ಚಿಕ್ಕಮಗಳೂರು-ಬಹುಜನ ಸಮಾಜ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷೆ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕು. ಮಾಯಾವ ತಿಯವರ ಹುಟ್ಟುಹಬ್ಬದ ಅಂಗವಾಗಿ ಜ.15 ರಂದು ನಗರ ಹೊರವಲಯದಲ್ಲಿ ವಿಭಿನ್ನವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಹೆಚ್.ಕುಮಾರ್ ಹೇಳಿದ್ದಾರೆ.
ಅಂದು ಇಂದಾವರ ಗ್ರಾಮದ ಅನ್ನಪೂರ್ಣ ವೃದ್ದಾಶ್ರಮದಲ್ಲಿ ದಿನವೀಡಿ ಸ್ವಚ್ಚತಾ ಕಾರ್ಯ ಹಮ್ಮಿಕೊoಡಿದೆ. ಜೊತೆಗೆ ವೃದ್ದರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿ, ಸಹಭೋಜನ ಮಾಡುವ ಮೂಲಕ ನಾಯಕಿ ಮಾಯಾವತಿ ಜನ್ಮದಿನವನ್ನು ಸಾಮಾಜಿಕ ಕಾರ್ಯದ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.
ದೇಶದ ಸಂವಿಧಾನ ಹೇಳಿರುವಂತೆ ಸರ್ವರು ಸಮಾನರೆಂಬ ದ್ಯೇಯ ಇಟ್ಟುಕೊಂಡು ಹತ್ತಾರು ವರ್ಷಗಳಿಂದ ಶೋಷಿತ ವರ್ಗಕ್ಕೆ ಅಧಿಕಾರ ಕೊಡಿಸಲು ರಾಜಕೀಯ ಆಂದೋಲನದಲ್ಲಿ ತೊಡಗಿರುವ ಮಾಯಾವತಿ ಜನ್ಮದಿನವನ್ನು ದೇಶಾದ್ಯಂತ ಆಚರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
———–ಸುರೇಶ್