ಚಿಕ್ಕಮಗಳೂರು-ಕೇಂದ್ರ ಸರ್ಕಾರ ಉದ್ಯಮಿಗಳ ಕೊಟ್ಯಾಂತರ ರೂಪಾಯಿಗಳ ಸಾಲವನ್ನು ಮನ್ನಾ ಮಾಡಿದ್ದೂ ಅದರಂತೆಯೇ ಕಾಫೀ ಬೆಳೆಗಾರರ-ಹಾಗು ಇತರ ವ್ಯವಹಾರಸ್ತರ ವಿವಿಧ ರೀತಿಯ ಸಾಲಗಳನ್ನು ಮನ್ನಾ ಮಾಡಲು ಮುಂದಾಗಬೇಕು ಎಂದು ಕಾಂಗ್ರೆಸ್ ಮುಖಂಡ ಕೆ ಭರತ್ ಒತ್ತಾಯಿಸಿದ್ದಾರೆ.
ಲೀಡ್ ಬ್ಯಾಂಕ್ ನ ಮುಖ್ಯಸ್ಥರಿಗೆ ಈ ಸಂಬಂಧ ಮನವಿ ಪತ್ರವನ್ನು ನೀಡಿ ಮಾತನಾಡಿದ ಅವರು,ಕೋವಿಡ್,ಪ್ರಕ್ರತಿ ವಿಕೋಪಗಳಿಂದ ಜಿಲ್ಲೆಯ ಕಾಫೀ ಬೆಳೆಗಾರರು ಹಾಗು ಇತರೆ ಸಾಲಗಾರರು ತೀವ್ರ ತರದ ಆರ್ಥಿಕ ನಷ್ಟವನ್ನು ಹೊಂದಿದ್ದಾರೆ.
ಕಾಫೀ ಬೆಳೆಯ ಬೆಲೆ ಏರಿಕೆಯಿದ್ದರೂ ವಿಪರೀತ ಮಳೆಯ ಕಾರಣಕ್ಕೆ ಬೆಳೆಗಾರರಿಗೆ ನಿರೀಕ್ಷಿತ ಮಟ್ಟದ ಲಾಭಾಂಶ ದೊರೆತಿಲ್ಲ.ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬೇರೆ ರೈತರ ಸಾಲ ಮನ್ನಾ ಮಾಡಿದಂತೆಯೇ ಸಾಲ ಮನ್ನಾದಂತಹ ಕಾರ್ಯಕ್ರಮವನ್ನು ಕಾಫೀ ಬೆಳೆಗಾರರಿಗೂ ನೀಡುವ ಅಗತ್ಯವಿದೆ.ಜೊತೆಗೆ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಿದ ರೀತಿಯೇ ಇತರೆ ಸಾಲಗಾರರ ಸಾಲವನ್ನು ಮನ್ನಾ ಮಾಡಬೇಕಿದೆ.
ಕೆನರಾ ಬ್ಯಾಂಕ್ ಇದೇ ತಿಂಗಳ 30ನೇ ತಾರೀಕಿನಂದು ಹಮ್ಮಿಕೊಂಡಿದ್ದ ಚಿಕ್ಕಮಗಳೂರು ಹಾಗೂ ಗವನಹಳ್ಳಿ ಶಾಖೆಗಳ ಕೆಲವು ಸುಸ್ಥಿದಾರರುಗಳ ಕಾಫಿ ತೋಟ,ಕೃಷಿ ಭೂಮಿ ಇನ್ನು ಇತರೆ ಆಸ್ತಿಗಳ ಹರಾಜು ಪ್ರಕ್ರಿಯೆಯನ್ನು ಮುಂದೂಡಿರುವುದ ಸ್ವಾಗತಿಸುತ್ತೇವೆ.
ಹಾಗೆ ಸುಸ್ಥಿದಾರರುಗಳಿಗೆ 6ತಿಂಗಳುಗಳ ಕಾಲಾವಕಾಶ ನೀಡಿದ್ದು,ಅವಧಿ ಪೂರ್ಣಗೊಂಡ ನಂತರ ಏಕಾಏಕಿಯಾಗಿ ಅಸಲು ಬಡ್ಡಿಯನ್ನು ಒಮ್ಮೆಲೇ ಕಟ್ಟಬೇಕು ಎಂದಾದರೆ ಸುಸ್ಥಿದಾರರು ಇನ್ನು ದೊಡ್ಡ ಸಮಸ್ಯೆಗಳನ್ನು ಎದುರಸಬೇಕಾಗುತ್ತದೆ.
ಆದ ಕಾರಣ ಮುಂದೆ ತಾವುಗಳು ಓ.ಟಿ.ಎಸ್‌ನಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಅವಕಾಶ ನೀಡುವುದರೊಂದಿಗೆ ಹಣವನ್ನು ಮರುಪಾವತಿಸಲು 3ರಿಂದ 4ಕಂತುಗಳಲ್ಲಿ ಕಟ್ಟಲು ಅವಕಾಶ ಮಾಡಿಕೊಡಬೇಕು.ಹಾಗೂ ಮೇಲ್ಕಾಣಿಸಿದ ವಿಕೋಪಗಳನ್ನು ಮನಗಂಡು ರಿಯಾಯಿತಿ
ನೀಡಬೇಕು ಹಾಗೂ ಕೇಂದ್ರ ಸರ್ಕಾರ ಈ ರೀತಿಯಾದ ತೊಂದರೆಗೆ ಒಳಪಟ್ಟವರ ಸಂಪೂರ್ಣ ಬಡ್ಡಿ ಮನ್ನಾ ಮಾಡಬೇಕು. ಅಸಲಲ್ಲೂ ಕೂಡಾ ರಿಯಾಯಿತಿ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
—————ಸುರೇಶ್