ಮೂಡಿಗೆರೆ-ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯನ್ನು ಪ್ರತಿನಿಧಿಸಿದ್ದ ಬಣಕಲ್ ಆಲಿಫ್ ಸ್ಟಾರ್ ತಂಡವು ವಿಜಯಶೀಲರಾಗುವುದರೊಂದಿಗೆ ರಾಜ್ಯವನ್ನು ಪ್ರತಿನಿಧಿಸುವ ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ.
ತಮಿಳುನಾಡಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಬಣಕಲ್ ಆಲಿಫ್ ಸ್ಟಾರ್ ತಂಡ ಅಲ್ಲಿಯೂ ಗೆದ್ದು ಜಿಲ್ಲೆಯ ಹಾಗು ಬಣಕಲ್ ನ ಕೀರ್ತಿ ಪತಾಕೆಯನ್ನು ರಾಷ್ಟ್ರಮಟ್ಟದಲ್ಲಿಯೂ ಹಾರಿಸು ವಂತಾಗಲಿ ಎಂಬುದು ಕ್ರೀಡಾಪ್ರೇಮಿಗಳ ಹಾಗು ಬಣಕಲ್ ಗ್ರಾಮಸ್ಥರ ಹಾರೈಕೆಯಾಗಿದೆ.
ಆದಿಲ್ ನಾಯಕತ್ವದ ಬಣಕಲ್ ಆಲಿಫ್ ಸ್ಟಾರ್ ತಂಡದಲ್ಲಿ ಉಪನಾಯಕನಾಗಿ ಕಿಶೋರ್ ಸಫಾನ್,ಸಹ ಆಟಗಾರರಾಗಿ ಸುಹೇಲ್, ಕಿರಣ್, ನಿಹಾಲ್,ಮನೋಜ್,ಆಕಾಶ್,ರಶೀದ್,ರಿಫಾದ್ ಇದ್ದಾರೆ.
——-——ಸೂರಿ ಬಣಕಲ್