
ಚಿಕ್ಕಮಗಳೂರು-ಅತ್ತಿಗುಂಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾಮಕ್ಕಳಿಗೆ ಉಚಿತ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು.
ನಗರದ ಎಂಜಿ ರಸ್ತೆಯ ಆಂಜನೇಯ ಜ್ಯುವೆಲರ್ಸ್ ಮಾಲೀಕರಾದ ವಿಜಯ ಕುಮಾರ್ ರವರು ಮಕ್ಕಳಿಗೆ ಶಾಲಾ ಬ್ಯಾಗ್ ಗಳನ್ನು ವಿತರಿಸಿದ್ದು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪ್ರೋತ್ಸಾಹಿಸಲು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸೇವೆ ನೀಡುವುದಾಗಿ ತಿಳಿಸಿದರು.
ಇವರ ಈ ಕಾರ್ಯಕ್ಕೆ ಅತ್ತಿಗುಂಡಿ ಗ್ರಾಮಸ್ಥರು ಹಾಗೂ ಶಾಲಾ ಸಿಬ್ಬಂದಿಗಳು ಧನ್ಯವಾದಗಳನ್ನು ಅರ್ಪಿಸಿದರು.

ಈ ಸಮಯದಲ್ಲಿ ಶಾಲಾ ಶಿಕ್ಷಕರಾದ ದೇವರಾಜ್,ಶಾಲಾ ಅಧ್ಯಕ್ಷರದ ಮೋಹನ್ ಕುಮಾರ್,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಿವಕುಮಾರ್ ಹಾಗೂ ಗ್ರಾಮಸ್ಥರಾದ ಜೈಪಾಲ್,ಸತೀಶ್ ಎಂ,ಸತೀಶ್ ಕೆ,ಪ್ರವೀಣ್ ಸಾಕೇತ್, ಜೈಪಾಲ್, ಸತೀಶ್.ಡಿ, ವಿಶ್ವ, ಚಂದ್ರು, ಪ್ರಸನ್ನ ಎ.ಕೆ ಇದ್ದರು.