ತುಮಕೂರು:ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ತುಮಕೂರು 1 ಜಿಲ್ಲೆಯ 8 ತಾಲೂಕಿನ ಜ್ಞಾನ ವಿಕಾಸ ಸಮನ್ವಯಾಧಿಕಾರಿಯವರ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ನಂತರ ಮಾತನಾಡುತ್ತಾ, ಜ್ಞಾನ ವಿಕಾಸ ಕಾರ್ಯಕ್ರಮದ ಮಹತ್ವ,ಪರಿಣಾಮಕಾರಿ ಕಾರ್ಯಕ್ರ ಮದ ಅನುಷ್ಟಾನ, ವಾತ್ಸಲ್ಯ ಕಾರ್ಯಕ್ರಮ, ಟಾಸ್ಕ್ ಎಂಟ್ರಿ,ಕೇoದ್ರದ ಹಾಗೂ ಕಚೇರಿಯ ದಾಖಲಾತಿ, ವಾತ್ಸಲ್ಯ ಮನೆ ಭೇಟಿ, ಮಾಶಾಸನ ಪರಿಶೀಲನೆ ಮತ್ತು ನವೀಕರಣ, ಕೇಂದ್ರ ಭೇಟಿ ಮತ್ತು ಮನೆ ಭೇಟಿ, ಯುಟ್ಯೂಬ್ ಚಾನಲ್ ಸದಸ್ಯತ್ವ ನೋಂದಣಿ,ಸೇವ್ ವಾಟರ್,ಜೆವಿಕೆ ಕೇಂದ್ರದಲ್ಲಿ 60 ಜನ ಸದಸ್ಯರು ಇರುವ ಹಾಗೆ ಹೊಸ ಸದಸ್ಯರ ಸೇರ್ಪಡೆ ಬಗ್ಗೆ ಮಾಹಿತಿ ನೀಡಿದರು.
ಈ ದಿನ ವಿಶೇಷವಾಗಿ ಅನಿಕೇತನ ಟ್ರಸ್ಟ್ ಮೂಲಕ ಯಮುನಾ ರವರು ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್ ಲಕ್ಷಣಗಳ ಬಗ್ಗೆ ಹಾಗೆ ನಾವು ಮುನ್ನೆಚ್ಚರಿಸಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸಿದರು.
ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಜ್ಞಾನ ವಿಕಾಸ ಯೋಜನಾಧಿಕಾರಿಯವರಾದ ಸಂದ್ಯಾರವರೊಂದಿಗೆ ಎಲ್ಲಾ ತಾಲ್ಲೋಕಿನ ಸಮನ್ವಯಾಧಿಕಾರಿಯವರು ಸೂಕ್ತ ಪ್ರಶ್ನೆಯೊಂದಿಗೆ ಉತ್ತಮ ಮಾಹಿತಿ ಪಡೆದುಕೊಂಡರು.
——-—-ಕೆ.ಬಿ ಚಂದ್ರಚೂಡ