ಚಿಕ್ಕಮಗಳೂರು-ದೈವಜ್ಞ ಸೌಹಾರ್ದ ಸಹಕಾರಿ ನಿಯಮಿತ ಪ್ರಸಕ್ತ ಸಾಲಿನಲ್ಲಿ 9.83ಲಕ್ಷರೂ.ಗಳ ನಿವ್ವಳ ಲಾಭ
ಗಳಿಸಿದೆ ಎಂದು ಅಧ್ಯಕ್ಷೆ ಶಾಲಿನಿ ಅಶೋಕರಾಯ್ಕರ್ ತಿಳಿಸಿದರು.
.
ನಗರದ ಸನ್‌ರೈಸ್ ಹೋಟೇಲ್ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ದೈವಜ್ಞ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ 2023-24ನೆಯ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಇದು 25ನೆಯ ಮಹಾಸಭೆಯಾಗಿದ್ದು ಈ ವರ್ಷ ರಜತ ಮಹೋತ್ಸವವನ್ನು ಆಚರಿಸಲಾಗುವುದೆಂದರು.
ಮಾರ್ಚ್ 31ರವರೆಗೆ 14.20ಲಕ್ಷರೂ.ಗಳ ಒಟ್ಟು ಷೇರು ಬಂಡವಾಳ ಹೊಂದಿದೆ.10ಕೋಟಿ 73ಲಕ್ಷ 78ಸಾವಿರ ರೂ.ಗಳ ಠೇವಣಾತಿ ಹೊಂದಿದೆ.ಹಿಂದಿನ ವರ್ಷ 10.68ಕೋಟಿ.ರೂ. ಠೇವಣಿ ಇದ್ದು, ಈ ವರ್ಷ 4.88ಲಕ್ಷರೂ. ಅಧಿಕ ಠೇವಣಾತಿಗಳಾಗಿವೆ. 8,16,04,687ರೂ.ಗಳ ಸಾಲ ವಿತರಿಸಿದ್ದು, ಕಳೆದ ಸಾಲಿಗೆ ಹೋಲಿಸಿದರೆ 7.4ಲಕ್ಷರೂ. ಹೆಚ್ಚು ಸಾಲ ಕೊಡಲಾಗಿದೆ. 9,82,127ರೂ. ನಿವ್ವಳ ಲಾಭ ಗಳಿಸಿದೆ ಎಂದವರು ವಿವರಿಸಿದರು.
ಈ ವರ್ಷ ಶೇ.10ರ ಲಾಭಾಂಶವನ್ನು ಆಡಳಿತ ಮಂಡಳಿ ಸೂಚಿಸಿದ್ದು ಮುಂದಿನ ಸಾಲಿನಲ್ಲಿ ರಜತ ಮಹೋತ್ಸವ ವರ್ಷದಲ್ಲಿ ಹೆಚ್ಚು ಲಾಭಾಂಶ ನೀಡುವ ಆಶಯವಿದೆ. 20.24ಲಕ್ಷರೂ.ಗಳ ಲಾಭ ಅಂದಾಜಿಸಲಾಗಿದೆ.ಕಡೂರು ಶಾಖೆಯೂ ಸುಸ್ಥಿತಿಯಲ್ಲಿದೆ ಎಂದು ಉತ್ತರಿಸಿದ ಅಧ್ಯಕ್ಷೆ ಶಾಲಿನಿ,ಆಡಳಿತ ಮಂಡಳಿ-ಸಿಬ್ಬoದಿವರ್ಗ-ಷೇರುದಾರರು ಹಾಗೂ ಸಾರ್ವಜನಿಕರ ಸಹಕಾರವನ್ನು ಸ್ಮರಿಸಿದರು.
ಸಂಸ್ಥಾಪಕ ಅಧ್ಯಕ್ಷ ರಾಮಸುಬ್ರಾಯಶೇಟ್ ಮಾತನಾಡಿ ಕಳೆದ 24ವರ್ಷಗಳಿಂದ ಉತ್ತಮವಾಗಿ ಕಾರ‍್ಯನಿರ್ವಹಿಸಿಕೊಂಡು ಬರುತ್ತಿದ್ದು,25ನೆಯ ವರ್ಷದ ರಜತಮಹೋತ್ಸವವನ್ನು ಅದ್ಧೂರಿಯಾಗಿ ಅರ್ಥಪೂರ್ಣವಾಗಿ ಆಚರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕೆಂದರು.
ಹಣಕಾಸಿನ ಚಟುವಟಿಕೆಗಳ ಜೊತೆಗೆ ಸಾಂಸ್ಕತಿಕ ಹಾಗೂ ಶೈಕ್ಷಣಿಕ ಕಾರ‍್ಯಕ್ರಮವನ್ನು ಯೋಜಿಸಬೇಕು.ಆದಷ್ಟೂ ಆಡಳಿತಾತ್ಮಕ ವೆಚ್ಚವನ್ನು ಕಡಿಮೆ ಮಾಡಿ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯ ಹಾಗೂ ಷೇರುದಾರರಿಗೆ ಅಧಿಕ ಲಾಭಾಂಶ ನೀಡುವತ್ತ ಕಾರ‍್ಯಪ್ರವೃತ್ತರಾಗಬೇಕೆಂದರು.
ದೈವಜ್ಞ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ ಸಲಹೆಗಾರ ಅಶೋಕ ಆರ್.ರಾಯ್ಕರ್ ಸ್ವಾಗತಿಸಿ, ಮುಖ್ಯಕಾರ‍್ಯನಿರ್ವಹಣಾಧಿಕಾರಿ ಎಚ್.ಕೆ.ರಮೇಶ್ ಕಾರ‍್ಯಕ್ರಮ ನಿರೂಪಿಸಿದರು.ಹಿರಿಯನಿರ್ದೇಶಕ ಸಿ.ಎಲ್.ಶ್ರೀಕಾಂತ್ ವಂದಿಸಿದರು.
ಉಪಾಧ್ಯಕ್ಷ ಎಚ್.ಕೆ.ಸುರೇಶ್‌ಶೇಟ್, ನಿರ್ದೇಶಕರುಗಳಾದ ಕೆ.ವಿ.ಮಹೇಂದ್ರ, ತಾರಾಮತಿಶೇಟ್, ದೀಪಾಪ್ರಕಾಶ್, ವಿ.ರಮೇಶ್,ಸಿ.ಆರ್.ಸುಧೀರ್, ಬಿ.ಜಿ.ಪ್ರಕಾಶ್, ಕಡೂರಿನ ಕೆ.ವಿ.ಆನಂದ,ಯು.ಎಲ್.ಶ್ರೀಧರ್, ನಿರ್ವಹಣಾಧಿಕಾರಿಗಳಾದ ಎನ್.ಎಸ್.ನಾಗರಾಜ್ ಮತ್ತು ಕೆ.ಎಸ್.ಬಸವರಾಜು ವೇದಿಕೆಯಲ್ಲಿದ್ದರು.