್ಯೆಯನ್ನು ತಂದರು.ಹೇಗಾದರೂ ಮಾಡಿ ನಮ್ಮನ್ನು ಒಂದು ಮಾಡುವಂತೆ ಮನವಿ ಮಾಡಿಕೊಂಡರು.
ಚಿಕ್ಕಮಗಳೂರಿನ ಭೌದ್ಧ ವಿಹಾರದಲ್ಲಿ ಭೀಮ್ ಆರ್ಮಿಯ ಸದಸ್ಯರೆಲ್ಲರೂ ಸೇರಿ ಕಾವ್ಯ ಮತ್ತು ಪುರುಷೋತ್ತಮ್ ರವರ ವಿವಾಹವನ್ನು ನಡೆಸಿಕೊಟ್ಟು ನೂರ್ಕಾಲ ಸುಖವಾಗಿರುವಂತೆ ಹರಸಿದರು.
ಭೀಮ್ ಆರ್ಮಿಯ ಜಿಲ್ಲಾಧ್ಯಕ್ಷರಾದ ಗಿರೀಶ್ ಆಲ್ದೂರು, ಜಿಲ್ಲಾ ಗೌರವಾಧ್ಯಕ್ಷರಾದ ಹೋನ್ನೇಶ್, ಜಿಲ್ಲಾ ಉಪಾಧ್ಯಕ್ಷ ಸತೀಶ್ ಹೆಚ್ ಆರ್, ಯುವ ಘಟಕದ ಜಿಲ್ಲಾಧ್ಯಕ್ಷರಾದ ಪ್ರವೀಣ್ ( ಗುಂಡ ), ಪ,ಜಾತಿ ಪ,ಪಂಗಡದ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯರಾದ ಲಕ್ಷ್ಮಣ್ ಹುಣಸೇಮಕ್ಕಿ, ರವಿ ಗೋವಿನಹಳ್ಳಿ, ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ದಿಲೀಪ್,ಕುಮಾರ್, ನಂದನ್, ಕೀರ್ತಿ, ಭೀಮ್ ಆರ್ಮಿಯ ಸದಸ್ಯರಗಳು ಇದ್ದರು.
————————-ನೂರ್ ಅಹಮ್ಮದ್