
ಚಿಕ್ಕಮಗಳೂರು-ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಮಂಡಿಸಿರುವ ಬಜೆಟ್ ರೈತರು, ಯುವಸಮೂಹ, ಹಿರಿಯ ನಾಗರೀಕರು ಹಾಗೂ ದೇಶದ ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯುವ ಉತ್ತಮ ಬಜೆಟ್ ಎಂದು ಕಡವಂತಿ ಗ್ರಾ.ಪಂ. ಸದಸ್ಯ ವಿನೋದ್ ಹೇಳಿದ್ದಾರೆ.
ಕೇಂದ್ರ ಸಚಿವೆ ನಿರ್ಮಲ ಸೀತಾರಾಮರವರು 2025ರ ಬಜೆಟ್ ನಲ್ಲಿ ಪ್ರಾಥಮಿಕ ಶಾಲೆಗಳಿಗೆ ಬ್ರಾಡ್ ಬ್ಯಾಂಡ್, ರಾಜ್ಯಗಳಿಗೆ ಬಡ್ಡಿ ರಹಿತ ಸಾಲ, ಕಿಶನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ, ಹೊಸ ಆದಾಯ ತೆರಿಗೆ ಬಿಲ್,120 ಸ್ಥಳಗಳಿಗೆ ವಿಮಾನ, ಡೆಲಿವರಿ ಬಾಯ್ಸ್ ಗಳಿಗೆ ಪೋರ್ಟಲ್, ಕ್ಯಾನ್ಸರ್ ಔಷಧಿಗಳ ದರ ಇಳಿಕೆ, ಅಸ್ಸಾಮಿನಲ್ಲಿ ಯೂರಿಯಾ ಪ್ಲಾಂಟ್ ಆರಂಭ, ತೆರಿಗೆ ಇಳಿಸಿದ ಪರಿಣಾಮ ದೇಶಿ ನಿರ್ಮಿತ ಬಟ್ಟೆ ಮೇಡ್ ಇನ್ ಇಂಡಿಯಾ ಲಿಥಿಯನ್, ಬ್ಯಾಟರಿ ದರ ಇಳಿಕೆಯಾಗಿವೆ ಎಂದರು.
ಎಲ್‌ಈಡಿ, ಎಲ್‌ಸಿಡಿ ಟಿವಿ, ಮೊಬೈಲ್ ಫೋನ್ ಇಳಿಕೆ, 12 ಲಕ್ಷ ರೂ ವರೆಗೆ ತೆರಿಗೆ ವಿನಾಯಿತಿ, ಹಿರಿಯ ನಾಗರಿಕರಿಗೆ ಬಡ್ಡಿಯ ಮೇಲಿನ ತೆರಿಗೆ ಕಡಿತದ ಮಿತಿಯನ್ನು 50,000 ನಿಂದ 1 ಲಕ್ಷ ರೂಗೆ ಏರಿಕೆ, ನೂರು ಜಿಲ್ಲೆಗಳನ್ನು ಕೇಂದ್ರೀಕರಿಸಿ ಯೋಜನೆ ಕೃಷಿ ಉತ್ಪನ್ನಗಳ ಬೆಳವಣಿಗೆ ಆದ್ಯತೆ ನೀರಾವರಿ ಹಾಗೂ ಸ್ಟೋರೇಜ್‌ಗಳ ನಿರ್ಮಾಣಕ್ಕೆ ಹಣ ಮೀಸಲಿರಿಸಿದ್ದು ಇದರಿಂದ 1.7 ಕೋಟಿ ರೈತರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ.
ರೈತರ ಪರವಾಗಿ, ಸಣ್ಣ ದೊಡ್ಡ ಉದ್ಯಮಿಗಳ ಪರವಾಗಿ, ಶಿಕ್ಷಣದ ಪರವಾಗಿ, ಆರೋಗ್ಯದ ಪರವಾಗಿ ಎಲ್ಲಾ ಕ್ಷೇತ್ರಕ್ಕೂ ಬಜೆಟ್ಟನ್ನು ಮಂಡಿಸಿ ದೇಶದ ಜನತೆಗೆ, ಅಭಿವೃದ್ಧಿಗೆ ಉತ್ತಮವಾದ ಬಜೆಟ್ ಮಂಡಿಸಿದ ಕೀರ್ತಿಯನ್ನು ನಿರ್ಮಲ ಸೀತಾರಾಮ್ ದಕ್ಕಿಸಿಕೊಂಡಿದ್ದಾರೆ ಎಂದಿದ್ದಾರೆ.
———–ಸುರೇಶ್