ಚಿಕ್ಕಮಗಳೂರು-ಕಾಂಗ್ರೆಸ್ ಸರಕಾರದಿಂದ ಬಡವರನ್ನು ಶೋಷಿಸುವ ಕಾನೂನುಗಳನ್ನು ರೂಪಿಸಲಾಗುತ್ತಿದೆ-ದ.ಸಂ.ಸ

ಚಿಕ್ಕಮಗಳೂರು-ದೈನಂದಿನ ಕೂಲಿ ಕೆಲಸದಲ್ಲಿ ನಿರತರಾಗಿ ಸಣ್ಣಪುಟ್ಟ ಬದುಕು ಕಟ್ಟಿಕೊಂಡಿರುವ ಬಡವರಿಗೆ ರಾಜ್ಯ ಸರ್ಕಾರ ಕುಟುಂಬದ ಬಿ.ಪಿ.ಎಲ್ ಕಾರ್ಡ್ ರದ್ದತಿಗೆ ಮುಂದಾಗಿರುವುದು ಸರಿಯಲ್ಲ ಎಂದು ದ.ಸಂ.ಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್‌ಕುಮಾರ್ ಖಂಡಿಸಿದ್ದಾರೆ.

ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತಿರುವ ನಡುವೆ ಬಡವರನ್ನು ಶೋಷಿಸುವ ಕಾನೂನುಗಳನ್ನು ರೂಪಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸಮಾಜದಲ್ಲಿ ವರ್ಷನುಗಟ್ಟಲೇ ನಿರಂತರ ದುಡಿದು ಕುಟುಂಬ ಸಮೇತ ಸಂಚಾರಕ್ಕೆ ಸಣ್ಣಪುಟ್ಟ ಕಾರು ಖರೀದಿಸಿರುವ ಬಡಕುಟುಂಬದವರ ಬಿಪಿಎಲ್ ರೇಷನ್ ಕಾರ್ಡ್ ರದ್ದುಪಡಿಸಲು ಮುಂದಾಗಿರುವುದು ಸರಿಯಲ್ಲ ಎಂದು ದೂರಿದ್ದಾರೆ.

ಬೆಲೆಬಾಳುವ ಎರಡು-ಮೂರು ಕಾರುಗಳು ಹಾಗೂ ಐಶರಾಮಿ ಜೀವನ ನಡೆಸುವ ಕುಟುಂಬಕ್ಕೆ ಬಿ.ಪಿ.ಎಲ್ ಕಾರ್ಡ್ ರದ್ದುಗೊಳಿಸಲಿ,ಆದರೆ ಬಡವರು ಹಾಗೂ ಕೂಲಿ ಕಾರ್ಮಿಕರ ಕಾರ್ಡ್ ಕಸಿದುಕೊಳ್ಳಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿರುವುದು ತರವಲ್ಲ ಎಂದಿದ್ದಾರೆ.

ಮುಖ್ಯಮoತ್ರಿ ಸಿದ್ದರಾಮಯ್ಯ 2013ರ ಅವಧಿಯಲ್ಲಿ ಕೂಲಿಕಾರ್ಮಿಕರ ಆಶ್ರಯ ಮನೆ ಬಿಲ್ ಹಿಡಿದು ಬಡವರ ಶೋಷಿಸಿರುವುದು ನಮ್ಮ ಮುಂದಿದೆ.ಆದ್ದರಿಂದ ಕೂಡಲೇ ರಾಜ್ಯಸರ್ಕಾರ ಬಡವರ ಬಿ.ಪಿ.ಎಲ್ ಕಾರ್ಡ್ ರದ್ದತಿ ಕೈ ಬಿಡದಿದ್ದಲ್ಲಿ ದ.ಸಂ.ಸ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

———————ಸುರೇಶ್

Leave a Reply

Your email address will not be published. Required fields are marked *

× How can I help you?