ಚಿಕ್ಕಮಗಳೂರು-ಕಾಂಗ್ರೆಸ್ ಒಂದು ಉರಿಯುವ ಮನೆ,ಸಂವಿಧಾನ ರಚನೆಗೆ ಅಡ್ಡಿ,ಅಂಬೇಡ್ಕರ್ ಸೋಲಿಗೆ ಕಾರಣ ಜೊತೆಗೆ ತತ್ವಾದರ್ಶ ಮತ್ತು ಆಶಯಗಳಿಗೆ ಕೊಡಲಿಪೆಟ್ಟು ಹಾಕಿ ದಲಿತ ಸಮುದಾಯಕ್ಕೆ ದ್ರೋಹವೆಸಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದ ಮುಖಂಡರುಗಳು ನಗರದ ಸಿ.ಟಿ.ರವಿ ಸ್ವಗೃಹಕ್ಕೆ ಬುಧವಾರ ಸಂಜೆ ತೆರಳಿ ಆರೋಗ್ಯ ಮತ್ತು ಯೋಗಕ್ಷೇಮ ವಿಚಾರಿಸಿದ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಂವಿಧಾನ ರಚನೆಗೊಂಡ ಬಳಿಕ 1952ರ ಚುನಾವಣೆಯಲ್ಲಿ ಅಂಬೇಡ್ಕರ್ ವಿರುದ್ಧ ಅವರ ವೈಯಕ್ತಿಕ ಸಹಾಯಕರನ್ನು ಎತ್ತಿಕಟ್ಟಿ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಿಸುವ ಮುಖಾಂತರ ಕಾಂಗ್ರೆಸ್ ಕುತಂತ್ರವೆಸಗಿತ್ತು.ಅಂದು ಅಂಬೇಡ್ಕರ್‌ರವರೇ ಕಾಂಗ್ರೆಸ್ ಒಂದು ಉರಿಯುವ ಮನೆ ಎಂದು ಹೇಳಿರುವುದನ್ನು ಕಾಂಗ್ರೆಸ್ ಮರೆತಂತಿದೆ ಎಂದರು.
ದೇಶದ ಇತಿಹಾಸದಲ್ಲಿ ಅಂಬೇಡ್ಕರ್‌ಗೆ ವಂಚಿಸಿ ಕಾಂಗ್ರೆಸ್ ಅನೇಕ ವರ್ಷಗಳ ಕಾಲ ಆಡಳಿತ ನಡೆಸಿತು. ಸಂವಿಧಾನವನ್ನು ತುರ್ತುಪರಿಸ್ಥಿತಿ,ಮೂಲಭೂತ ಹಕ್ಕಿಗಾಗಿ ಅತಿಹೆಚ್ಚು ತಿದ್ದುಪಡಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಂಬೇಡ್ಕರ್ ಅಗೌರವಿಸಿ, ಇದೀಗ ಸಂವಿಧಾನ ಶಿಲ್ಪಿಯ ಹೆಸರೇಳಿಕೊಂಡು, ಮನುಸ್ಮೃತಿ ತೋರಿಸಿ ನಾಟಕವಾಡುತ್ತಿದೆ ಎಂದು ದೂರಿದರು.
ಅಂದಿನ ನೆಹರು ಸರಕಾರ ಸಂವಿದಾನ ಸಮರ್ಪಿಸಿದ ದಿನವನ್ನು ಕಾನೂನು ದಿನವೆಂದು ಘೋಷಿಸಿ ಅಂಬೇಡ್ಕರ್ ಹೆಸರನ್ನು ಮರೆಮಾಚಿತು. ಆದರೆ ನರೇಂದ್ರ ಮೋದಿ ಸರ್ಕಾರ ರಾಷ್ಟದಲ್ಲಿ 2015ರಲ್ಲಿ ಅಧಿಕಾರ ಹಿಡಿದು ಮೊದಲು ಕಾನೂನು ದಿನವನ್ನು,ಸಂವಿಧಾನ ದಿನವೆಂದು ಬದಲಿಸಿ, ದೇಶದೆಲ್ಲೆಡೆ ಸಂವಿಧಾನ ಪಠಿಸುವ ಆದೇಶವಿರಿಸಿ ಅಂಬೆೆoಡ್ಕರ್‌ಗೆ ಗೌರವ ಸೂಚಿಸಿತ್ತು ಎಂದರು.
ಕೇoದ್ರ ಸರ್ಕಾರ ಎಂದಿಗೂ ಜಾತಿಪರ ಯೋಜನೆ ಕೈಗೊಂಡಿಲ್ಲ. ದೇಶದ ನಾಗರೀಕರು ಆರ್ಥಿಕವಾಗಿ ಕುಗ್ಗದಂತೆ ಪ್ರಧಾನಮಂತ್ರಿ ಜನಧನ್ ಯೋಜನೆ, ಆಯುಷ್ಮಾನ್ ಭಾರತ್ ಸೇರಿದಂತೆ ಅನೇಕ ಯೋಜನೆ ಗಳನ್ನು ಬಡವರ ಕಲ್ಯಾಣಕ್ಕಾಗಿ ಅನುಷ್ಟಾನಗೊಳಿಸಿದೆ ಎಂದು ಹೇಳಿದರು.
ಪಕ್ಷದ ಕಾರ್ಯಕರ್ತರು ನಮ್ಮ ಕುಟುಂಬದoತೆ. ಸಂಕಷ್ಟ ವೇಳೆಯಲ್ಲಿ ಹಗಲು-ರಾತ್ರಿ ಎನ್ನದೇ ಆತ್ಮ ಸ್ಥೈರ್ಯ ತುಂಬಿದ್ದಿರಿ. ಹೋರಾಟದಲ್ಲಿ ಬೆನ್ನು ತೋರಿಸದೇ ಎದೆಗೊಟ್ಟು ನಿಂತಿರುವ ಕಾರ್ಯಕರ್ತರ ಋಣವನ್ನು ಎಂದಿಗೂ ಮರೆಯುವುದಿಲ್ಲ. ಆ ಋಣವನ್ನು ತೀರಿಸುವ ಕೆಲಸ ಶಾಶ್ವತವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ, ಬಡವರು, ಶೋಷಿತರು, ದೀನದಲಿತರ ಸಮಗ್ರ ಅಭಿವೃಧ್ದಿಗೆ ಶ್ರಮಿಸಿರುವ ಕೇಂದ್ರ ಸರ್ಕಾರ ಹಾಗೂ ಜನನಾಯಕ ಸಿ.ಟಿ.ರವಿ ಪರವಾಗಿ ನಿಲ್ಲು ವ ಕಾಯಕ ಕಾರ್ಯಕರ್ತರು ಮಾಡಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಗೆ ಲಕ್ಷ್ಮಿ ಹೆಬ್ಬಾಳ್ಳಕ್ಕರ್ ಆಗಮಿಸಿದರೆ ನ್ಯಾಯ ಸಮ್ಮತ ಹೋರಾಟಕ್ಕೂ ಸಜ್ಜಾಗುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಎಸ್ಸಿ ಮೋರ್ಚಾ ಉಪಾಧ್ಯಕ್ಷರಾದ ವೈ.ಜಿ.ಸುರೇಶ್, ಕೃಷ್ಣಮೂರ್ತಿ, ಹುಳ್ಳೆ ಹಳ್ಳಿ ಲಕ್ಷ್ಮಣ್ , ಪ್ರಮುಖ್ ಲಕ್ಷ್ಮಣ ನಾಯಕ್, ತಾಲ್ಲೂಕು ವಕ್ತಾರ ಹಂಪಯ್ಯ, ನಗರಾಧ್ಯಕ್ಷ ಜಗದೀಶ್, ಮು ಖಂಡರುಗಳಾದ ವೀರಪ್ಪ, ಹಾಲಪ್ಪ, ಹೆಚ್.ಕೆ.ಕೇಶವಮೂರ್ತಿ, ರೇವನಾಥ್, ರಾಘವೇಲು, ಯತೀಶ್, ಮಂಜು ಮತ್ತಿತರರು ಉಪಸ್ಥಿತರಿದ್ದರು.
———————–ಸುರೇಶ್