ಚಿಕ್ಕಮಗಳೂರು-ದೇವಾಲಯಗಳು ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ಕರುಣಿಸುವ ಶ್ರದ್ದಾ ಕೇಂದ್ರಗಳು-ತಮ್ಮಯ್ಯ

ಚಿಕ್ಕಮಗಳೂರು-ದೇವಾಲಯಗಳು ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ಕರುಣಿಸುವ ಶ್ರದ್ದಾಕೇಂದ್ರಗಳು.ಗರ್ಭಗುಡಿಯಲ್ಲಿ ನೆಲೆಸಿರುವ ಪರಮಾತ್ಮನನ್ನು ಪ್ರತಿನಿತ್ಯವು ಆರಾಧಿಸುವ ಮೂಲಕ ಬದುಕಿನ ಉದ್ಬವಿಸಿರುವ ಸಂಕಟವನ್ನು ಮರೆಯಬಹುದು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಶ್ರೀಲೇಖಾ ಚಿತ್ರಮಂದಿರ ಸಮೀಪ ಶ್ರೀ ಸೋಮೇಶ್ವರ ದೇವಾಲಯ ಮತ್ತು ಸಮುದಾಯ ಭವನದ ಅಭಿವೃದ್ದಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.

ಮನುಷ್ಯನ ದಿನನಿತ್ಯ ಕೆಲಸ-ಕಾರ್ಯ ಹಾಗೂ ಕುಟುಂಬ ನಿರ್ವಹಣೆಯ ಒತ್ತಡದ ನಡುವೆ ಮಾನಸಿ ಕವಾಗಿ ನೆಮ್ಮದಿ ಕಳೆದುಕೊಳ್ಳುವುದು ಸಹಜ. ಹೀಗಾಗಿ ದೇವಾಲಯದಲ್ಲಿ ಪರಮಾತ್ಮನ ದರ್ಶನ ಹಾಗೂ ಪ್ರಾರ್ಥನೆಯಿಂದ ಸ್ವಲ್ಪಮಟ್ಟಿನ ಒತ್ತಡವು ಕಡಿಮೆಯಾಗಿ ಬದುಕು ಸಾಗಿಸಲು ಪ್ರೇರೇಪಿತವಾಗುತ್ತದೆ ಎಂದು ಹೇಳಿದರು.

ಆಧುನಿಕತೆಯ ಜಗತ್ತಿನಲ್ಲಿ ಮನುಷ್ಯನ ಜೀವನ ಅತ್ಯಂತ ವೇಗದಿಂದ ಸಾಗುತ್ತಿದೆ. ಆ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ದೇವಾಲಯಕ್ಕೆ ತೆರಳುವ ಪ್ರವೃತ್ತಿ ಮೂಡಿಸಬೇಕು. ಇದರಿಂದ ಭಾರತೀಯ ಸಂಸ್ಕೃತಿ, ಸಂಪ್ರದಾಯವನ್ನು ಅರಿಯಲು ಸಾಧ್ಯವಾಗಲಿದೆ ಎಂದರು.

ಈಗಾಗಲೇ ಸೋಮೇಶ್ವರ ದೇವಾಲಯದ ಅಭಿವೃದ್ದಿಗೆ 20 ಲಕ್ಷ ಹಾಗೂ ಸಮುದಾಯ ಭವನದ ಅಭಿವೃದ್ದಿಗೆ 10 ಲಕ್ಷ ಸೇರಿ ಒಟ್ಟು 30 ಲಕ್ಷ ರೂ.ಗಳು ಅನುದಾನವನ್ನು ಮೀಸಲಿರಿಸಿದ್ದು ಶೀಘ್ರದಲ್ಲೇ ಕಾಮ ಗಾರಿಗಳನ್ನು ಪೂರ್ಣಗೊಳಿಸಿ ಭಕ್ತಾಧಿಗಳಿಗೆ ಸಮರ್ಪಿಸಲಾಗುವುದು ಎಂದು ತಿಳಿಸಿದರು.

ಆಶ್ರಯ ಸಮಿತಿ ಸದಸ್ಯ ಎನ್.ಕೆ.ಮಧು ಮಾತನಾಡಿ, ಸೋಮೇಶ್ವರ ದೇವಾಲಯ ಅಭಿವೃದ್ದಿ ಕಾರ್ಯವನ್ನು ಅನೇಕ ವರ್ಷಗಳಿಂದ ದಾನಿಗಳು, ಸ್ಥಳೀಯರ ನೆರವಿನಿಂದ ಹಂತ ಹಂತವಾಗಿ ಪೂರ್ಣಗೊಳಿಸಲಾಗುತ್ತಿತ್ತು. ಇದೀಗ ಶಾಸಕರು ಖುದ್ದು ದೇವಾಲಯ ಅಭಿವೃದ್ದಿಗೆ ಕೈಜೋಡಿಸಿ ರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಸುಜಾತ ಶಿವಕುಮಾರ್, ಉಪಾಧ್ಯಕ್ಷೆ ಅನು ಮಧುಕರ್, ಪೌರಾ ಯುಕ್ತ ಬಿ.ಸಿ.ಬಸವರಾಜ್, ಸದಸ್ಯರಾದ ಟಿ.ರಾಜಶೇಖರ್, ವರಸಿದ್ದಿ ವೇಣುಗೋಪಾಲ್, ಮುನೀರ್ ಅಹ್ಮದ್, ಶಾದಂ, ಸಿಪಿಐ ಮುಖಂಡ ಹೆಚ್.ಎಂ.ರೇಣುಕಾರಾಧ್ಯ ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿ ತರಿದ್ದರು.

—–ಸುರೇಶ್

Leave a Reply

Your email address will not be published. Required fields are marked *

× How can I help you?