ಚಿಕ್ಕಮಗಳೂರು-ಕಳಸ ತಾಲ್ಲೂಕಿನ ತನುಡಿ ಗ್ರಾಮದ ಪರಿಶಿಷ್ಟರಿಗೆ ಅರಣ್ಯ ಹಕ್ಕುಪತ್ರ ವಿತರಿಸಲು ದ.ಸಂ.ಸ ಒತ್ತಾಯ

ಚಿಕ್ಕಮಗಳೂರು-ಕಳೆದ ಎರಡು ದಶಕಗಳಿಂದ ವಾಸಿಸುತ್ತಿರುವ ಪರಿಶಿಷ್ಟ ಜನಾಂಗಕ್ಕೆ ಮೂಲ ಅರಣ್ಯ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮುಖಂಡರುಗಳು ಸೋಮವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಬಿಳೇಕಲ್ಲು ಬಾಲಕೃಷ್ಣ, ಕಳಸ ತಾಲ್ಲೂಕಿನ ತನುಡಿ ಗ್ರಾಮದಲ್ಲಿ 34 ಪರಿಶಿಷ್ಟ ಜನಾಂಗದ ಕುಟುಂಬಗಳು ಅರ್ಜಿ ಸಲ್ಲಿಸಿದ ಬಳಿಕವು ಹಕ್ಕುಪತ್ರ ವಿತರಿಸದಿರುವ ಕಾರಣ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು.

ತನುಡಿ ಗ್ರಾಮದ ಸರ್ವೆ ನಂ.36 ರಲ್ಲಿ 150 ಪ.ಜಾತಿ, ಪಂಗಡದ ಮನೆಗಳಿವೆ. ಈ ಪೈಕಿ 10ಕುಟುಂಬಕ್ಕೆ ಮೂಲಪತ್ರ ಹಾಗೂ 75 ಕುಟುಂಬಗಳಿಗೆ ಅರಣ್ಯ ಹಕ್ಕುಪತ್ರ ವಿತರಿಸಿದ್ದು ಉಳಿದ 34 ಪ.ಜಾತಿ ಕುಟುಂಬದವರಿಗೆ ಅರಣ್ಯ ಹಕ್ಕುಪತ್ರ ನೀಡಿರುವುದಿಲ್ಲ ಎಂದು ತಿಳಿಸಿದರು.

ಅರಣ್ಯ ಹಕ್ಕುಪತ್ರಕ್ಕಾಗಿ ಕಳೆದ 2001 ಇಸವಿಯಲ್ಲಿ ಫಾರಂ.53/57 ಹಾಗೂ 94ಸಿ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ನಡುವೆಯು 34 ಕುಟುಂಬಕ್ಕೆ ಯಾವುದೇ ತರಹದ ಹಕ್ಕುಪತ್ರ ವಿತರಿಸಿಲ್ಲ. ಈ ಬಗ್ಗೆ ಸಂಬoಧಿಸಿದ ಅಧಿಕಾರಿಗಳಿಗೆ ಅನೇಕ ಬಾರಿ ಅರ್ಜಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

ಹೀಗಾಗಿ ಜಿಲ್ಲಾಧಿಕಾರಿಗಳು ಉಳಿದ 34 ಕುಟುಂಬಗಳಿಗೆ ಕೂಡಲೇ ಅರಣ್ಯ ಹಕ್ಕುಪತ್ರ ನೀಡಿ ಆ ಕುಟುoಬಗಳಿಗೆ ನೆಮ್ಮದಿಯಿಂದ ಜೀವಿಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿ ಸಿದರು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಪ್ರಸನ್ನ, ಕಳಸ ತಾಲ್ಲೂಕು ಸಂಚಾಲಕ ವಸಂತ್, ಮುಖಂಡರಾದ ರಘು, ಸೀನಾ,ಲಕ್ಷ್ಮಣ್ ಮತ್ತಿತರರಿದ್ದರು.

——–ಸುರೇಶ್

Leave a Reply

Your email address will not be published. Required fields are marked *

× How can I help you?