ಚಿಕ್ಕಮಗಳೂರು-ಸರ್ಕಾರಿ ಬಸ್ ನಿಲುಗಡೆ ರದ್ದತಿ ಆದೇಶ ಹಿಂಪಡೆಯಲು ಎಸ್.ಪಿ ಗೆ ಮನವಿ ಸಲ್ಲಿಸಿದ ನಾಗರೀಕ ಹೋರಾಟ ಸಮಿತಿ

ಚಿಕ್ಕಮಗಳೂರು-ನಗರದ ಶೃಂಗಾರ್ ಹಾಗೂ ಹನುಮಂತಪ್ಪ ವೃತ್ತದಲ್ಲಿ ಸರ್ಕಾರಿ ಬಸ್‌ಗಳ ನಿಲುಗಡೆ ರದ್ಧತಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ನಾಗರೀಕ ಹೋರಾಟ ಸಮಿ ತಿ ಮುಖಂಡರುಗಳು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ್ ಆಮಟೆಗೆ ಮಂಗಳವಾರ ಮನವಿ ಸಲ್ಲಿಸಿದರು.

ಹೋರಾಟ ಸಮಿತಿ ಸಂಚಾಲಕ ಸಂತೋಷ್ ಕೋಟ್ಯಾನ್ ಮಾತನಾಡಿ ಸರ್ಕಾರಿ ಬಸ್‌ನಿಲ್ದಾಣದಿಂದ ಸುಮಾರು 1 ಕಿ.ಮೀ. ವ್ಯಾಪ್ತಿಯಲ್ಲಿ ಬಸ್ ನಿಲುಗಡೆ ಇಲ್ಲದಿರುವ ಕಾರಣ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಶೀಘ್ರದಲ್ಲೇ ಬಸ್ ನಿಲುಗಡೆಗೆ ಆದೇಶಿಸಬೇಕು ಎಂದು ಹೇಳಿದರು.

ಶೃಂಗಾರ್ ವೃತ್ತ ವಿಜಯಪುರ,ಗೌರಿಕಾಲುವೆ, ಬಸವನಹಳ್ಳಿ, ನೆಹರುನಗರ, ರಾಮನಹಳ್ಳಿ, ಅಯ್ಯಪ್ಪನಗರ, ಉಪ್ಪಳ್ಳಿ, ಮಲ್ಲಂದೂರು, ಅಜ್ಜಂಪುರ ಸೇರಿದಂತೆ ಗ್ರಾಮ ವ್ಯಾಪ್ತಿಗಳ ಸಾರ್ವಜನಿಕರಿಗೆ ತುಂಬಾ ಉಪಯುಕ್ತ ಮತ್ತು ಅತ್ಯವಶ್ಯಕ ನಿಲುಗಡೆ ಕೇಂದ್ರವಾಗಿದೆ.

ಇಲ್ಲಿ ಬಸ್ ನಿಲುಗಡೆ ಮಾಡುವುದರಿಂದ ಸಾರ್ವಜನಿಕರು ಸೇರಿದಂತೆ ವಿದ್ಯಾರ್ಥಿ ನಿಲಯ ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಹಳಷ್ಟು ನೆರವಾಗಲಿದೆ ಎಂದರು.

ಪ್ರಸ್ತುತ ಸ್ಥಳದಲ್ಲಿ ಬಿಸಿಲು, ಮಳೆಯಿಂದ ಸಾರ್ವಜನಿಕರಿಗೆ ರಕ್ಷಣೆಗಾಗಿ ತಂಗುದಾಣ ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ.ಆದರೆ ಕೆಲವು ಪ್ರಬಾವಿಗಳ ಒತ್ತಡದಿಂದ ಈ ಕಾರ್ಯಕ್ಕೆ ಹಿನ್ನಡೆಯಾಗಿರುವ ಅನುಮಾನ ವ್ಯಕ್ತವಾಗುತ್ತಿದೆ.ಕಳೆದ ಮೂರುದಶಕಗಳ ಹಿಂದೆ ಬಸ್ ತಂಗುದಾಣವಿತ್ತು. ರಸ್ತೆ ಅಗಲೀಕರಣದಲ್ಲಿ ತೆರವುಗೊಳಿಸಿದ ನಂತರ ಹೊಸದಾಗಿ ನಿರ್ಮಿಸಿಲ್ಲ ಎಂದು ಹೇಳಿದರು.

ಶೃಂಗಾರ್ ವೃತ್ತದಲ್ಲಿ ನಿಯಂತ್ರಣಕ್ಕೆ ಬಾರದಷ್ಟು ವಾಹನ ದಟ್ಟಣೆ ಇರುವುದಿಲ್ಲ. ಟ್ರಾಫಿಕ್ ನಿಯಂತ್ರಣಕ್ಕೆ ಮುಖ್ಯವಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಸುಧಾರಿಸಬೇಕಿದೆ.ಕಡೂರಿಗೆ ಕರ್ತವ್ಯಕ್ಕೆ ತೆರಳುವ ಸರ್ಕಾರಿ, ಖಾಸಗೀ ನೌಕರರು, ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರ ವಾಹನಗಳ ಕಾರಣಕ್ಕೆ ಮುಂಜಾನೆಯಿoದ ಸಂಜೆ ತನಕ ಪಾರ್ಕಿಂಗ್‌ನಿoದ ದಟ್ಟಣೆ ಹೆಚ್ಚಿದ್ದು ನೋಪಾರ್ಕಿಂಗ್ ಎಂದಾದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದರು.

ಇದೇ ವೇಳೆ ಬಸ್ ನಿಲುಗಡೆ ರದ್ದತಿ ಸಂಬoಧ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹೋರಾಟ ಸಮಿತಿ ಸದಸ್ಯರುಗಳಾದ ಶ್ಯಾಮ್ ವಿ.ಗೌಡ, ಪ್ರದೀಪ್, ರಾಜೇಶ್, ನವೀನ್‌ಶೆಟ್ಟಿ, ಮಂಜುನಾಥ್, ಸುನೀಲ್, ಆಟೋ ಚಾಲಕರಾದ ಯಶವಂತ್, ಶೇಖರ್, ಸಮೀರ್ ಮತ್ತಿತರರಿದ್ದರು.

————–ಸುರೇಶ್

Leave a Reply

Your email address will not be published. Required fields are marked *

× How can I help you?