ಚಿಕ್ಕಮಗಳೂರು-ಎಸ್.ಬಿದರೆ ಗ್ರಾಮದ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದ ಕ.ರ.ವೇ-ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ

ಚಿಕ್ಕಮಗಳೂರು-ತಾಲ್ಲೂಕಿನ ಎಸ್.ಬಿದರೆ ಗ್ರಾಮದ ಸುತ್ತಮುತ್ತಲಿನ ವಿದ್ಯಾರ್ಥಿ ಗಳಿಗೆ ಸಮರ್ಪಕ ಬಸ್ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ ಬಣ) ಮುಖಂ ಡರುಗಳು ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ಕರವೇ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ದಿನೇಶ್ ಶಿವಪುರ ಎಸ್.ಬಿದರೆ, ಧರ್ಮ ಪುರ, ಲಿಂಗದಹಳ್ಳಿ ಗ್ರಾಮಗಳ ಅನೇಕ ಮಕ್ಕಳು ವಿದ್ಯಾಭ್ಯಾಸಕ್ಕೆ ಜಾವಗಲ್‌ಗೆ ತೆರಳಬೇಕಿದೆ. ಹಿಂತಿರುಗಿ ವಾಪಸ್ ತೆರಳಲು ಬಸ್ ಸೌಕರ್ಯವಿಲ್ಲದೇ ಬಹಳಷ್ಟು ಪರದಾಡುವಂತಾಗಿದೆ ಎಂದು ಹೇಳಿದರು.

ವಿವಿಧ ಗ್ರಾಮಗಳಿಂದ ಜಾವಗಲ್‌ಗೆ ಸುಮಾರು 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೆರಳುತ್ತಿದ್ದಾರೆ. ಬೆಳಿಗ್ಗೆ ಸಮಯಕ್ಕೆ ಬಸ್ಸಿದೆ. ಆದರೆ ಶಾಲಾವಧಿಯ ಮುಗಿದ ಬಳಿಕ ಸಂಜೆ 4 ಗಂಟೆಗೆ ವಾಪಸ್ ತೆರಳಲು ಯಾವುದೇ ಸರ್ಕಾರಿ ಬಸ್‌ಗಳಿಲ್ಲ.ಸoಜೆ ವೇಳೆ ಬಸ್ಸಿನಲ್ಲದ ಕಾರಣ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಗ್ರಾಮಕ್ಕೆ ನಡೆದುಕೊಂಡೇ ತೆರಳುವ ಸ್ಥಿತಿಯಿದೆ. ಆ ನಿಟ್ಟಿನಲ್ಲಿ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಾವಗಲ್‌ನಿಂದ ಎಸ್.ಬಿದರೆ ಗ್ರಾಮಕ್ಕೆ ತೆರಳಲು ಸಂಜೆ 4ಕ್ಕೆ ಒಂದು ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಅತ್ತಿಗುಂಡಿ, ದತ್ತಪೀಠ, ಮಹಲ್, ಬಿಸಗ್ನಿಮಠ ಹಾಗೂ ಕೆಸವಿನಮನೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸಮಯಕ್ಕೆ ಬರುತ್ತಿಲ್ಲ. ಬಸ್‌ನ ಚಾಲಕ ಸ್ಥಳೀಯ ನಿವಾಸಿಗಳಿಗೆ ಸ್ಪಂದಿಸುತ್ತಿಲ್ಲ ಹಾಗೂ ಸಮಯಕ್ಕೆ ಸಂಚರಿಸುತ್ತಿಲ್ಲ.ಈ ಬಗ್ಗೆ ವಿಚಾರಿಸಿದರೆ ಚಾಲಕ ಖಾಸಗೀ ಬಸ್‌ನಲ್ಲಿ ತೆರಳಿ ಎಂದು ಉಡಾಫೆ ನೀಡುತ್ತಿದ್ದಾರೆ ಎಂದು ದೂರಿದರು.

ಚಾಲಕನ ವರ್ತನೆ ಗಮನಿಸಿದರೆ ಚಾಲಕ ಮತ್ತು ಡಿಪೋ ಮ್ಯಾನೇಜರ್ ಖಾಸಗೀ ಬಸ್ ಮಾಲೀಕರ ಜೊತೆ ಹೊಂದಾಣಿಕೆ ಮಾಡಿಕೊಂಡoತಿದೆ ಎಂಬ ಅನುಮಾನ ಮೂಡುತ್ತಿದೆ. ಹೀಗಾಗಿ ಪ್ರಸ್ತುತ ದತ್ತಪೀಠ ಭಾಗದಲ್ಲಿ ಸಂಚರಿಸುವ ಸರ್ಕಾರಿ ಬಸ್ ಚಾಲಕನ ಬದಲಾಗಿ ಬೇರೆ ಚಾಲಕನನ್ನು ನೇಮಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎನ್.ಜಗದೀಶ್, ತಾಲ್ಲೂಕು ಅಧ್ಯಕ್ಷ ಎಸ್.ಡಿ.ಜೀವನ್, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಹರ್ಷ, ಗೌರವಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷರಾದ ಕುಮಾರ್, ಕಿರಣ್, ಗಿರಿಭಾಗದ ಗ್ರಾಮಸ್ಥರಾದ ಸುರೇಂದ್ರ, ಕುಮಾರ್, ಸುಂದರೇಶ್, ಅವಿನಾಶ್ ಮತ್ತಿತ ರರು ಹಾಜರಿದ್ದರು.

——————–ಸುರೇಶ್

Leave a Reply

Your email address will not be published. Required fields are marked *

× How can I help you?