
ನಗರದ ಐಡಿಎಸ್ಜಿ ಸಮೀಪ ಜಿಲ್ಲಾ ಬಿಜೆಪಿ ಯುವಮೋರ್ಚಾ ಏರ್ಪಡಿಸಿದ್ದ ಕಾಲೇಜು ವಿದ್ಯಾರ್ಥಿ ಗಳಿಗೆ ಸದಸ್ಯತ್ವ ಅಭಿಯಾನದಲ್ಲಿ ಸೋಮವಾರ ಪಾಲ್ಗೊಂಡು ಅವರು ಮಾತನಾಡಿದರು.
ಜಗತ್ತಿನಲ್ಲೇ ಅತ್ಯಂತ ಹೆಚ್ಚು ಯುವಕರು ಹೊಂದಿರುವ ದೇಶ ಭಾರತ. ಯುವ ಭಾರತವನ್ನು ಸುಶಿ ಕ್ಷಿತ, ಕೌಶಲ್ಯವಂತ, ಸ್ವಾಭಿಮಾನ ಹಾಗೂ ಸ್ವಾವಲಂಬಿ ಭಾರತನ್ನಾಗಿ ನಿರ್ಮಿಸುವುದೇ ಪ್ರಧಾನಿ ನರೇಂದ್ರ ಮೋದಿಗಳ ಸಂಕಲ್ಪ. ಆ ನಿಟ್ಟಿನಲ್ಲಿ ಬಿಜೆಪಿ ಸದಸ್ಯತ್ವ ಹೊಂದುವ ಮೂಲಕ ರಾಷ್ಟ್ರ ಮೊದಲು ಎಂಬ ತತ್ವಕ್ಕೆ ಶಕ್ತಿ ಕೊಡಬೇಕು ಎಂದು ಹೇಳಿದರು.
ಇಂದಿನ ಯುವಕರು ರಾಷ್ಟ್ರ ಮೊದಲು ಎಂಬುವ ಶಕ್ತಿ ಬಲಗೊಂಡರೆ ಮಾತ್ರ ದೇಶ ಸದೃಢಗೊಳ್ಳ ಲು ಸಾಧ್ಯ. ಕೆಲವು ರಾಜಕೀಯ ಪಕ್ಷಗಳು ವೈಯಕ್ತಿಕ ಲಾಭದ ದೃಷ್ಟಿಯಿಂದ ಜಾತಿ ಜಾತಿಗಳ ನಡುವೆ ವಿಷ ಭಿತ್ತಿ ದೇಶವನ್ನು ದುರ್ಬಲಗೊಳಿಸಲು ಮುಂದಾಗುತ್ತಿರುವುದು ಸರಿಯಲ್ಲ ಎಂದರು.
ತಾತ್ಕಾಲಿಕ ರಾಜಕಾರಣಕ್ಕೆ ದೇಶ ದುರ್ಬಲಗೊಳಿಸುವುದು ಸೂಕ್ತವಲ್ಲ. ರಾಜಕೀಯ ಮೀರಿ ದೇಶ ಪ್ರಬಲಗೊಳ್ಳಬೇಕು. ದೇಶ ಪ್ರಬಲಗೊಳ್ಳಲು ಭಾರತೀಯ ಜನತಾ ಪಕ್ಷಕ್ಕೆ ಯುವಸಮೂಹ ಸೇರ್ಪಡೆಗೊಂ ಡು ದೇಶದ ಒಳಿತಿಗೆ ಮುಂದಾದರೆ ಸದೃಢ ರಾಷ್ಟ್ರ ನಿರ್ಮಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಯುವಮೊರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ ಕಾಲೇಜಿನಲ್ಲಿ 18 ವರ್ಷ ಮೇಲ್ಪಟ್ಟ ಯುವಕ-ಯುವತಿಯರನ್ನು ಬಿಜೆಪಿ ಸದಸ್ಯರನ್ನಾಗಿಸುವ ಮೂಲಕ ಪ್ರಧಾನಿಗಳ ಆಶಯವನ್ನು ಈಡೇರಿಸಲಾಗುತ್ತಿದೆ.ಅದರಂತೆ ಇಂದು ಕಾಲೇಜು ಕ್ಯಾಂಪಸ್ನಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಸದಸ್ಯ ರಾಗಿ ರಾಷ್ಟ್ರದ ಹಿತಚಿಂತನೆಗೆ ಕೈಜೋಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸತತ ಮೂರನೇ ಭಾರಿ ಪ್ರಧಾನಿಗಳಾಗಿ ಅಧಿಕಾರ ನಿರ್ವಹಿಸುತ್ತಿರುವ ನರೇಂದ್ರ ಮೋದಿಯವರ ಸಂಕಲ್ಪ ದಂತೆ ವಿದ್ಯಾರ್ಥಿಗಳನ್ನು ಸ್ವಇಚ್ಛೆಯಿಂದ ಸದಸ್ಯರನ್ನಾಗಿಸುತ್ತಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಕಾಲೇಜುಗಳ ಸಮೀಪದಲ್ಲಿ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷ ಪುಷ್ಪರಾಜ್, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಚಿನ್ಗೌಡ, ಕಾರ್ಯದರ್ಶಿಗಳಾದ ರಾಜೇಶ್, ಶಶಿ ಆಲ್ದೂರು, ಯುವ ಮೋರ್ಚಾ ನಗರ ಅಧ್ಯಕ್ಷ ಜೀವನ ಕೋಟೆ, ಪ್ರಮುಖರಾದ ಪುನೀತ್ ಬಿ.ಸಿ, ಕಿಟ್ಟಿ , ಮಧು ನಾಯರ, ಕಿಶೋರ್ ಕುಟ್ಟಿ, ತಿಲಕ್ ರಾಜ್ ಅರಸ್, ಜೀವನ್, ದೀಪಕ್ ಸುವರ್ಣ, ಪ್ರಶಾಂತ್, ಪಾರ್ಥಿಬನ್ ಹಾಜರಿದ್ದರು.
–
————ಸುರೇಶ್