ಚಿಕ್ಕಮಗಳೂರು-ಮಹಾಡ್ ಚಳುವಳಿಯಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಬಹಿರಂಗವಾಗಿ ಮನುಸ್ಮೃತಿ ಸುಟ್ಟು ಹಾಕಿದ ದಿನವನ್ನು ದಸಂಸ ಮುಖಂಡರುಗಳು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ನೆನಪಿನ ದಿನವನ್ನಾಗಿ ಆಚರಿಸಿದರು.
ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ ಮಾತನಾಡಿದರು.
ದಸoಸ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ ಮನು ಧರ್ಮದ ಪ್ರಕಾರ ಇರುವ ಗುಲಾಮಗಿರಿ ತೊಲಗಿಸಲು ಅಂಬೇಡ್ಕರ್ ಅಂದು ಮನುಧರ್ಮ ಸುಟ್ಟು ಹಾಕಿದ ಕಾರಣ ಇಂದು ಅಸಮಾನತೆ ತೊಲಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಂಜಯ್ಯ, ಮುಖಂಡರುಗಳಾದ ಮಂಜುನಾಥ ನಂಬಿಯರ್, ಹರಿಯಪ್ಪ, ಗಂಗಾಧರ, ವೀರಭದ್ರಯ್ಯ, ಪರಮೇಶ, ಜಿಲ್ಲಾ ಸಂಘಟನಾ ಸಂ ಚಾಲಕ ರಮೇಶ್, ಸಣ್ಣಪ್ಪ, ಸಂತೋಷ, ಸಂತೋಷ ಲಕ್ಯಾ, ಆಶಾ ಇದ್ದರು.
———-ಸುರೇಶ್